ಶಿಗ್ಗಾವಿ ಪಟ್ಟಣದಲ್ಲಿ ಮಾ 1 ರಂದು ಹಿಂದೂ ಸಮ್ಮೇಳನ ಆಯೋಜನೆ

ಶಿಗ್ಗಾವಿ ಪಟ್ಟಣದಲ್ಲಿ ಮಾ 1 ರಂದು ಹಿಂದೂ ಸಮ್ಮೇಳನ ಆಯೋಜನೆ  Hindu conference to be organized in Shiggavi town on March 1

ಶಿಗ್ಗಾವಿ 27 : ಪಟ್ಟಣದಲ್ಲಿ ಇದೇ ಮಾ 1 ರಂದು ರವಿವಾರ ದಿವಸ ಹಿಂದೂ ಸಮ್ಮೇಳನ ಸಮೀತಿಯ ವತಿಯಿಂದ ಶಿಗ್ಗಾವಿ ಹೊಬಳಿ ಮಟ್ಟದ ಹಿಂದೂ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಹಿಂದೂ ಸಮ್ಮೇಳನ ಸಮೀತಿಯ ಕಾರ್ಯದರ್ಶಿ ರಾಘವೇಂದ್ರ ದೇಶಪಾಂಡೆ ತಿಳಿಸಿದರು. ಪಟ್ಟಣದ ವಿರಕ್ತಮಠದಲ್ಲಿ ಹಿಂದೂ ಸಮ್ಮೇಳನ ಸಮೀತಿಯ ವತಿಯಿಂದ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ಮುಖ್ಯವಾಗಿ ಎರಡು ಕಾರ್ಯಕ್ರಮಗಳು ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ಜರುಗಲಿವೆ, ಶೋಭಾಯಾತ್ರೆಯು ಪಟ್ಟಣದ ಪಾದಗಟ್ಟಿಯಿಂದ ಅಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಿ ಮಾರ್ಕೇಟ್ ಮಾರ್ಗವಾಗಿ ಚನ್ನಮ್ಮನ ವೃತ್ತಕ್ಕೆ ಆಗಮಿಸಿ ಸಂತೆ ಮೈಧಾನದಲ್ಲಿ ಸಮಾಪ್ತಿಗೊಳ್ಳಲಿದೆ,

ನಂತರ ಸಭಾ ಕಾರ್ಯಕ್ರಮ ಜರುಗಲಿದೆ, ವಿಶೇಷವಾಗಿ ಶೋಭಾ ಯಾತ್ರೆಯಲ್ಲಿ ಹಿಂದೂ ಧರ್ಮದ ಎಲ್ಲ ಸಮೂದಾಯದವರು ಪಾಲ್ಗೊಳ್ಳಲಿದ್ದಾರೆ, ಹಿಂದೂ ವೀರ ಪುರಷರ ಭಿತ್ತಿ ಚಿತ್ರಗಳು, ವಿವಿಧ ಸಮೂದಾಯಗಳ ಸಂಪ್ರದಾಯ ಉಡುಗೆಗಳು, ವಿವಿಧ ಪ್ರಕಾರದ ಕಲೆಗಳು ಸೇರಿದಂತೆ ಮಹಿಳೆಯರ ಕುಂಭಮೇಳದೊಂದಿಗೆ ವೈವಿಧ್ಯಮಯವಾದ ಶೋಭಾ ಯಾತ್ರೆ ಜರುಗಲಿದೆ, ಸಂಜೆ 6 ಗಂಟೆಗೆ ಸಂತೆ ಮೈಧಾನದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ, ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹಾಗೂ ರಾಣೆಬೆನ್ನೂರಿನ ಹಿರೇಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿದ್ಯ ವಹಿಸಿಕೊಳ್ಳಲಿದ್ದಾರೆ,

ದಿಕ್ಸೂಚಿ ಭಾಷಣಕಾರರಾಗಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಹೊಸಕೇರಾ ಆಗಮಿಸಲಿದ್ದಾರೆ, ಈಗಾಗಲೇ ಎಲ್ಲ ಸಮಾಜದ ಮುಖಂಡರ ಜೊತೆ ಮಾತನಾಡಿದ್ದೇವೆ ಮತ್ತು ನಮ್ಮ ಸಂಪರ್ಕಕ್ಕೆ ಸಿಗದೇ ಉಳಿದ ಸಮಾಜಗಳ ಮುಖಂಡರು ಇದನ್ನೆ ಆಹ್ವಾನವೆಂದು ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಿಂದೂ ಸಮ್ಮೇಳವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಹಿಂದೂ ಸಮ್ಮೇಳನ ಸಮೀತಿಯ ಗೌರವಾಧ್ಯಕ್ಷ ಬಸವರಾಜ ಹೆಸರೂರ, ಅಧ್ಯಕ್ಷ ಶಶಿಧರ ಸುರಗಿಮಠ, ಉಪಾದ್ಯಕ್ಷರಾದ ಸಂಜನಾ ರಾಯ್ಕರ, ಸದಸ್ಯ ಮಂಜುನಾಥ ಅಸ್ವಾಲೇಕರ ಸೇರಿದಂತೆ ಇತರರಿದ್ದರು.