ಶಾಲಾ ಶಿಕ್ಷಣದೊಂದಿಗೆ ಮಕ್ಕಳಿಗೆ ಆರೋಗ್ಯ ಶಿಕ್ಷಣವು ಮುಖ್ಯ
Health education is important for children along with schooling.
ಧಾರವಾಡ ಫೆ.10: ಶಾಲಾ ಶಿಕ್ಷಣ ಇಲಾಖೆ ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಕ್ರೀಡೆ, ಸಾಂಸ್ಕೃತಿಕ ಮತ್ತು ಸಂಸ್ಕಾರ ಕಲಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸಮಗ್ರ ಅಭಿವೃದ್ಧಿ ಶಿಕ್ಷಣ ಇಲಾಖೆಯು ಆದ್ಯತೆ ನೀಡಿ ಶಾಲಾ ವೇಳಾಪಟ್ಟಿಯನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶ ಎಸ್.ಎಸ್.ಕೆಳದಿಮಠ ಅವರು ಹೇಳಿದರು.
ಅವರು ಇಂದು (ಫೆ.10) ಬೆಳಿಗ್ಗೆ ಮಾಳಮಡ್ಡಿಯ ಕೆ.ಇ.ಬೋರ್ಡ್ ಸಂಸ್ಥೆಯ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಜಂತುಹುಳು ಹೊಂದಿರುವ ಮಕ್ಕಳು ಅಪೌಷ್ಠಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಾರೆ. ಮತ್ತು ಅವರ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಖಾಸಗಿ, ಅನುದಾನಿತ, ಅನುದಾನರಹಿತ, ಸರಕಾರಿ ಶಾಲೆಗಳ ಪ್ರತಿ ಮಗುವಿಗೆ ವರ್ಷದಲ್ಲಿ ಎರಡು ಸಲ ಜಂತುಹುಳು ನಿವಾರಕ ಮಾತ್ರೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಮಕ್ಕಳಲ್ಲಿ ಉಂಟಾಗುವ ಅಪೌಷ್ಠಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟಲು ಹಾಗೂ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗದಂತೆ ಮುನ್ನಚ್ಚರಿಕೆ ವಹಿಸಲು ಪ್ರತಿ ಮಗುವಿಗೆ ಜಂತುಹುಳು ನಿವಾರಕ ಓಷಧಿ ಅಥವಾ ಅಲ್ಬೆಂಡಜೋಲ್ ಮಾತ್ರೆಯನ್ನು ನೀಡುವ ಅಗತ್ಯವಿದೆ. ಜಂತುಹುಳು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳಾಗಿರುತ್ತಾರೆ ಎಂದು ಅವರು ಹೇಳಿದರು.
ಧಾರವಾಡ ತಾಲೂಕಿನಲ್ಲಿ ಒಟ್ಟು 483 ಶಾಲಾ ಕಾಲೇಜುಗಳಿಗೆ 1,37,658 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 1,40,581 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಹುಬ್ಬಳ್ಳಿ ತಾಲೂಕನಲ್ಲಿ ಒಟ್ಟು 493 ಶಾಲಾ ಕಾಲೇಜುಗಳಿಗೆ 1,80,161 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 1,83,073 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಕಲಘಟಗಿ ತಾಲೂಕನಲ್ಲಿ ಒಟ್ಟು 189 ಶಾಲಾ ಕಾಲೇಜುಗಳಿಗೆ 34,800 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 37,801 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ.
ಕುಂದಗೋಳ ತಾಲೂಕಿನಲ್ಲಿ ಒಟ್ಟು 188 ಶಾಲಾ ಕಾಲೇಜುಗಳಿಗೆ 35,650 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 38,801 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ನವಲಗುಂದ ತಾಲೂಕಿನಲ್ಲಿ ಒಟ್ಟು 202 ಶಾಲಾ ಕಾಲೇಜುಗಳಿಗೆ 51,510 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 54,809 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಒಟ್ಟಾರೆಯಾಗಿ 1,555 ಶಾಲಾ ಕಾಲೇಜುಗಳಿಗೆ 4,39,779 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 4,55,065 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಮ್. ಹೊನಕೇರಿ ಅವರು ಮಾತನಾಡಿ, ಅಲ್ಬೆಂಡಜೋಲ್ ಮಾತ್ರೆಯನ್ನು 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ಸ್ವಲ್ಪ ನೀರು ಸೇರಿಸಿ ಸೇವಿಸಲು ನೀಡಬೇಕು. 2 ರಿಂದ 3 ವರ್ಷದ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆಯನ್ನು ಪುಡಿ ಮಾಡಿ ಸ್ವಲ್ಪ ನೀರು ಸೇರಿಸಿ ಸೇವಿಸಲು ಕೊಡಬೇಕು. 3 ರಿಂದ 19 ವರ್ಷದ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆಯನ್ನು ನೀಡಬೇಕು. ಜಂತು ಹುಳು ಮಾತ್ರೆಗಳನ್ನು ಯಾವಾಗಲೂ ಬಾಯಿಯಲ್ಲಿ ಹಾಕಿ ಚೀಪಿ, ಸರಿಯಾಗಿ ಜಗಿದು, ಅಗಿದು ಸೇವೆಸಬೇಕು. ಶುದ್ಧ ಕುಡಿಯುವ ನೀರಿನೊಂದಿಗೆ ಸೇವಿಸಲು ನೀಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ. ಪೌಷ್ಠಿಕಾಂಶ ಕೊರತೆಯನ್ನು ನೀಗಿಸುತ್ತದೆ. ರಕ್ತ ಹೀನತೆಯನ್ನು ನಿಯಂತ್ರಿಸುತ್ತದೆ. ಎಕಾಗ್ರತೆ ಹೆಚ್ಚಿಸುತ್ತದೆ. ಮತ್ತು ಕೆಲಸದ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,623 ಅಂಗನವಾಡಿ ಕೇಂದ್ರಗಳಿಗೆ 1,23,859 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 1,23,965 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಒಟ್ಟು 1,555 ಶಾಲಾ ಕಾಲೇಜುಗಳಿಗೆ 4,39,779 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 4,55,065 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಹಾಗೂ 1 ರಿಂದ 19 ವರ್ಷದ ಮಕ್ಕಳಿಗೆ 5,63,638 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 5,79,030 ಲಭ್ಯವಿರುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರ್.ಸಿ.ಎಚ್.ಓ ಅಧಿಕಾರಿ ಡಾ. ಸುಜಾತಾ ಹಸವಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಧಾರವಾಡ ತಾಲೂಕನಲ್ಲಿ ಒಟ್ಟು 495 ಅಂಗನವಾಡಿ ಕೇಂದ್ರಗಳಿಗೆ 39,759 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 39,780 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಹುಬ್ಬಳ್ಳಿ ತಾಲೂಕನಲ್ಲಿ ಒಟ್ಟು 469 ಅಂಗನವಾಡಿ ಕೇಂದ್ರಗಳಿಗೆ 50,042 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 50,075 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಕಲಘಟಗಿ ತಾಲೂಕನಲ್ಲಿ ಒಟ್ಟು 210 ಅಂಗನವಾಡಿ ಕೇಂದ್ರಗಳಿಗೆ 8,200 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 8,200 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಕುಂದಗೋಳ ತಾಲೂಕನಲ್ಲಿ ಒಟ್ಟು 236 ಅಂಗನವಾಡಿ ಕೇಂದ್ರಗಳಿಗೆ 17,148 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 17,200 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ. ಒಟ್ಟಾರೆಯಾಗಿ 1,623 ಅಂಗನವಾಡಿ ಕೇಂದ್ರಗಳಿಗೆ 1,23,859 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 1,23,965 ಅಲ್ಬೆಂಡಜೋಲ್ ಮಾತ್ರೆಗಳು ಲಭ್ಯವಿರುತ್ತದೆ ಎಂದು ಹೇಳಿದರು.
ಧಾರವಾಡ ತಾಲೂಕಿನಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ 1,77,417 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 1,80,361 ಲಭ್ಯವಿರುತ್ತದೆ. ಹುಬ್ಬಳ್ಳಿ ತಾಲೂಕಿನಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ 2,30,203 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 2,33,148 ಲಭ್ಯವಿರುತ್ತದೆ. ಕಲಘಟಗಿ ತಾಲೂಕಿನಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ 43,000 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 46,001 ಲಭ್ಯವಿರುತ್ತದೆ. ಕುಂದಗೋಳ ತಾಲೂಕಿನಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ 44,360 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 47,511 ಲಭ್ಯವಿರುತ್ತದೆ. ನವಲಗುಂದ ತಾಲೂಕಿನಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ 68,658 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 72,009 ಲಭ್ಯವಿರುತ್ತದೆ. ಒಟ್ಟಾರೆಯಾಗಿ 1 ರಿಂದ 19 ವರ್ಷದ ಮಕ್ಕಳಿಗೆ 5,63,638 ಅಲ್ಬೆಂಡಜೋಲ್ ಮಾತ್ರೆಗಳು ಅವಶ್ಯಕತೆ ಇದ್ದು, ಪ್ರಸ್ತುತ 5,79,030 ಲಭ್ಯವಿರುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಇ.ಬೋರ್ಡ ಪ್ರೌಢಶಾಲೆಯ ಪ್ರಾಂಶುಪಾಲ ಎನ್.ಎಸ್.ಗೋವಿಂದರೆಡ್ಡಿ ಸ್ವಾಗತಿಸಿದರು. ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಮ್.ಅಗಡಿ ಅವರು ನಿರೂಪಿಸಿದರು. ಧಾರವಾಡ ತಾಲೂಕಾ ಶಿಕ್ಷಣಾಧಿಕಾರಿ ರೇಖಾ ಬಾಡಗಿ ವಂದಿಸಿದರು. ವೇದಿಕೆಯಲ್ಲಿ ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ತಾಲ್ಲೂಕು ವೈದ್ಯಾಧಿಕಾರಿ ಡಾ ಕೆ.ಎನ್.ತನುಜಾ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಅಧಿಕಾರಿ ಡಾ.ಎಸ್.ಬಿ.ಕಳಸೂರಮಠ, ವೈದ್ಯಾಧಿಕಾರಿ ಡಾ. ಮಂಜುಳಾ ಮುದುಕಣ್ಣವರ ಇದ್ದರು.
ಈ ಸಂದರ್ಭದಲ್ಲಿ ಗಣ್ಯರು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಕುರಿತ ಪೋಸ್ಟರ್ ಬಿಡುಗಡೆ ಮಾಡಿದರು. ಮತ್ತು ಕೆ.ಇ. ಬೋರ್ಡ ಶಾಲೆಯ ಮಕ್ಕಳಿಗೆ ಜಂತು ಹುಳು ನಿವಾರಣೆಯ ಅಲ್ಬೆಂಡಜೋಲ್ ಮಾತ್ರೆಯನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ತಾಲೂಕಾ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 