ಎಸ್ ಆರ್.ಪಾಟೀಲ ಮೆಡಿಕಲ್ ಕಾಲೇಜನಲ್ಲಿ ಹೈಟೆಕ್ ಎಂಡೋಸ್ಕೋಪಿ ಸೌಲಭ್ಯ
Hi-tech endoscopy facility at S.R. Patil Medical College
ಬೀಳಗಿ 25 : ಈ ಭಾಗದ ಜನಸಾಮಾನ್ಯರು ಆರ್ಥಿಕವಾಗಿ ಮತ್ತು ಆರೋಗ್ಯವಾಗಿ ಇರಬೇಕು. ಅವರಿಗೆ ಕೈಗೆಟಕುವ ರೀತಿಯಲ್ಲಿ ಆರೋಗ್ಯ ಸಿಗಬೇಕು. ರೋಗಿಗಳ ಆಯಾ ರೋಗವನ್ನು ಪತ್ತೆ ಹಚ್ಚಲು ಹೈಟೆಕ್ ಎಂಡೋಸ್ಕೋಪಿ ಸೌಲಭ್ಯ ಒದಗಿಸಲಾಗಿದ್ದು ಈ ಭಾಗದ ಜನರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಎಸ್.ಆರ್.ಪಾಟೀಲ್ ಮೆಡಿಕಲ್ ಕಾಲೇಜು ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಸ್.ಆರ್.ಪಾಟೀಲ ಹೇಳಿದರು. ತಾಲೂಕಿನ ಬಾಡಗಂಡಿ ಎಸ್ ಆರ್.ಪಾಟೀಲ ಮೆಡಿಕಲ್ ಕಾಲೇಜ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಎಂಡೋಸ್ಕೋಪಿ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಆಧುನಿಕ ವೈದ್ಯಕೀಯ ಎಲ್ಲ ಮೂಲ ಸೌಕರ್ಯ ದೊರೆಯುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇಲ್ಲಿ ಕಾರ್ಯನಿರ್ವಹಿಸುವ ಹಿರಿಯ ಅಧಿಕಾರಿಗಳು ಮತ್ತು ವೈದ್ಯರು ರೋಗಿಗಳೊಂದಿಗೆ ಉತ್ತಮ ಬಾಂಧ್ಯವ ಹೊಂದುವ ಮೂಲಕ ತಮ್ಮ ಸೇವೆ ಮಾಡುತ್ತಿದ್ದಾರೆ ಎಂದರು. ವೈದ್ಯಕೀಯ ಅಧೀಕ್ಷಕರಾದ ಡಾ.ವಿಜಯಾನಂದ ಹಳ್ಳಿ ಮಾತನಾಡಿ, ಹೊಸ ಎಂಡೋಸ್ಕೋಪಿ ಘಟಕವು ಅತ್ಯಾಧುನಿಕ ಹೈ-ಡೆಫಿನಿಷನ್ ಇಮೇಜಿಂಗ್ ವ್ಯವಸ್ಥೆ ಮತ್ತು ಪ್ರಸ್ತುತ ವೈದ್ಯಕೀಯ ಮಾನದಂಡಗಳಿಗೆ ಅನುಗುಣವಾದ ಸಾಧನಗಳಿಂದ ಸಜ್ಜುಗೊಂಡಿದೆ ಎಂದು ಹೇಳಿದರು. ಮೇಲ್ಜಠರ ಎಂಡೋಸ್ಕೋಪಿ, ಕೊಲೊನೋಸ್ಕೋಪಿ ಸೇರಿದಂತೆ ಹಲವು ಅಲ್ಪ ಆಕ್ರಮಣಕಾರಿ ಪರೀಕ್ಷೆಗಳು ಈಗ ಆಸ್ಪತ್ರೆಯಲ್ಲೇ ಲಭ್ಯವಿರುವುದರಿಂದ ರೋಗಿಗಳನ್ನು ಬೇರೆ ಕೇಂದ್ರಗಳಿಗೆ ಕಳುಹಿಸುವ ಅಗತ್ಯ ಕಡಿಮೆಯಾಗಲಿದೆ ಎಂದರು. ಆಡಳಿತಾಧಿಕಾರಿ ಡಾ.ರಾಘವೇಂದ್ರ ಪಾಟೀಲ ಮಾತನಾಡಿ, ಸಮಗ್ರ ಹಾಗೂ ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆ ನಿರಂತರವಾಗಿ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದರು.
ಎಂಡೋಸ್ಕೋಪಿ ಡಾ.ಆಯ್ ಬಿ ಕಲಬುರಗಿ ಮಾತನಾಡಿ, ಬಾಡಗಂಡಿಯ ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಮೂಲಭೂತ ಸೌಲಭ್ಯವುಳ್ಳ ಹೈಟೆಕ್ ಆಸ್ಪತ್ರೆ ತೆರೆದು ಈ ಭಾಗದ ಬಡಜನರಿಗೆ ಹೆಚ್ಚಿನ ಅನುಕೂಲ ಮಾಡಿದ್ದಾರೆ. ಇಂಡೋಸ್ಕೋಪಿಯಿಂದ ಎಂಡೋಸ್ಕೋಪಿ ಈ ಕೆಳಗಿನ ಕಾಯಿಲೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ: ಜೀಣಾಂರ್ಗ ವ್ಯವಸ್ಥೆ (ಅನ್ನನಾಳ, ಹೊಟ್ಟೆ, ಕರುಳುಗಳು) ಉಸಿರಾಟದ ವ್ಯವಸ್ಥೆ (ಶ್ವಾಸನಾಳ ಮತ್ತು ಶ್ವಾಸಕೋಶಗಳು) ಮೂತ್ರನಾಳ ಹೆಣ್ಣು ಸಂತಾನೋತ್ಪತ್ತಿ ಅಂಗಾಂಗಳು ಕೀಲುಗಳು ಮತ್ತು ಕಿಬ್ಬೊಟ್ಟೆಯ ಕುಹರ ರೋಗನಿರ್ಣಯ ಮತ್ತು ಚಿಕಿತ್ಸೆ ಎರಡಕ್ಕೂ ಇದು ಸುರಕ್ಷಿತ, ತ್ವರಿತ ಮತ್ತು ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ದೇಹದ ಆಂತರಿಕ ಅಂಗಗಳು, ಅಂಗಾಂಶಗಳು ಅಥವಾ ನಾಳಗಳನ್ನು ವಿಕ್ಷೀಸಲು ಅಥವಾ ಕಾರ್ಯನಿರ್ವಹಿಸಲು ಇದನ್ನು ಬಳಸಲಾಗುತ್ತದೆ. ಇದರಿಂದ ರೋಗಿಗಳ ಆರೋಗ್ಯ ತಪಾಸಣೆಗೆ ಹೆಚ್ಚು ಅನುಕೂಲವಾಗಿದೆ ಎಂದರು. ಕಾರ್ಯದರ್ಶಿ ಎಮ್ ಎನ್ ಪಾಟೀಲ್, ಉಪಾಧ್ಯಕ್ಷೆ ಅನುಷಾ ನಾಡಗೌಡ, ರಾಹುಲ್ ನಾಡಗೌಡ, ಡಾ.ಕಿರಣ್ ಜಮಖಂಡಿ, ಡಾ.ಎಂ ಐ.ವಾಲಿಕಾರ, ಡಾ.ಶಬರೀಶ್ ಜಿ.ಎಂ ಸೇರಿದಂತೆ ಹಿರಿಯ ವೈದ್ಯರು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 