ಸರಕಾರಿ ಶಾಲೆಯ 24 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣ ಸ್ವಂತ ಖರ್ಚಿನಲ್ಲಿ ವಿನೂತನ ಕಾರ್ಯಕ್ಕೆ ಮುಂದಾದ ಮುಖ್ಯೋಪಾಧ್ಯಾಯರು

ಸರಕಾರಿ ಶಾಲೆಯ 24 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣ ಸ್ವಂತ ಖರ್ಚಿನಲ್ಲಿ ವಿನೂತನ ಕಾರ್ಯಕ್ಕೆ ಮುಂದಾದ ಮುಖ್ಯೋಪಾಧ್ಯಾಯರು Headmaster takes on innovative task of paying for air travel for 24 government school students at h


ಕೊಪ್ಪಳ 13:  ತಾಲೂಕಿನ ಬಹದ್ದೂರಬಂಡಿ ಶಾಲೆಯ ಮುಖ್ಯೋಪಾಧ್ಯಾಯರು,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ ಅವರು ತಮ್ಮ ಶಾಲೆಯ 24 ವಿದ್ಯಾರ್ಥಿಗಳನ್ನು ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಸಲಿದ್ದಾರೆ. 

24 ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಬೇಕು ಎಂಬ ಉದ್ದೇಶದಿಂದ ಬೇರೆ ಶಾಲೆಯ ಶಿಕ್ಷಕರನ್ನು ನೇಮಕ ಮಾಡಿ ಅವರೇ ಪ್ರಶ್ನೆ ಪತ್ರಿಕೆ ತೆಗೆದು,ಪರೀಕ್ಷೆ ನಡೆಸಿ ಪಲಿತಾಂಶವನ್ನು ಕೂಡಾ ನೀಡಿದ್ದಾರೆ. ಒಟ್ಟು 220 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಿದ್ದರು, 5 ರಿಂದ 8 ನೇ ವಿದ್ಯಾರ್ಥಿಗಳನ್ನು ತರಗತಿವಾರು 6 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.ಆಯ್ಕೆಯ ಮಾಡಲು ಕಳೆದ 2025ರ ಎಪ್ರೀಲ್ 14 ರಂದು ಪರೀಕ್ಷೆ ನಡೆಸಲಾಯಿತು. 

ಈ ಮೊದಲು ಜಿಂದಾಲ್ ನಿಂದ ಹೈದ್ರಾಬಾದ್ ಗೆ ಮಕ್ಕಳನ್ನು ಕರೆದುಕೊಂಡು ಹೊಗುವುದಾಗಿ ಘೋಷಣೆ ಮಾಡಿದ್ದರು,ಆದರೆ ಹೈದ್ರಾಬಾದ್ ಗೆ ವಿಮಾನ ಲಭ್ಯ ಇಲ್ಲದ ಕಾರಣ ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಲೋಹದ ಹಕ್ಕಿಯಲ್ಲಿ ಹೊರಡಲಿದ್ದಾರೆ. 

ವಿದ್ಯಾರ್ಥಿಗಳಿಂದ ಯಾವುದೇ ಹಣವನ್ನು ಸಂಗ್ರಹ ಮಾಡದೆ ಅವರು ವಿಮಾನ ಪ್ರಯಾಣದ ವೆಚ್ಚ ಸೇರಿದಂತೆ ಊಟ ಹಾಗೂ ವಸತಿ ಸೌಲಭ್ಯವನ್ನು ಬೀರ​‍್ಪ ಅಂಡಗಿ ಅವರು ಭರಿಸಲಿದ್ದಾರೆ. ವಿಮಾನ ವೆಚ್ಚ ಸೇರಿದಂತೆ ಊಟ ಹಾಗೂ ವಸತಿ ಸೇರಿಂದಂತೆ ಒಟ್ಟು 4 ಲಕ್ಷ ಹಣ ಖರ್ಚಿಯಾಗಲಿದೆ. ಡಿ.26ರ ಶುಕ್ರವಾರ ಜಿಂದಾಲ್ ವಿಮಾನ ನಿಲ್ದಾನದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. 

ವಿದ್ಯಾರ್ಥಿಗಳಿಗೆ ಸ್ಪರ್ಧಾ ಮನೋಭಾವನೆ ಬೆಳೆಯಬೇಕು, ಸರಕಾರಿ ಶಾಲೆಯ ಮಕ್ಕಳಿಗೂ ಕೂಡಾ ವಿಮಾನದ ಅನುಭವ ಮಾಡಿಸಬೇಕು ಎಂಬ ಉದ್ದೇಶದಿಂದ ನನ್ನ ಸ್ವಂತ ಖರ್ಚಿನ ಮೂಲಕ ಈ ಕಾರ್ಯಕ್ಕೆ ಮುಂದಾಗಿದ್ದೇನೆ.