ಜನವರಿ15 ಕ್ಕೆ ಹರಿಹರದಲ್ಲಿ ಹರಜಾತ್ರೆ : ಸೋಮನಗೌಡ ಪಾಟೀಲ
Hara Jatre to be held in Harihar on January 15: Somanagouda Patil
ಕೊಪ್ಪಳ 10 : ಹರಿಹರದಲ್ಲಿ ಜ.15ರಂದು ಹರ ಜಾತ್ರೆ ನಡೆಯಲಿದೆ, ರಾಜ್ಯಾದ್ಯಂತ ಎಲ್ಲ ಜಿಲ್ಲೆಯವರು ಪಾಲ್ಗೊಳ್ಳಲಿದ್ದಾರೆ ಎಂದು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಶಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ಹರ ಜಾತ್ರೆ ನಡೆಯುತ್ತಿದ್ದು, ಈ ವರ್ಷ ಮತ್ತಷ್ಟು ಸಂಭ್ರಮ ಹೆಚ್ಚಿಸುವುದಕ್ಕಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಜಾತ್ರಾ ಮಹೋತ್ಸವ’ಕ್ಕೆ ಆಗಮಿಸುವ ಎಲ್ಲರಿಗೂ ವಿಭೂತಿ, ಕುಂಕುಮ ಹಚ್ಚು ವುದು, ಕಂಕಣ ಕಟ್ಟುವ ಮೂಲಕ ಪ್ರತಿಯೊಬ್ಬರಲ್ಲಿ ’ಯೂ ಧಾರ್ಮಿಕ ಭಾವನೆ ಮೂಡಿ ಸಲಾಗುವುದು. ಹರ ಜಾತ್ರೆಯ ನಿಮಿತ್ತ ಈ ವರ್ಷದಿಂದ ವೀರರಾಣಿ ಕಿತ್ತೂರ ಚೆನ್ನಮ್ಮನ ಪ್ರಶಸ್ತಿ ವಿಶೇಷ ’ಸಾಧಕರಿಗೆ ನೀಡಲಾಗುವುದು.ಈ ವರ್ಷದಪ್ರಶಸ್ತಿಯನ್ನು ಅದಕ್ಕಾಗಿಯೇ ಇರುವ ಸಮಿತಿಯೇ ಆಯ್ಕೆ ಮಾಡಲಾಗುತ್ತದೆ
ಜಾತ್ರೆಯಲ್ಲಿ ವಧುವರರ ವೇದಿಕೆಯ ಸ್ಪಾಲ್ ಹಾಕಲಾಗುವುದು.ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.ವೀರರಾಣಿ ಕಿತ್ತೂರ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ 200ವರ್ಷ ಗಳು ಆಗಿರುವ ನೆನಪಿಗಾಗಿ 2024 ರಲ್ಲಿ ಎರಡು ನೂರು ರುಪಾಯಿ ಕಾಯಿನ್ ಬಿಡುಗಡೆ ಮಾಡಲಾಗಿದೆ, ಅದನ್ನು ಪುನ ಬಿಡುಗಡೆ ಮಾಡಲಾಗುವುದು. ತೇರು ಎಳೆಯವ ಪದ್ಧತಿ ಮುಂದಿನ ವರ್ಷದಿಂದ ಆಚರಣೆ ಮಾಡಲಾಗುವುದು.ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ ಮಾತನಾಡಿ, ಹರ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಐದು ಸಾವಿರ ರೊಟ್ಟಿ, ಶೇಂಗಾ ಚಟ್ನ ಕೊಪ್ಪಳದಿಂದ ತೆಗೆದುಕೊಂಡು ಹೋಗುವುದಾಗಿ ಹೇಳಿದರು.ಈ ಸಂಧರ್ಭದಲ್ಲಿ,ಜಾತ್ರಾ ಸಮಿತಿ ಅಧ್ಯಕ್ಷ ಡಾ. ಬಸವರಾಜ ವೀರಾಪುರ, ಅಜಯ ಪೂಜಾರ, ಮಾರುತಿ ಸಂಕನಗೌಡ ಮಾಲತೇಶ ಹಳ್ಳಿ, ದೇವರಾಜ ಹಾಲಸಮುದ್ರ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 