ಹಲಸಂಗಿ ಚಿನ್ನದ ಅಂಗಡಿಗೆ ಕನ್ನ: ಹಾಡು ಹಗಲೇ ದರೋಡೆ ವ್ಯಕ್ತಿ ವೂರ್ವನ ಮೇಲೆ ಗುಂಡು ಹಾರಿಸಿ ಪರಾರಿ
Halasangi gold shop robbed: Man shoots at shopkeeper in broad daylight, flees
ಚಡಚನ್ 27: ಹಲಸಂಗಿ ಗ್ರಾಮದ ಚಿನ್ನದ ಅಂಗಡಿಗೆ ನುಗ್ಗಿದ ಮುಸುಕುದಾರಿಗಳು ಗುಂಡು ಹಾರಿಸಿ ಅಂಗಡಿಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ದೋಚಿ ಪರಾರಿಯಾದ ಘಟನೆ ಹಾಡುಹಗಲೇ ಸೋಮವಾರ ಮದ್ಯಾಹ್ನ ನಡೆದಿದೆ.ಹಲಸಂಗಿ ಗ್ರಾಮದ ಮಹಾರುದ್ರ ಕಾಂಚಾಗಾರ ಎಂಬ ವ್ಯಕ್ತಿಗೆ ಸೇರಿದ ಚಿನ್ನದ ಅಂಗಡಿಯ ಮೇಲೆ ಮುಸುಕುಧಾರಿ ವ್ಯಕ್ತಿಗಳು ಇಬ್ಬರೂ ಮದ್ಯಾಹ್ನ 3:30 ಗಂಟೆಗೆ ಬೈಕ್ ಮೇಲೆ ಆಗಮಿಸಿ ಜನರನ್ನು ಚದುರಿಸಲು ಗುಂಡು ಹಾರಿಸಿ ಅಂಗಡಿಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ದೋಚಿ ಪರಾರಿಯಾಗಿದ್ದಾರೆ.
ಒಂದು ಗುಂಡು ಆತ್ಮಲಿಂಗ ಸಂಗಪ್ಪ ಹೂಗಾರ 18 ಎಂಬ ವ್ಯಕ್ತಿ ಯ ಬಲಗಾಲಿಗೆ ಗುಂಡು ತಗುಲಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿ ಎಲ್ ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.ದರೋಡೆ ಹಾಗೂ ಗುಂಡು ಹಾರಿಸಿದ ಸಿಸಿಟಿವ್ಹಿಯಲ್ಲಿ ಸಂಪೂರ್ಣ ಸೆರೆಯಾದ ವಿಡಿಯೋ ಕಲೆ ಹಾಕಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಸ್ಥಳಕ್ಕೆ ಧಾವಿಸಿದ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಸಿಪಿಐ ಪರಸುರಾಮ ಮನಗೂಳಿ, ಝಳಕಿ ಪೋಲಿಸ್ ಠಾಣೆಯ ಪಿಎಸ್‌ಐ ಮಂಜುನಾಥ ತಿರಕನ್ನವರ, ಚಡಚಣ ಪಿಎಸ್‌ಐ ಸೋಮೇಶ್ ಗೆಜ್ಜಿ, ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 