ಮಾ.4 ರಂದು ಕೊಪ್ಪಳದಲ್ಲಿ ಅದ್ದೂರಿಯಾಗಿ ಹೋಳಿ ಹಬ್ಬ ಆಚರಣೆ : ಸಂಸದ ಹಿಟ್ನಾಳ್
Holi festival to be celebrated in Koppal on March 4th: MP Hitnal
ಕೊಪ್ಪಳ 26: ನಗರದ ಜನತೆಗೆ ಬಣ್ಣಗಳ ಹಬ್ಬ ಹೋಳಿಯ ಸಡಗರವನ್ನು ಉಣಬಡಿಸಲು ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕೊಪ್ಪಳ ಸಜ್ಜಾಗಿದ್ದು, ಇದೇ ಬರುವ ಹೋಳಿ ಹಬ್ಬದ ಪ್ರಯುಕ್ತ ದಿ.04-03-2026ರಂದು ’ಕೊಪ್ಪಳ ಹೋಳಿ ಹಬ್ಬ-2.0’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕೆ,ರಾಜಶೇಖರ್ ಹಿಟ್ನಾಳ್ ಹೇಳಿದರುಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ನಗರದ ಜನತೆ ಕುಟುಂಬ ಸಮೇತರಾಗಿ ಮತ್ತು ಸ್ನೇಹಿತರೊಂದಿಗೆ ಸುರಕ್ಷಿತವಾಗಿ ಸಡಗರದಿಂದ ಹಬ್ಬ ಆಚರಿಸಲು ಅಸೋಸಿಯೇಷನ್ ಎಲ್ಲಾ ಸಿದ್ಧತೆಗಳನ್ನು ಈ ಬಾರಿಯ ಹೋಳಿ ಆಚರಣೆಯು ಹತ್ತು ಹಲವು ವಿಶೇಷತೆಗಳಿಂದ ಕೂಡಿದ್ದು, ಸಾರ್ವಜನಿಕರ ಮನರಂಜನೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಕಾರ್ಯಕ್ರಮದಲ್ಲಿ ಖ್ಯಾತ ಡಿಜೆ ಅಪರೇಟರ್ ನಕುಲ್ ಅವರ ಬಡಿತಕ್ಕೆ ಮಳೆ ನೃತ್ಯದೊಂದಿಗೆ ಹೆಜ್ಜೆ ಹಾಕಲು ವಿಶೇಷ ವ್ಯವಸ್ಥೆ ಮಾಡಲಾಗಿದೆ,ಕಾರ್ಯಕ್ರಮದ ಮೆರುಗು ಹೆಚ್ಚಿಸಲು ನಾಡಿನ ಖ್ಯಾತ ನಿರೂಪಕರು ಇಡೀ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನೃತ್ಯ ಮಾಡಲು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ,ಕಾರ್ಯಕ್ರಮದಾದ್ಯಂತ ಸಾರ್ವಜನಿಕರ ಸುರಕ್ಷತೆಗಾಗಿ ಸಿಸಿ ಟಿವಿ ನಿಗಾ ಕ್ಯಾಮೆರಾಗಳನ್ನು ಇರಿಸಲಾಗುವುದು ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ರುಚಿಕರವಾದ ಬೆಳಗಿನ ಉಪಹಾರ, ಊಟ, ಹಣ್ಣುಗಳ ವ್ಯವಸ್ಥೆ ಹಾಗೂ ಹಬ್ಬದ ಆಚರಣೆಗೆ ಬೇಕಾದ ಬಣ್ಣಗಳನ್ನು ಅಸೋಸಿಯೇಷನ್ ವತಿಯಿಂದ ಒದಗಿಸಲಾಗುವುದು.ಕೊಪ್ಪಳದ ಜನತೆಗೆ ಒಂದೇ ಕಡೆ ಸುರಕ್ಷಿತವಾಗಿ ಹೋಳಿ ಆಚರಿಸಲು ಈ ವೇದಿಕೆ ಸಿದ್ಧಪಡಿಸಲಾಗಿದೆ,ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ನಾವು ಹೆಚ್ಚಿನ ಒತ್ತು ನೀಡಿದ್ದೇವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಂಭ್ರಮದಲ್ಲಿ ಹೋಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಅಥ್ಲೆಟಿಕ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶ್ರೀನಿವಾಸ್ ಗುಪ್ತಾ, ವಿಶ್ವನಾಥ್ ರಾಜು, ರಾಮಣ್ಣ ಹದ್ದಿನ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 