ಹಳೆಗನ್ನಡ ಕಲಿಕೆ ಭಾಷೆಯ ಸೊಗಡು ಅರಿಯಲು ಸಹಾಯ: ಡಾ.ಎ.ಮುರಿಗೆಪ್ಪ

ಲೋಕದರ್ಶನ ವರದಿ

ಕಂಪ್ಲಿ11:ಹಳೆಗನ್ನಡ ಕಲಿತಾಗ ಮಾತ್ರ ಭಾಷೆಯ ಸೊಗಡು ಅರಿಯಲು ಸಾಧ್ಯ  ಎಂದು  ಬೆಂಗಳೂರು ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಹೇಳಿದರು. 

ತಾಲ್ಲೂಕು ಸಮೀಪದ ರಾಮಸಾಗರ ಗ್ರಾಮದ ಸಕರ್ಾರಿ ಪ್ರೌಢಶಾಲೆ ಆವರಣದಲ್ಲಿ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಸ್ತಪ್ರಶಾಸ್ತ್ರ ವಿಭಾಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಬಳ್ಳಾರಿ ಕನ್ನಡ ಭಾಷಾ ಶಿಕ್ಷಕರ ಸಂಘ ಸಹಯೋಗದಲ್ಲಿ ಡಾ.ಡಿ.ಎಲ್.ನರಸಿಂಹಚಾರ್ ದತ್ತಿನಿಧಿ ಅಂಗವಾಗಿ ನಾಲ್ಕು ದಿನಗಳ ಹಳಗನ್ನಡ ಸಾಹಿತ್ಯ ಬೋಧನ ಶಿಬಿರ  ಸಮಾರೋಪ  ಸಮಾರಂಭದಲ್ಲಿ ಮಾತನಾಡಿ, ಪ್ರಾಚೀನ ಹಳಗನ್ನಡ ಸಾಹಿತ್ಯಕ್ಕೆ  ಸಂಬಂಧಿಸಿದ  ವ್ಯಾಕರಣ, ಅಲಂಕಾರ, ಛಂದಸ್ಸು, ನಿಘಂಟುಗಳು ಹೆಚ್ಚಿನ ಮಹತ್ವವನ್ನು ಒಳಗೊಂಡಿವೆ. ಹಳಗನ್ನಡ ಸಾಹಿತ್ಯದಿಂದ ಶಾಸ್ತ್ರೀಯ ಸ್ಥಾನಮಾನ ದೊರಕಲು ಸಾಧ್ಯವಾಗಿದೆ. ಇತಿಹಾಸ ಇಲ್ಲದೇ ಹೊಸತನ ಕಂಡುಕೊಳ್ಳಲು ಅಸಾಧ್ಯ. ಅಲ್ಲದೆ, ವೈಚಾರಿಕಥೆಯ ಸಾಹಿತ್ಯವು ಹಳಗನ್ನಡ ಹಡಗಿದೆ. ಕನ್ನಡದಲ್ಲಿ ಹಲವು ಸಾಹಿತ್ಯಗಳಿವೆ. ಆದರೆ, ಬೇರೆ ಭಾಷೆಗಳಲ್ಲಿ ಹಲವು ಸಾಹಿತ್ಯಗಳು ದೊರಕುವುದಿಲ್ಲ. ಸಾಹಿತ್ಯದಲ್ಲಿ ಮೇಲು ಕೀಳೆಂಬ ಬೇಧಭಾವವಿಲ್ಲ. ಸಮಾಜದ ಸ್ವಾದವನ್ನು ಜಗತ್ತಿಗೆ ಸಾರುವ ಸಾಹಿತ್ಯವೇ ಹಳಗನ್ನಡವಾಗಿದೆ. ವಿದ್ಯಾಥರ್ಿಗಳು ಹಳೆಗನ್ನಡ ಸ್ವಾದದೊಂದಿಗೆ ಭವಿಷ್ಯ ರೂಪಿಸಿಕೊಳ್ಳುವ ಜೊತೆಗೆ ಹಳೆಗನ್ನಡದ ಹಿರಿಮೆ ಹೆಚ್ಚಿಸಬೇಕು ಎಂದರು.ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲ ಸಚಿವ ಡಾ.ಮಂಜುನಾಥ ಬೇವಿನಕಟ್ಟಿ ಅಧ್ಯಕ್ಷತೆವಹಿಸಿದ್ದರು.

ಈ ಸಂದರ್ಭದಲ್ಲಿ 4 ಜನ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ವಿರೇಶ್ ಬಡಿಗೇರ್, ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷೆ ಹಾಗೂ ಪ್ರೌಢಶಾಲೆ ಉಪ ಪ್ರಾಚಾಯರ್ೆ ಡಾ.ಅಕ್ಕಮಹಾದೇವಿ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಶಿಬಿರದ ನಿದರ್ೇಶಕ ಡಾ.ಎಫ್.ಟಿ.ಹಳ್ಳಿಕೇರಿ,  ಎಸ್ಡಿಎಂಸಿ ಅಧ್ಯಕ್ಷ ಎ.ವೆಂಕಟೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ಎಚ್.ಲಿಂಗನಗೌಡ್ರು, ಶಿಕ್ಷಕರಾದ ಸುಗ್ಗೇನಹಳ್ಳಿ ರಮೇಶ್, ಬಿ.ಜಿ.ಕರಿಯಪ್ಪ, ಎಸ್.ವೈ.ಕಾಟಪುರ, ಲಕ್ಷ್ಮೀ, ಶೋಭಾ, ಶಿಕ್ಷಕರು, ಶಿಬಿರಾಥರ್ಿಗಳು ಹಾಗೂ ವಿದ್ಯಾಥರ್ಿಗಳು ಸೇರಿದಂತೆ ಅನೇಕರಿದ್ದರು.