ನಾಳೆ ರನ್ನ ಬೆಳಗಲಿಯಲ್ಲಿ ಐತಿಹಾಸಿಕ ಕುಂಭಮೇಳ
Historic Kumbh Mela at Ranna Belagali tomorrow
ನಾಳೆ ರನ್ನ ಬೆಳಗಲಿಯಲ್ಲಿ ಐತಿಹಾಸಿಕ ಕುಂಭಮೇಳ
ರನ್ನ ಬೆಳಗಲಿ 16: ಶ್ರೀ ಚಕ್ರ ಪುರವಾಸಿನಿ ಚಕ್ರೇಶ್ವರ ಜ್ಯೋತಿರ್ ವಿಜ್ಞಾನ ಸಂಶೋಧನಾ ಕೇಂದ್ರ ಪುಣ್ಯಕೋಟಿ ಸಿದ್ದಾಶ್ರಮ ರನ್ನ ಬೆಳಗಲಿಯಲ್ಲಿ ನಾಡಹಬ್ಬ ದಸರಾ ಹಾಗೂ ನವರಾತ್ರಿ ಉತ್ಸವ ಪ್ರಯುಕ್ತ ಆದಿಶಕ್ತಿ ಭುವನೇಶ್ವರಿ ಬೆಟ್ಟದ ಭುವನೋತ್ಸವ ಹಾಗೂ ಬೃಹತ್ ಐತಿಹಾಸಿಕ ಕುಂಭಮೇಳವು ಗುರುವಾರ ದಿ. ಸೆಪ್ಟೆಂಬರ್ 18 2025ರಂದು ನಡೆಯಲಿದ್ದು ಮತ್ತು ಮತ್ತು ಆಶ್ರಮದಲ್ಲಿ ನವರಾತ್ರಿ ಹಾಗೂ ದಸರಾ ಹಬ್ಬದ ನಿಮಿತ್ಯವಾಗಿ ಶ್ರೀದೇವಿ ಪುರಾಣ ಹಾಗೂ ಪ್ರವಚನ ಹಮ್ಮಿಕೊಂಡಿದ್ದು, ಶುಭ ಬ್ರಾಹ್ಮೀ ಮುಹೂರ್ತದಲ್ಲಿ ಆದಿಶಕ್ತಿ ಭುವನೇಶ್ವರಿ ಬೆಟ್ಟದ ಭುವನೋತ್ಸವ ಹಾಗೂ ಬೃಹತ್ ಐತಿಹಾಸಿಕ ಕುಂಭಮೇಳ ಹಾಗೂ ಮಹಾ ಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದ್ದು ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಜಂಬೂ ಸವಾರಿ ಹಾಗೂ ಕುದುರೆ ಕುಣಿತ ವೀರಗಾಸೆ, ನೃತ್ಯದೊಂದಿಗೆ 5008 ಕುಂಭಮೇಳ ಉತ್ಸವ ಸಕಲ ಮುತ್ತೈದೆಯರ ಸಮ್ಮುಖದಲ್ಲಿ ಶ್ರೀದೇವಿಯ ಮೂರ್ತಿ ಮೆರವಣಿಗೆಯು ಪೂಜ್ಯ ಪಂಚಪೀಠ ಜಗದ್ಗುರುಗಳ ಸಮ್ಮುಖದಲ್ಲಿ ಜರುಗುವುದು.
ತದನಂತರ ಸಾಮೂಹಿಕ ಉಡಿತುಂಬುವ ಕಾರ್ಯಕ್ರಮ ನಡೆಯಲಿದ್ದು, ಪೂಜ್ಯ ಪಂಚಪೀಠ ಜಗದ್ಗುರುಗಳ ದಿವ್ಯ ಆಶೀರ್ವಚನ ನಂತರ ಮಹಾಪ್ರಸಾದ ಜರುಗುತ್ತದೆ. ತದನಂತರ ನಾಡಿನ ಹೆಸರಾಂತ ಕಲಾವಿದರಿಂದ ಅದ್ದೂರಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಪುಣ್ಯಕೋಟಿ ಆಶ್ರಮದ ಶ್ರೀಗಳಾದ ಡಾ. ರಮೇಶ್ ಕುಮಾರ್ ಶಾಸ್ತ್ರಿಯವರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 