ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

  ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ   High School Annual Friendship Conference


ತಾಂಬಾ  01: ಮಕ್ಕಳು ದೇಶದ ಆಸ್ತಿ ಡಾಕ್ಟರ್, ಇಂಜಿನಿಯರ್ ಆದರೆ ಸಾಲದು ಎಲ್ಲ ರಂಗಗಳಲ್ಲಿ ಸಾಧನೆ ಮಾಡಬೇಕು ಮಕ್ಕಳಿಗೆ ವಿದ್ಯಾಭ್ಯಾಸದ ಜೋತೆಗೆ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ತೋಡಗಿಕೊಳ್ಳುವಂತೆ ಪ್ರೇರೆಪಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ, ಆ ನೀಟ್ಟಿನಲ್ಲಿ ಭೋದನೆ ಮಾಡುವದು ಮುಖ್ಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಬೀಮಾಶಂಕರ ಕನ್ನೂರ ಹೇಳಿದರು. 

ಗ್ರಾಮದ ಶ್ರೀ ಬಸವೇಶ್ವರ ಹೀರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಗಳು ಕೇವಲ ಮಾಹಿತಿ ತುಂಬುವ ಕೇಂದ್ರಗಳಲ್ಲ ಬದಲಾಗಿ ಸುಖ-ದುಃಖಗಳನ್ನು ಎದುರಿಸಬಲ್ಲ ಯೋಗ್ಯ ಪ್ರಜೆಗಳನ್ನು ಸಮಾಜಕ್ಕೆ ಕೊಡಿಗೆಯಾಗಿ ನೀಡುವ ಸ್ಥಳಗಳಾಗಿವೆ. ಆ ನೀಟ್ಟಿನಲ್ಲಿ ಶ್ರೀ ಬಸವೇಶ್ವರ ವಿದ್ಯಾವರ್ದಕ ಸಂಘ ನಿಜಕ್ಕೂ ಫಲಪ್ರದ ಹೆಜ್ಜೆಗಳನ್ನು ಇಡುತ್ತಿದೆ. ಇಲ್ಲಿ ಕಲಿತ ಮಕ್ಕಳ ಸಾಧನೆ ಅಪರಿಮಿತ ವಾದದ್ದು ಎಂದರು. 

ಮುಖ್ಯ ಅಧಿತಿಗಳಾದ ಜಿಲ್ಲಾ ಶಿರಸ್ತೆದಾರ ಸಚಿದಾನಂದ ತೆರದಾಳ, ಅಧ್ಯಕ್ಷತೆ ವಹಿಸದ ಪ್ರಾಚಾರ್ಯ ಜಿ.ಎಮ್‌.ಗುಳಗಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಧರ ನಡಗಡ್ಡಿ ಮಾತನಾಡಿದರು. ಎಸ್‌ವ್ಹಿವ್ಹಿ ಸಂಘದ ನಿರ್ದೇಶಕ ಅಪ್ಪಣ್ಣ ಕಲ್ಲೂರ, ಗ್ರಾಪಂ ಅಧ್ಯಕ್ಷ ಆಸ್ಮಾ ರಜಾಕ ಚಿಕ್ಕಗಸಿ, ಬಿಜೆಪಿ ಹಿರಿಯ ಮುಖಂಡ ಜಿ.ವಾಯ್‌.ಗೊರನಾಳ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ತಾಪಂ ಮಾಜಿ ಸದಸ್ಯ ಪ್ರಕಾಶ ಮುಂಜಿ, ರಾಚಪ್ಪ ಗಳೇದ, ಆರ್‌.ಎಸ್‌.ಪೂಜಾರಿ, ಬಾಬು ರೂಗಿ, ಸಿದ್ದು ಹತ್ತಳ್ಳಿ, ಎಸ್‌.ಆರ್‌.ಚಾಳಿಕಾರ ಸೇರಿದಂತೆ ಮತ್ತಿತರರು ವೇದಿಕೆಯಮೇಲೆ ಇದ್ದರು. 

ಸಂಗೀತದಲ್ಲಿ ಸಾಧನೆ ಮಾಡಿದ ಕು.ಜಾನವಿ ದುದ್ದಗಿ, ಆದರ್ಶ ಶಿಕ್ಷಕಿ ಪ್ರಶಸ್ತಿ ಪಡೆದ ಎಸ್‌.ಎಸ್‌.ಚವ್ಹಾಣ, ಮುರಾರ್ಜಿ ವಸತಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿ ಶ್ರೀವರ್ಧನ್ ಪೂಜಾರಿ, ಸಿಂಚನಾ ಬರಡೋಲ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತ್ತು. ಶಿಕ್ಷಕ ಕೆ.ಕೆ.ಕನ್ನೂರ, ಬಿ.ಬಿ.ಭರಮಣ್ಣ, ಕವೀತಾ ಭರಮಣ್ಣ ಕಾರ್ಯಕ್ರಮ ನಿರ್ವಹಿಸಿದರು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.