ಸಾರ್ಥಕ ಜೀವನ ಬದುಕಿಗೆ ಕಾಯಕ ದಾಸೋಹ ಅಗತ್ಯ- ಸುವರ್ಣದೇವಿ ಪಾಟೀಲ
Hard work is essential for a meaningful life - Suvarnadevi Patil
ರಾಣೇಬೆನ್ನೂರು:31 ಮಾನವನ ಬದುಕು ಸಾರ್ಥಕತೆಯ ಸಮೃದ್ಧಿ ಕಾಣಬೇಕಾದರೆ ಬಸವಾದಿ ಶರಣರ ವಚನಗಳನ್ನು ನಿತ್ಯವೋ ಕ್ಷಣ ಕಾಲ ಸೂಕ್ಷ್ಮವಾಗಿ ಅಧ್ಯಯನ ಮತ್ತು ಅವಲೋಕನ ಮಾಡಿದರೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ಲಭಿಸುವುದರ ಜೊತೆಗೆ ಸಾತ್ವಿಕ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಗುವುದು ಎಂದು ಶ್ರೀ ಬಸವ ಜ್ಯೋತಿ ಮಹಿಳಾ ಮಂಡಳದ ಅಧ್ಯಕ್ಷ,ಶರಣೆ ಸುವರ್ಣದೇವಿ ಎನ್. ಪಾಟೀಲ ಹೇಳಿದರು. ಅವರು, ಗುರುವಾರ ನಗರದ ಸ್ಟೇಷನ್ ರಸ್ತೆ, ಭಕ್ತಿ ಭವನ ಆವರಣದಲ್ಲಿ ಆಯೋಜಿಸಿದ್ದ, ಶರಣರ ಸ್ಮರಣೋತ್ಸವ ಹಾಗೂ ಜಂಗಮ ಜ್ಯೋತಿ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನ್ಮ ಪಡೆಯುವುದು ಆಕಸ್ಮಿಕವಾಗಿದ್ದರೊ, ಪೂರ್ವಜನ್ಮದ ಪುಣ್ಯದ ಫಲ. ಒಂದು ದಿವಸ ಸಾವು ನಿಶ್ಚಿತ. ಇವೆರಡರ ಮಧ್ಯೆ ಬದುಕಿನ ಸಾರ್ಥಕತೆ ಹೊಂದಬೇಕಾದರೆ ಕಾಯಕ ದಾಸೋಹದ ಮೂಲಕ ಸಾರ್ಥಕ ಹೊಂದಬೇಕು. ಅದುವೇ ನಿಜ ಮತ್ತು ಸಂತೃಪ್ತಿಯ ಜೀವನವಾಗಿದೆ ಎಂದರು. ಭಕ್ತಿ ಭಂಡಾರಿ ಅಣ್ಣ ಬಸವಣ್ಣನವರು ನುಡಿದಂತೆ,ಶರಣೀಯರ ಸಂಪೂರ್ಣ ಕಾಯಾ, ವಾಚಾ, ಮನಸಾ ಸಹಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತಲಿದೆ ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಮಹಾಸ್ವಾಮಿಗಳವರು, ಸಮಾಜಮುಖಿ ಕಾರ್ಯವು, ಸಮಾಜದಲ್ಲಿ ಶಾಂತಿ, ನೆಮ್ಮದಿ ನೀಡುತ್ತದೆ. ಪ್ರತಿಯೊಬ್ಬ ಮಾನವ ಜೀವಿಯು ನಿಸ್ವಾರ್ಥ ಸೇವೆ ಮಾಡಿದರೆ, ನರ ಮಾನವ ಮಹಾ ಮಾನವನಾಗಿ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯವಾಗಲಿದೆ.ಅಂತಹ ಶ್ರೇಷ್ಠ ಭಕ್ತಿಯ ಕಾರ್ಯವು ಸುವರ್ಣದೇವಿ ಪಾಟೀಲ ಅವರು ಮಾಡುತ್ತಿದ್ದಾರೆ.
ಆಧುನಿಕ ಜೀವನ ಬದುಕು ಸಂಪೂರ್ಣ ಯಾಂತ್ರಿಕತೆಯಿಂದ ಕೂಡಿದೆ ಇಂತಹ ಸನ್ನಿವೇಶದಲ್ಲಿಯೂ ಸಹ, ಧರ್ಮ, ಭಕ್ತಿ, ಜ್ಞಾನ,ಮಾರ್ಗದಲ್ಲಿ ತಮ್ಮನ್ನೇ ತಾವು ಅರ್ಿಸಿಕೊಂಡ ಮಹಿಳೆಯರ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ ಎಂದು ತಮ್ಮ ಸಂದೇಶಾ ಮೃತವನ್ನು ನೀಡಿದರು.
ಶಿರೂರು ಶ್ರೀ ಬಸವಲಿಂಗ ಸ್ವಾಮೀಜಿಯವರು, ತಮ್ಮ ಸಂದೇಶವನ್ನು ನೀಡುವುದರ ಮೂಲಕ, ಬಸವಜೋತಿ ಮಹಿಳಾ ಮಂಡಳಿಯವರ ಕಾರ್ಯವನ್ನು ಅಭಿನಂದಿಸಿದರು. ಬಸವ ಜ್ಯೋತಿ ಸಂಸ್ಥೆಯ ಸುವರ್ಣ ಸಿರಿ, ಮತ್ತು ಬಸವ ಜ್ಯೋತಿ ಸ್ಮರಣ ಸಂಚಿಕೆಯನ್ನು, ದಾವಣಗೆರೆಯ ಶಂಭುಲಿಂಗಪ್ಪ ಅಜ್ಜಂಪುರ ಶೆಟ್ರು ಮತ್ತು ವೇದಿಕೆ ಮೇಲಿರುವ ಬಸವ ಬಂಧುಗಳು ಬಿಡುಗಡೆಗೊಳಿಸಿದರು.
ಬಸವ ಸಂಸ್ಕೃತಿ ಮತ್ತು ಧರ್ಮ ಸಂಸ್ಕೃತಿ ಪ್ರತಿ ಬಿಂಬಿತ ಅದ್ದೂರಿ ಕಾರ್ಯಕ್ರಮವು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ ಸುರೇಶ್ ಜಂಗಮಶೆಟ್ರ ಅವರು ವಿದ್ಯುಕ್ತವಾಗಿ ಉದ್ಘಾಟಿಸಿ ಚಾಲನೆ ನೀಡಿ, ತಮ್ಮ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಬಾಬಣ್ಣ ಐರಣಿ ಶೆಟ್ಟರ್, ನ್ಯಾಯವಾದಿ ಎ.ಎಂ.ನಾಯ್ಕ್, ಕುಲಪತಿ ಅಶೋಕ ಆಲೂರ, ಬಸವ ಟಿವಿಯ ಈ ಕೃಷ್ಣಪ್ಪ, ಮಾಜಿ ಶಾಸಕ ಅರುಣ್ ಕುಮಾರ ಪೂಜಾರ, ಶಾರದಮ್ಮ ಪಾಟೀಲ, ಗೌರಮ್ಮ ನಾಶಿ, ವಚನಶ್ರೀ ಪಾಟೀಲ, ಭಾರತಿ ಜಂಬಿಗಿ, ಡಾ. ಸರಸ್ವತಿ ಪಾಟೀಲ, ಲಲಿತಾ ವಿಜಾಪುರ, ಸ್ವರೂಪ ಪಾಟೀಲ, ಮಲ್ಲೇಶಪ್ಪ ಅರಿಕೇರಿ, ಲೀಲಾವತಿ, ಹಾಲನಗೌಡ ಪಾಟೀಲ, ಮಂಗಳಗೌರಿ ಪೂಜಾರ, ರಾಜೇಶ್ವರಿ ಜಿ.ಎಚ್. ವೀಣಾ ಹೊದಿಗ್ಗೇರಿ, ಡಾ.ಸರೋಜಾ ಹುಲಿಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಶ್ರೀ ಗುರುಬಸವ ಜ್ಞಾನಜ್ಯೋತಿ ಸೇವಾ ಸಮಿತಿಯ ಸಾಧಕರು ಪ್ರಾರ್ಥಿಸಿದರು. ನಂತರ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಯಶಸ್ವಿ ಕಂಡವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 