ಆರೋಗ್ಯ ಶಿಬಿರಗಳು ಬಡವರಿಗೆ ಅನೂಕೂಲ-ಮಹಾಂತಯ್ಯನಮಠ
Health camps are a boon for the poor-Mahanthaiyanamatha
ಆರೋಗ್ಯ ಶಿಬಿರಗಳು ಬಡವರಿಗೆ ಅನೂಕೂಲ-ಮಹಾಂತಯ್ಯನಮಠ
ಕುಕನೂರ 28 ಉಚಿತವಾಗಿ ನಡೆಯುವ ಆರೋಗ್ಯ ಶಿಬಿರಗಳು ಜನ ಸಾಮಾನ್ಯರಿಗೆ ಅನುಕೂಲವಾಗುತ್ತವೆ ಎಂದು ಕೊಪ್ಪಳದ ಉದ್ಯಮಿ ಶರಣಯ್ಯ ಮಹಾಂತಯ್ಯನಮಠ ಹೇಳಿದರು. ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀ ಮಠದ ಪೂಜ್ಯರ 2ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಬಸವ ಅಕ್ಯು ಅಕಾಡೆಮಿ ವತಿಯಿಂದ ನಡೆದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ಈ ನಾಡಿನ ಮಠ ಮಾನ್ಯಗಳು ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ಸಾಕಷ್ಟು ಸೇವೆ ಮಾಡುತ್ತಾ ಬರುತ್ತೀವೆ, ಮಠಗಳಿಗೆ ಭಕ್ತರ ಕಲ್ಯಾಣವೇ ಮುಖ್ಯ ಆದ್ದರಿಂದ ಮಠ ಮಾನ್ಯಗಳಿಗೆ ಉಳ್ಳವರು ಸಹಾಯ ಸಹಕಾರ ನೀಡಬೇಕು ಎಂದರು. ನಂತರ ಮಾತನಾಡಿದ ಶ್ರೀಮಠದ ಕಾರ್ಯದರ್ಶಿ ಗದಿಗೆಪ್ಪ ಪವಾಡಶೆಟ್ಟಿ ನಮ್ಮ ಶ್ರೀಮಠ ಹಲವಾರು ಕಾರ್ಯಕ್ರಮಗಳನ್ನ ಪೂಜ್ಯರ 2ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದೆ
ಇದಕ್ಕೆಲ್ಲ ಭಕ್ತರ ಸಹಕಾರ ದೊಡ್ಡದು, ಪೂಜ್ಯರ ಮಾರ್ಗದರ್ಶನದಲ್ಲಿ ಭಕ್ತರ ಕಾಣಿಕೆಯಿಂದ ಶ್ರೀಮಠ ಅಭಿವೃದ್ಧಿಗೊಳ್ಳುತ್ತಿದೆ ಎಂದರು. ಕೊಪ್ಪಳದ ಉದ್ಯಮಿ ಶರಣಯ್ಯ ಮಹಾಂತಯ್ಯನಮಠ ಅವರನ್ನ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೀರಯ್ಯ ತೋಂಟದಾರ್ಯ ಮಠ, ದೇವಪ್ಪ ಸೋಬಾನದ, ಲಕ್ಷ್ಮಣ ಕಾಳಿ, ಬಸಪ್ಪ ಬಂಗಿ, ಶರಣಪ್ಪ ಗುತ್ತಿ, ಸಂಗಮೇಶ ಕಲ್ಮಠ , ಬಸವರಾಜ ಈಬೇರಿ, ಶಶಿದರ ಬಿ ಮತ್ತು ಬಸವ ಅಕ್ಯು ಅಕಾಡೆಮಿ ಸದಸ್ಯರು ಇದ್ದರು. ಪೋಟೋ ಪೈಲ್ : ಕುಕನೂರ ಅನ್ನದಾನೀಶ್ವರ ಮಠದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಕೊಪ್ಪಳದ ಉದ್ಯಮಿ ಶರಣಯ್ಯ ಮಹಾಂತಯ್ಯನಮಠ ಅವರನ್ನ ಸನ್ಮಾನಿಸಲಾಯಿತು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 