ಹೆಣ್ಣು ಮಕ್ಕಳು ಅಂತಾರಾಷ್ಟ್ರೀಯಲ್ಲಿ ಕೆಲಸ ಮಾಡುತ್ತಿರುವುದು ಸಂತಸ: ಬಸವರಾಜ ಬೊಮ್ಮಾಯಿ
Happy to see girls working internationally: Basavaraja Bommai
ಹೆಣ್ಣು ಮಕ್ಕಳು ಅಂತಾರಾಷ್ಟ್ರೀಯಲ್ಲಿ ಕೆಲಸ ಮಾಡುತ್ತಿರುವುದು ಸಂತಸ: ಬಸವರಾಜ ಬೊಮ್ಮಾಯಿ
ಶಿಗ್ಗಾವಿ 11: ಸಾವಿರಾರು ಜನ ಹೆಣ್ಣು ಮಕ್ಕಳು ಅಂತಾರಾಷ್ಟ್ರೀಯ ಟೆಕ್ಸ್‌ಟೈಲ್ ಎಕ್ಸ್‌ಪೋರ್ಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವುದು ನೋಡಿ ಹೃದಯತುಂಬಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಖುರ್ಷಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಟೆಕ್ನಾನ್ ವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಗಾಮೆಂರ್ಟ್ ಕಾರ್ಖಾನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಗ್ಗಾವಿ ಟೆಕ್ಸ್‌ಟೈಲ್ ಪಾರ್ಕ್ ಅವರಣದಲ್ಲಿ ಟೆಕ್ಸಾನ್ ಕಂಪನಿ ಸುಮಾರು ಐದು ವರ್ಷದ ಹಿಂದೆಯೇ ನಾವು ಕನಸು ಕಂಡಿದ್ದೇವು. ಸಾಕಷ್ಟು ಯೋಜನೆ ಮಾಡಿ ಅದನ್ನು ಸಿದ್ಧತೆ ಮಾಡಿಕೊಂಡು ಸುಮಾರು ಐವತ್ತು ಕೋಟಿ ರೂಪಾಯಿಯಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಇದು ನಿರ್ಮಾಣ ಆಯಿತು.
ಮೊದಲನೆ ಆಂಕರ್ ಉದ್ಯಮವಾಗಿ ಎಕ್ಸ್‌ಪೋರ್ಟ್ ಕಂಪನಿ ತರುವಲ್ಲಿ ನಾವು ಯಶಸ್ವಿಯಾದೆವು. ಟೆಕ್ಸಾನ್ ದೇಶದಲ್ಲಿ ಅತಿ ಹೆಚ್ಚು ರಫ್ತು ಮಾಡುವ ಕಂಪನಿ ಇಲ್ಲಿ ತರಾಯಾಗುತ್ತಿರುವ ಗಾಮೆಂರ್ಟ್ ಉತ್ಪನ್ನಗಳು ಅಮೇರಿಕಾ, ಇಂಗ್ಲೆಂಡ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ರಫ್ತಾಗುತ್ತವೆ ಎಂದು ಹೇಳಿದರು. ಟೆಕ್ಸಾನ್ ನವರು ಅತ್ಯಂತ ಉತ್ಕೃಷ್ಟ ಯಂತ್ರಗಳನ್ನು ಹಾಕಿ ನಮ್ಮ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಹೀಗಾಗಿ ಟೆಕ್ಸಾನ್ ಕಂಪನಿಗೆ ಧನ್ಯವಾದ ಹೇಳುತ್ತೇನೆ. ಈಗಾಗಲೇ ಸುಮಾರು 15 ಸಾವಿರ ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಇನ್ನೂ ಐನೂರು ಜನ ತರಬೇತಿ ಪಡೆಯುತ್ತಿದ್ದಾರೆ. ನನಗೆ ಅತ್ಯಂತ ಸಂತೋಷವಾಗಿದೆ ಎಂದು ಹೇಳಿದರು.ಬಾವುಕರಾದ ಬೊಮ್ಮಾಯಿ ಟೆಕ್ಸ್ ಪೋರ್ಟ್ ಕಂಪನಿಯನ್ನು ಶಿಗ್ಗಾವಿಗೆ ತರಲು ಬಹಳ ಕಷ್ಟಪಟ್ಟಿದ್ದೇವೆ. ಆರಂಭದಲ್ಲಿ ಇಲ್ಲಿ ಕಾರ್ಖಾನೆ ಮಾಡಲು ಮೂಲಭೂತ ಸೌಕರ್ಯದ ಕೊರತೆ ಇದೆ ಎಂದು ಹೇಳಿದ್ದರು. ಅದನ್ನು ಒದಗಿಸಿಕೊಡಲು ನಾನು ಮುಖ್ಯಮಂತಿಯಾಗಿದ್ದಾಗ ಸ್ವತಃ ಮುಂದೆ ನಿಂತು ಪ್ರಯತ್ನ ಮಾಡಿದೆ. ಈಗ ಇಲ್ಲಿನ ಹೆಣ್ಣು ಮಕ್ಕಳಿಗೆ ಉದ್ಯೋಗ ಸಿಕ್ಕಿರುವುದು ನನಗೆ ಬಹಳ ಖುಷಿಯಾಗಿದೆ ಎಂದು ಭಾವುಕರಾಗಿ ನುಡಿದರು. ಇಲ್ಲಿನ ಹೆಣ್ಣುಮಕ್ಕಳ ಪರಿಸ್ಥಿತಿ ನನಗೆ ಗೊತ್ತು ಎಷ್ಟೋ ಹೆಣ್ಣು ಮಕ್ಕಳು ತಮ್ಮ ಓಷಧಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಇಲ್ಲಿ ದುಡಿದ ಹಣ ಬಳಸುತ್ತಿದ್ದಾರೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಇದು ನಿಮ್ಮ ಕಂಪನಿ ಎಂದು ಪ್ರಾಮಾಣಿಕವಾಗಿ ಕೆಲಸ ಮಾಡಿ, ಇದರಿಂದ ಕಂಪನಿ ಹಾಗೂ ನಿಮಗೂ ಒಳ್ಳೆಯದಾಗುತ್ತದೆ. ಸದ್ಯ ಕಂಪನಿ ಸಂಕಷ್ಟದಲ್ಲಿದೆ ಆದರೂ, ಕಾರ್ಮಿಕರ ಉದ್ಯೋಗದ ಸಲುವಾಗಿ ಕಂಪನಿ ನಡೆಸುತ್ತಿದ್ದಾರೆ. ಹೀಗಾಗಿ ಪಾಮಾಣಿಕವಾಗಿ ಕೆಲಸ ಮಾಡಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 