ಹಿಂದೂ ಸಮ್ಮೇಳನ ಕಾರ್ಯಕ್ರಮಕ್ಕೆ ಜ್ಯೊತಿ ಬೆಳಗುವ ಮೂಲಕ ಚಾಲನೆ
Hindu Sammelana program kicks off with lighting of lamp
ಕಂಪ್ಲಿ 24: ಪ್ರತಿಯೊಬ್ಬರೂ ಸಮಾಧಿಯ ಚಿಂತನೆ ಮಾಡದೇ ಸಮಾಜದ ಚಿಂತನೆ ಮಾಡಿದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯವೆಂದು ಕೊಟ್ಟೂರು ಸಂಸ್ಥಾನ ಮಠದ ಕುರುಗೊಡು ಮತ್ತು ಗರಗ ನಾಗಲಾಪುರ ಶಾಖಮಠಗಳ ಪೀಠಾಧಿಪತಿ ಶ್ರೀ ನಿರಂಜನ ಪ್ರಭುಸ್ವಾಮಿಗಳು ತಿಳಿಸಿದರು. ಅವರು ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಕಂಪ್ಲಿ ಮಂಡಲ ಹಿಂದೂ ಸಮ್ಮೇಳನ ಸಮಿತಿ ಏರಿ್ಡಸಿದ್ದ ಹಿಂದೂ ಸಮ್ಮೇಳನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ, ಸನಾತನ ಪರಂಪರೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೇ ನಮ್ಮ ಸನಾತನ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಹಿಂದೂ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಕ್ತಾರರಾದ ಕೇಶವ ಜೀ ಮಾತನಾಡಿ, ಗ್ರಾಮಗಳಲ್ಲಿ ಹಿಮದೂ ಸಮ್ಮೇಳನಗಳನ್ನು ಏರಿ್ಡಸಲಾಗುತ್ತಿದೆ. ಇಡೀ ಹಿಂದೂ ಸಮಾಜವನ್ನು ಒಂದು ಗೂಡಿಸುವ ಏಕೈಕ ಉದ್ದೇಶವೇ ಈ ಹಿಂದೂ ಸಮ್ಮೇಳನದ ಮೂಲುದ್ದೇಶವಾಗಿದೆ ಎಂದರು. ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಎಚ್.ಶಿವಶಂಕರಗೌಡ, ಹಿಂದೂ ಸಮ್ಮೇಳನ ಸಮಿತಿ ಮಂಡಲ ಅಧ್ಯಕ್ಷ ಎನ್.ಎಂ.ಪತ್ರೆಯ್ಯಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಕರಿಬಸವಯ್ಯಸ್ವಾಮಿ ಇದ್ದರು. ಎಸ್.ರೇಣೂಕಾರಾಜ್ ಸ್ವಾಗತಿಸಿದರೆ, ರಾಜು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಸಮಾಜಗಳ ಮುಖಂಡರು, ಯುವಕರು, ಮಹಿಳೆಯರು, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 