ಫೈಜಾನೆ ಖಾದ್ರಿಯ ದಿಂದ ಹಜರತ್ ಅಲಿ ಯವರ ಜಯಂತಿ ಹಾಗೂ ಅಜ್ಮೀರ್ ದರ್ಗಾದ ಉರುಸ್ ಆಚರಣೆ
Hazrat Ali Jayanti and Urus celebrations at Ajmer Dargah by Faizane Qadri
ಕೊಪ್ಪಳ 10: ಹಜರತ್ ಮೌಲಾ ಅಲಿ (ರ) ರವರ ಜಯಂತಿ ಪ್ರಯುಕ್ತ ಆಸಾರೆ ಮುಬಾರಕ್ ಹಾಗೂ ಅಜ್ಮೀರ್ ದರ್ಗಾದ ಹಜರತ್ ಖಾಜಾ ಗರೀಬ್ ನವಾಜ್ ರವರ ಉರುಸ್ ಪ್ರಯುಕ್ತ ನಗರದ ನಿರ್ಮಿತಿ ಕೇಂದ್ರ ಬಡಾವಣೆಯಲ್ಲಿರುವ ಖಾದರಿಯ ಪೀಠದ ಆವರಣದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ವಿಶೇಷ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಜರುಗಿತು, ಫೈಜಾನೆ ಖಾದರಿಯ ಪೀಠದ ಭಕ್ತ ಸಮೂಹ ಮಂಡಳಿಯವರು ಆಯೋಜಿಸಿದ ಕಾರ್ಯಕ್ರಮದ ನೇತೃತ್ವ ಮತ್ತು ಸಾನಿಧ್ಯವನ್ನು ಖಾದರಿಯ ಖಾನಖಾ ಪೀಠದ ಪೀಠಾಧಿಪತಿ ಹಜರತ್ ಸೈಯದ್ ಶಾ ಅಬ್ದುಲ್ ವಹಾಬ ನಾಬೀರಾ ಖಾದ್ರಿ ಸಾಹೇಬ್ ಪೀರ್ ಸಾಲಗುಂದ ಶರೀಫ್ ರವರು ವಹಿಸಿ ಕಾರ್ಯಕ್ರಮದ ಕೊನೆಯಲ್ಲಿ ಆಶೀರ್ವಚನ ನೀಡಿದರು,
ಸಮಾರಂಭದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡಿದ್ದ ಮುಕುಂದ ಶರೀಫ್ ಗಡ್ಡೆ ಖಾದರ್ ಭಾಷಾ ದರ್ಗಾದ ಪೀಠಾಧಿಪತಿ ಹಾಗೂ ನ್ಯಾಯವಾದಿ ಹಜರತ್ ಸೈಯದ್ ರಹೇಮತುಲ್ಲಾ ಖಾದ್ರಿ ಸಾಹೇಬ್ ರವರು ಮೌಲಾಯ ಕಾಯನಾಥ್ ಹೈದರ್ ಏ ಕರಾರ ಶೇರ್ ಏ ಖುದಾ ಜಾ ನಶೀನೇ ಪಯಂಬರ್ ಹಜರತ್ ಮೌಲಾ ಅಲಿ ರವರ ಜೀವನ ಚರಿತ್ರೆ ಕುರಿತು ಸಂಪೂರ್ಣ ಮಾಹಿತಿ ಜೊತೆಗೆ ಧಾರ್ಮಿಕ ಪ್ರವಚನ ಮಾಡಿದರು, ಈ ಸಂದರ್ಭದಲ್ಲಿ ಗುರುಗಳಾದ ಹಜರತ್ ಸೈಯದ್ ಶಾ ಸಮೀರ್ ಪಾಷಾ ಖಾದ್ರಿ,ಜಾಕಿರ್ ಹುಸೇನ್ ಖಾದ್ರಿ ಸಾಲಗುಠಾ ,ಹಿರಿಯ ಶಿಕ್ಷಕ ಎಂ ಎ ಕೈಯಂ ನಿವೃತ್ತಿ ಶಿಕ್ಷಕ ಸೈಯದ್ ಗೌಸ್ ಪಾಷಾ ಖಾಜಿ, ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ,ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಸೇರಿದಂತೆ ಫೈಜಾನೆ ಖಾದ್ರಿಯ ಪೀಠ ಕೇಂದ್ರದ ಭಕ್ತ ಸಮೂಹ ಮಂಡಳಿ ಕಾರ್ಯಕರ್ತರು ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ವಿಶೇಷವಾಗಿ ಮಹಿಳೆಯರು ಪಾಲ್ಗೊಂಡಿದ್ದರು,
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 