ಇಂದಿನ ಜೀವನದಲ್ಲಿ ಆತುರ, ಚಿಂತೆ ಒತ್ತಡಕ್ಕೆ ಕಾರಣಗಳಾಗಿವೆ: ಎಂ.ಎ. ಸಪ್ನ
Haste and worry are the causes of stress in today's life: M.A. Sapna
ಬೆಳಗಾವಿ 04: ಕೆಲವರು ಅಡುಗೆ ಮಾಡುವ ಮೂಲಕ, ಇನ್ನು ಕೆಲವರು ಸಂಗೀತ, ನೃತ್ಯ, ತೋಟಗಾರಿಕೆ ಹೀಗೆ ತಮ್ಮ ಹವ್ಯಾಸಗಳ ಮೂಲಕ ಮಾನಸಿಕ ಒತ್ತಡದಿಂದ ಹೊರ ಬರುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಒಳ್ಳೆಯ ಹವ್ಯಾಸಗಳು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಸಪ್ನಾ ಅವರು ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ವತಿಯಿಂದ ಪಿ.ಎಮ್. ಉಷಾ. ಯೋಜನೆಯಲ್ಲಿ ಆಯೋಜಿಸಲಾಗಿದ್ದ ‘ಅಠಠಿಜಟಟಟಿರ ಚಿಟಿಜ ಂತಿಚಿಡಿಜಟಿ ಕಡಿಠಡಿಚಿಟ’ ವಿಷಯದ ಮೇಲೆ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂಗ್ಲಿಷ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವಿಜಯ ನಾಗಣ್ಣವರ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳಲ್ಲಿ ಹಿರಿಯರು, ಅಣ್ನ, ಅಕ್ಕಂದಿರು ನೀಡುತ್ತಿದ್ದ ಮಾರ್ಗದರ್ಶನದಿಂದ ಮನೆ ಹೊರಗೆ ಹೋಗಿ ಸಲಹೆ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೀಗ ಆಧುನಿಕತೆ, ಓದ್ಯೋಗಿಕ ಕ್ರಾಂತಿಯಿಂದಾಗಿ ಪ್ರತಿಯೊಬ್ಬರೂ ಒಂಟಿತನದಿಂದ ಬಳಲುತ್ತಿದಾರೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಇಂಥ ಸಮಾಲೋಚನಾ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾ ವಿಭಾಗದ ಡೀನ ಪ್ರೊ. ಸಿ. ಎನ್. ವಾಘಮಾರೆ ಅವರು ತಮ್ಮ ನಿಜ ಜೀವನದ ಉದಾಹರಣೆಗಳನ್ನು ನೀಡುತ್ತಾ ಒತ್ತಡ ನಿವಾರಣೆಯ ಅವಶ್ಯಕತೆಯನ್ನು ಹಾಗೂ ಪರಿಹಾರೋಪಾಯಗಳನ್ನು ಅರುಹಿದರು.
ಪಿ.ಎಮ್. ಉಷಾ ಮೇರುವಿನ ನೋಡಲ್ ಅಧಿಕಾರಿ ಡಾ. ನಂದಿನಿ ದೇವರಮನಿ ಅವರು ಸ್ವಾಗತಿಸಿದರು. ಪಿ.ಎಮ್. ಉಷಾ ಸಾಪ್ಟ್ ಕಂಪೋನೆಂಟ್ 44 ರ ಸಂಯೋಜನಾಧಿಕಾರಿ ಪ್ರೊ. ಕವಿತಾ ಕುಸುಗಲ್ಲ ವಂದನಾರೆ್ಣ ಸಲ್ಲಿಸಿದರು. ಅಂಬಿಕಾ ಕಾಂಬಳೆ ಶಿಶುನಾಳ ಶರೀಫರ ತತ್ವಪದದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳ ಪರಿಚಯವನ್ನು ವಿನಾಯಕ ನಂದಿ ಮಾಡಿದರು. ಗೋಪಿಕಾ ಕುಲಕರ್ಣಿ ನಿರೂಪಿಸಿದರು.
ಎರಡು ದಿನಗಳ ಈ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಎರಡು ಅವಧಿ, ಹಾಗೂ ಒಓಖಂ ಶಿಕ್ಷಣ ಮಹಾವಿದ್ಯಾಲಯ, ಕೆ.ಆರ್.ಎಸ್.ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಮೂರು ಅವಧಿಯ ಉಪನ್ಯಾಸ, ಸಮಾಲೋಚನೆಗಳನ್ನು ಆಯೋಜಿಸಲಾಗಿತ್ತು. ಒಟ್ಟು ಆರು ನೂರು ಬೋಧಕರು, ಸಂಶೋಧನಾರ್ಥಿಗಳು ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 