ವಿವಿಧ ಸ್ಥಳಗಳಲ್ಲಿ ಹಿಂದೂ ಸಮಾವೇಶಗಳನ್ನು ಮಾಡಲಾಗುತ್ತಿದೆ: ರಾಘವೇಂದ್ರ
Hindu conventions are being held at various places: Raghavendra
ರಾಯಬಾಗ, 24 : ರಾಷ್ಟ್ರೀಯ ಸ್ವಯಂ ಸಂಘ ಸ್ಥಾಪನೆಗೊಂಡು ನೂರು ವರ್ಷ ಕಳೆದ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದ ಒಂದು ಸಾವಿರ ಕಡೆಗಳಲ್ಲಿ ಹಿಂದೂ ಸಮಾವೇಶಗಳನ್ನು ಮಾಡಲಾಗುತ್ತಿದೆ ಎಂದು ಆರ್.ಎಸ್.ಎಸ್ ಪ್ರಮುಖ ರಾಘವೇಂದ್ರ ಕಾಗವಾಡ ಹೇಳಿದರು.
ಶುಕ್ರವಾರ ಸಾಯಂಕಾಲ ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಆಯೋಜಿಸಿದ್ದ ಹಿಂದೂ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಮನೆಗಳಲ್ಲಿ ಹಿರಿಯರು ಮತ್ತು ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಆಚಾರ, ವಿಚಾರ, ಗುರು ಹಿರಿಯರನ್ನು ಗೌರವಿಸುವದನ್ನು ಕಲಿಸಬೇಕು. ಇಂದಿನ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಟಿವ್ಹಿ, ಮೊಬೈಲ ಗೀಳಿಗೆ ಅಂಟಿಕೊಂಡು ನಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ನಮ್ಮದು ಹಿಂದೂ ದೇಶವಾಗಿರುವುದರಿಂದ ಪ್ರತಿಯೊಬ್ಬರೂ ಹಿಂದೂ ಸಂಸ್ಕಾರವನ್ನು ರೂಢಿಸಿಕೊಂಡು ನಾವು ಹಿಂದೂ ದೇಶದ ಪ್ರಜೆಗಳು ಎನ್ನುವುದನ್ನು ಜಗತ್ತಿಗೆ ತಿಳಿಸಬೇಕಾಗಿದೆ ಎಂದು ಹೇಳಿದರು.
ದೇಶದ ಪ್ರತಿ ಗ್ರಾಮಗಳಲ್ಲಿ, ಪ್ರತಿ ಓಣಿಗಳಲ್ಲಿ ಹಿಂದೂಪರ ಸಂಘಟನೆಗಳನ್ನು ಕಟ್ಟಿ ಬೆಳೆಸಬೇಕಾಗಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿರುವುದರಿಂದ ಮನೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು ಮುಖ್ಯವಾಗಿದೆ. ಮುಂದಿನ ಜನಾಂಗಕ್ಕೆ ಶುದ್ದ ಕುಡಿಯುವ ನೀರು, ಪರಿಶುದ್ದವಾದ ಗಾಳಿ ದೊರಕಬೇಕಾದರೆ ಅರಣ್ಯ ರಕ್ಷಣೆ ಮಾಡಬೇಕು ಹಾಗೂ ತಾಯಿಗೆ ಸಮಾನವಾಗಿ ಗೋ-ಮಾತೆ ಎಂದು ಕರೆಯುವ ಗೋವುಗಳನ್ನು ಪೂಜಿಸುವುದು ನಮ್ಮ ಹಿಂದೂ ಸಂಸ್ಕಾರ ಎಂದು ಅಭಿಪ್ರಾಯ ಪಟ್ಟರು.
ಶೋಭಾ ಯಾತ್ರೆಯು ಪಟ್ಟಣದ ಅಂಬಾ ಭವಾನಿ ಮಂದಿರದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾವೀರ ಭವನದ ಆವರಣದಲ್ಲಿ ಸಮಾವೇಶಗೊಂಡಿತು. ಶಶಿಕಾಂತ ಗುರೂಜಿ, ಭರತೇಶ ಬನವಣೆ, ವೀರಭದ್ರ ಸ್ವಾಮೀಜಿ, ವೈಭವಿ ಕುಲಕರ್ಣಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಡಿ.ಎಮ್.ಐಹೊಳೆ, ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ, ಅನಂತಾನಂದ ಸ್ವಾಮೀಜಿ, ಧೂಳಗೌಡಾ ಪಾಟೀಲ, ಸದಾಶಿವ ದೇಸಿಂಗೆ, ಪೃಥ್ವಿರಾಜ ಜಾಧವ, ಸದಾಶಿವ ಘೋರೆ್ಡ, ಸದಾನಂದ ಹಳಿಂಗಳಿ, ಶ್ರೀಮಂತ ಸಲಗರೆ, ಶಿವಾನಂದ ಐಹೊಳೆ, ಅಣ್ಣಾಸಾಹೇಬ ಖೆಮಲಾಪುರೆ, ನಿಂಗಪ್ಪ ಪಕಾಂಡಿ, ವೆಂಕಟೇಶ ದೇಶಪಾಂಡೆ, ಕಾಡಯ್ಯಾ ಹಿರೇಮಠ, ರಮೇಶ ಗಾಯಕವಾಡ, ಕಿರಣ ಕಲ್ಲೋಳಕರ, ವಸಂತ ಕಾಂಬಳೆ, ಮಹೇಶ ಕರಮಡಿ, ರಾಜಶೇಖರ ಖನದಾಳೆ, ಕಲ್ಯಾಣರಾವ ದೇಶಪಾಂಡೆ, ರಮೇಶ ತೇಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 