ನಾಳೆಯಿಂದ ಹಜರತ್ ಸದರ್ ಶಾಹ ವಲಿ (ರ.ಅ) ಉರುಸು ಆಚರಣೆ ಕಾರ್ಯಕ್ರಮ
Hazrat Sadar Shah Wali (RA) Urs Celebration Program from Tomorrow
ಕೊಪ್ಪಳ 12 : 224 ನೇ ಹಜರತ್ ಸೈಯದ್ ಸದರ್ ಶಾಹ ವಲಿ (ರ.ಅ) ಉರುಸು ಆಚರಣೆ ಕಾರ್ಯಕ್ರಮ.ದಿ,-14/ ರಿಂದ 16 ರ ವರೆಗೇ ಮೂರು ದಿನಗಳ ಕಾಲ ಸಂದಲ (ಗಂಧ ) ಉರುಸ್ ಹಾಗೂ ಜಿಯಾರತ್ ಮತ್ತು ಪುರುಷ ಅಂಗವಾಗಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು. ಉರುಸು ಉಸ್ತುವಾರಿ ಅಧ್ಯಕ್ಷ ಸೈಯದ್ ಅಲಿ ಹುಸೇನಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು-14 ರ ಬುಧವಾರ ನಗರದ ತೆಗ್ಗಿನಕೇರಿ ಓಣಿಯಿಂದ ಗಂಧ ಹೊರಡುವುದು, ದಿನಾಂಕ:-15 ಗುರುವಾರ ಉರುಸು ನಡೆಯುವುದು, ಅನ್ನ ಸಂತರೆ್ಣ , ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುವುದು,
ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್, ಸಿ ವಿ ಚಂದ್ರಶೇಖರ, ಡಾ:ಬಸವರಾಜ್ ಕ್ಯಾವಟರ್, ಇನ್ನು ಅನೇಕ ಗಣ್ಯರ ಉಪಸ್ಥಿತಿಯಲ್ಲಿ, ಕಾರ್ಯಕ್ರಮ ನೆರವೇರಿಸಲಾಗುವುದು.ದಿನಾಂಕ:-16 ರ ಶುಕ್ರವಾರ ಜಿಯಾರತ್ ನಡೆಯುವುದು, ಉರುಸು ಕಾರ್ಯಕ್ರಮವು ಸೂಫಿ ಸಂತರು ಹಾಗೂ ಪವಿತ್ರ ವ್ಯಕ್ತಿಗಳ ಸ್ಮರಣಾರ್ಥ ನಡೆಯುವ ಒಂದು ಧಾರ್ಮಿಕ ಆಚರಣೆ ಆಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಸೈಯದ್ ನಸರುದ್ದಿನ್, ಸೈಯದ್ ಆದಮ್ ಹುಸೇನಿ, ಸೈಯದ್ ಆಬಿದ್ ಹುಸೇನಿ, ಸೈಯದ್ ಷೇರು ಹುಸೇನಿ ಇನ್ನು ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 