ಹಡಗಲಿ ; ರಾಗಿ-ಭತ್ತ.ಬೀಳಿ ಜೋಳ ಖರೀದಿ ಕೇಂದ್ರ ಆರಂಭ
ಹೂವಿನಹಡಗಲಿ 11: ಮುಂಗಾರು ಹಂಗಾಮಿನ ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಗುಣಮಟ್ಟದ ರಾಗಿ .ಭತ್ತ ಮತ್ತು ಬೀಳಿ ಜೋಳವನ್ನು ಖರೀದಿಸಲು ಬೆಂಬಲ ಬೆಲೆ ನಿಗದಿ ಪಡಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಕೃಷ್ಣನಾಯಕ ಹೇಳಿದರು.ರಾಜ್ಯ ಕೃಷಿ ಮಾರಾಟ ಮಂಡಳಿ.ಇಲ್ಲಿನ ಟಿಎಪಿಸಿಎಂ ಎಸ್ ವತಿಯಿಂದ ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಸರ್ಕಾರಿ ಬೆಂಬಲ ಬೆಲೆಯಲ್ಲಿ ರಾಗಿ .ಭತ್ತ. ಜೋಳ ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿ ಕೇಂದ್ರ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ರೈತರು ಬೆಳೆದ ಬೆಳೆಗಳನ್ನು ಮದ್ಯವರ್ತಿಗಳಿಗೆ ಕೊಡದೇ ನೇರವಾಗಿ ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿ ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ತಹಶಿಲ್ದಾರ ಸಂತೋಷ ಕುಮಾರ.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ.ಎಪಿಎಂಸಿ ಮಾಜಿ ಅದ್ಯಕ್ಷ ವಾರದಗೌಸ ಮೊಹಿದ್ದೀನ್. ದೀಪದ ಕೃಷ್ಣ. ಕೋಟೆ್.ಎಂ.ಪರಮೇಶ್ವರ್ಪ. ಹಾಲೇಶ.ಎಪಿಎಂಸಿ ಕಾರ್ಯ ದರ್ಶಿ ತಿಮ್ಮಪ್ಪನಾಯಕ್. ಟಿಎಪಿಸಿಎಂ ಎಸ್ ವ್ಯವಸ್ಥಾಪಕ ವೀರಣ್ಣ ಇದ್ದರು.