ಹೋಳಿ, ರಂಜಾನ್ ಹಬ್ಬದಲ್ಲಿ ಶಾಂತಿ ಪಾಲನೆಗೆ ಸಹಕರಿಸಿ: ಪಿಎಸ್‌ಐ
Help maintain peace during Holi and Ramzan: PSI
ದೇವರಹಿಪ್ಪರಗಿ 01: ಹೋಳಿ, ರಂಜಾನ್ ಹಬ್ಬವು ಸಹೋದರತೆ ಭಾವನೆಯೊಂದಿಗೆ ಬಾಂದವ್ಯ ಬೆಸೆಯುವಂತಹ ಹಬ್ಬಗಳಾಗಿವೆ ಈ ಹಬ್ಬಗಳ ಆಚರಣೆ ಸಮಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಎಂದಿನಂತೆ ಕಾಪಾಡಿಕೊಂಡು ಹೋಗುವಂತಹ ಕಾರ್ಯವಾಗಬೇಕೆಂದು ದೇವರಹಿಪ್ಪರಗಿ ಪೊಲೀಸ್ ಠಾಣಾ ಪಿ.ಎಸ್.ಐ ಸಚೀನ ಆಲಮೇಲಕರ್ ಹೇಳಿದರು. ಹೋಳಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಶನಿವಾರ ಸಂಜೆ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬಗಳನ್ನು ಪರಸ್ಪರ ಗೌರವ ಮತ್ತು ಸೌಹಾರ್ದದಿಂದ ಆಚರಿಸಿ, ಭಾರತವು ಬಹುಧರ್ಮೀಯ ಮತ್ತು ಬಹು ಸಾಂಸ್ಕೃತಿಕ ದೇಶವಾಗಿದ್ದು, ಎಲ್ಲ ಸಮುದಾಯದವರು ತಮ್ಮ ಸಂಪ್ರದಾಯದಂತೆ ಹಬ್ಬಗಳನ್ನು ಆಚರಿಸುವ ಹಕ್ಕು ಹೊಂದಿದ್ದಾರೆ.
ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಸಹಕಾರದಿಂದ, ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟಾಗದಂತೆ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾಗಳನ್ನೂ ಅಳವಡಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು. ಪ.ಪಂ ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ, ಮುಖಂಡರುಗಳಾದ ಶಂಕರಗೌಡ ಪಾಟೀಲ, ಕಾಶಿನಾಥ ತಳಕೇರಿ ಹಾಗೂ ಅರುಣ ಕೋರವಾರ ಅವರು ಮಾತನಾಡಿ, ದೇವರಹಿಪ್ಪರಗಿ ಪಟ್ಟಣ ಶಾಂತಿಗೆ ಹೆಸರುವಾಸಿಯಾಗಿದೆ. ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೌಹಾರ್ದದಿಂದ ಹಾಗೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಇಲಾಖೆಗೆ ಸಹಕಾರ ನೀಡುತ್ತಿವೆ ಎಂದರು. ಇದೇ ಸಂದರ್ಭದಲ್ಲಿ ಅಪರಾದ ವಿಭಾಗ ಪಿ.ಎಸ್.ಐ ಪಿ.ಎಂ.ಚೌರ, ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಮೈಹಿಬೂಬ ಹುಂಡೆಕಾರ, ಚೆನ್ನವೀರ ಕುದರಿ, ಪ್ರಕಾಶ ಮಲ್ಹಾರಿ, ಶಬ್ಬೀರ್ ಮುಲ್ಲಾ, ಶಿವಪದ್ಮ, ಎ.ಡಿ.ಮುಲ್ಲಾ ಸೇರಿದಂತೆ ಸರ್ವ ಸಮುದಾಯದ ಮುಖಂಡರು ಹಾಗೂ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 