ಹಿಂದಿ ಅಂತರಾಷ್ಟ್ರೀಯ ಭಾಷೆ: ಕುಲಕರ್ಣಿ

ಹಿಂದಿ ಅಂತರಾಷ್ಟ್ರೀಯ ಭಾಷೆ: ಕುಲಕರ್ಣಿ Hindi is an international language: Kulkarni

ಹಿಂದಿ ಅಂತರಾಷ್ಟ್ರೀಯ ಭಾಷೆ: ಕುಲಕರ್ಣಿ 

ವಿಜಯಪುರ 14: ನಗರದ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದಿ. 14ರಂದು ಹಿಂದಿ ದಿವಸ ಆಚರಣೆ ಮಾಡಲಾಯಿತು.  

ಸುಲಲಿತವಾಗಿ ಶುದ್ಧ ಹಿಂದಿ ಮಾತನಾಡುವ ಶಾಲೆಯ ಚಿಕ್ಕ ಮಕ್ಕಳು ಮತ್ತು ಕಾರ್ಯಕ್ರಮದ ಎಲ್ಲ ಗಣ್ಯರಿಂದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಹಿಂದಿ ಉಪನ್ಯಾಸಕ ಜಯಪ್ರಕಾಶ ಯಾದವ ಅವರು ಮಾಡಿದರು. 

ಕಾಲೇಜಿನ ಪ್ರಾಚಾರ್ಯ ಟಿ. ಆರ್‌. ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹಿಂದಿ ಭಾಷೆ ಅಂತರಾಷ್ಟ್ರೀಯ ಭಾಷೆಯಾಗಿದೆ, ಇಂದಿನ ದಿನಮಾನಗಳಲ್ಲಿ ದೇಶದ ಏಕತಾ ಮತ್ತು ಭಾವನಾತ್ಮಕವಾಗಿ ಜನರನ್ನು ಒಂದು ಗೂಡಿಸಲು ಎಲ್ಲರೂ ಹಿಂದಿ ಕಲಿಯಬೇಕು ಮತ್ತು ಕಲಿತವರು ಹಿಂದಿ ಭಾಷೆಯನ್ನು ಕಲಿಸಬೇಕು ಎಂದು ಕರೆ ನೀಡಿದರು.  

ಮುಖ್ಯ ಅತಿಥಿಗಳಾಗಿ ಕೆ. ಡಿ. ಚವ್ಹಾಣ ಅವರು ಮಾತನಾಡಿ ವಿಶ್ವದಲ್ಲಿ ಇಂಗ್ಲೀಷ್ ಮತ್ತು ಚೈನೀಸ್ ಭಾಷೆಗಳ ನಂತರ ಹಿಂದಿ ಭಾಷೆ ಅತೀ ಹೆಚ್ಚು ಬಳಕೆಯಲ್ಲಿದ್ದು, ಎಲ್ಲಾ ದೇಶ-ವಿದೇಶ, ವಿಶ್ವವಿದ್ಯಾಲಯಗಳು ಹಿಂದಿ ಭಾಷೆಯನ್ನು ಕಲಿಸಲು ಮುಂದೆ ಬರುತ್ತಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಅತಿಥಿಗಳಾದ ಎಂ. ಎಸ್‌. ಬಿರಾದಾರ ಮತ್ತು ಗುರುರಾಜ ಕುಲಕರ್ಣಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಅಶೋಕ ಸಣ್ಣಿಂಗಮ್ಮನವರ ಹಾಗೂ ನಾಗರಾಜ ಎ. ರವರು ಹಿಂದಿ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. 

ನಿರೂಪಣೆ ಮತ್ತು ವಂದನಾರೆ​‍್ಣ ಕಾಲೇಜಿನ ಹಿಂದಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿದರು. ಎಲ್ಲ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಹಿಂದಿ ದಿವಸದ ಅಂಗವಾಗಿ ಹಿಂದಿ ಉಪನ್ಯಾಸಕರು ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು.