ಗುರು ಪೂರ್ಣಿಮೆಯ ಅಂಗವಾಗಿ ಶ್ರೀಮಠದ ಭಕ್ತರ ವತಿಯಿಂದ ನಡೆದ ಗುರುವಂದನಾ ಕಾರ‌್ಯಕ್ರಮ

ಗುರು ಪೂರ್ಣಿಮೆಯ ಅಂಗವಾಗಿ ಶ್ರೀಮಠದ ಭಕ್ತರ ವತಿಯಿಂದ ನಡೆದ ಗುರುವಂದನಾ ಕಾರ‌್ಯಕ್ರಮ Guruvandana program held by devotees of Sri Matha as part of Guru Purnima

ಗುರು ಪೂರ್ಣಿಮೆಯ ಅಂಗವಾಗಿ ಶ್ರೀಮಠದ ಭಕ್ತರ ವತಿಯಿಂದ ನಡೆದ ಗುರುವಂದನಾ ಕಾರ‌್ಯಕ್ರಮ 

ರಾಣಿಬೆನ್ನೂರ:14 ಗುರು ಕತ್ತಲಿನಿಂದ ಬೆಳಕಿನಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿಸುವವನೇ ಆಗಿದ್ದಾನೆ. ಆತನು ಸೇವಾ ಪ್ರಿಯನು, ಸದ್ಗುರು ಸಿದ್ಧಾರೂಢರ ಸೇವೆ ಮಾಡಿದ ಶಿಷ್ಯರು ಗುರು ಮುಟ್ಟಿ ಗುರುವಾದವರು ಅಧಿಕರು ಎಂದು ಗುರು ನಾಗರಾಜಾನಂದ ಸ್ವಾಮಿಜಿ ಹೇಳಿದರು. 

     ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಶ್ರೀಸಿದ್ಧಾಶ್ರಮದಲ್ಲಿ ಶನಿವಾರ ರಾತ್ರಿ ಗುರು ಪೂರ್ಣಿಮೆಯ ಅಂಗವಾಗಿ ಶ್ರೀಮಠದ ಭಕ್ತರ ವತಿಯಿಂದ ನಡೆದ ಗುರುವಂದನಾ ಕಾರ‌್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಾದ ನೀಡಿದ ಅವರು, ನಾವು ಮೊದಲಿಗೆ ಗುರುವಿಗೆ ಶರಣಾಗಬೇಕು. ಈ ಕುರಿತು ಗೀತೆಯಲ್ಲಿ ವೇದವ್ಯಾಸರು ಸ್ಪಷ್ಠವಾಗಿ ತಿಳಿಸಿದ್ದಾರೆ ಎಂದು ನುಡಿದರು.  

  ಮಹಾಭಾರತದಲ್ಲಿ ಶ್ರೀಕೃಷ್ಣಪರಮಾತ್ಮನು ಅರ್ಜುನನಿಗೆ ನೀನು ಮೊದಲು ನನಗೆ ಶರಣಾಗು. ಆಗ ನಾನು ನಿನಗೆ ಒಲಿಯುತ್ತನೇನೆ ಎಂದು ತಿಳಿಸಿರುವ ಹಾಗೆ, ಪಾಂಡವರು ಪಗಡಿಯಾಟದಲ್ಲಿ ಸೋತಾಗ ದ್ರೌಪತಿಯನ್ನು ಪಣಕ್ಕೆ ಹಚ್ಚಿ ಸೋತು ಅವರ ದಾಸಿಯಾದ ದ್ರೌಪತಿಯ ಸೀರೆಯನ್ನು ಕೌರವರ ಪೈಕಿ ದುಶ್ಯಾಸನ ಸೇಳೆಯುವಾಗ ಹೇ ಪರಮಾತ್ಮ ನನ್ನ ಮಾನ ಅಪಮಾನ ಎಲ್ಲವು ನಿನ್ನದೆ ಎಂದು ಒಂದು ಕೈ ಎತ್ತಿ ಪ್ರಾರ್ಥಿಸುತ್ತಾ ಇನ್ನೊಂದು ಕೈಯಲ್ಲಿ ಸೀರೆಯನ್ನು ಗಟ್ಟಿಯಾಗಿ ಹಿಡಿದು ಕೇಳಿದಾಗ ಕೃಪೆಯಾಗದಾಗ ಅಭಿಮಾನ ತೊರೆದು ಎರಡು ಕೈಗಳನ್ನು ಎತ್ತಿ ಪ್ರಾರ್ಥಿಸಿದಾಗ ಪರಮಾತ್ಮ ಒಲೆದು ಅವಳ ಮಾನ ರಕ್ಷಿಸುತ್ತಾನೆ. ಹಾಗೆಯೇ ಗುರುವಿಗೆ ಸಂಪೂರ್ಣ ಶರಣಾಗಬೇಕು ಆಗ ಗುರು ಕರುಣೆಯಾಗುತ್ತದೆ ಎಂದು ಶ್ರೀಗಳು ತಿಳಿಸಿದರು. 

     ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಗುರುಗಳ, ಹಿರಿಯರ, ಶರಣರ, ಸ್ವಾಮಿಗಳ ಪಾದವನ್ನು ವರ್ಷದಲ್ಲಿ ಒಂದೆರಡು ಬಾರಿ ಮುಟ್ಟಿ ನಮಸ್ಕರಿಸಿದರೆ ಅವರ ಜೀವನ ಬದುಕಿನುದ್ದಕ್ಕೂ ಪಾವನವಾಗುವುದು. ಸಾಧು, ಶರಣರ ಪಾದದಲ್ಲಿ ಪಾಪ-ಕರ್ಮಗಳನ್ನು ದಹಿಸುವ ಶಕ್ತಿ ಇದೆ. ಮನುಷ್ಯನಿಗೆ ಯಾವ ತೊಂದರೆಯಾದರು ಅದನ್ನು ಹೋಗಲಾಡಿಸಲು ಪಾದ ಸ್ಪರ್ಶವೇ ಕಾರಣವಾಗಿದೆ. ಪಾದದ ಮಹಿಮೆ ಅಪಾರ, ಅದಕ್ಕೆ ಅದ್ಭುತವಾದ ಶಕ್ತಿ ಇದೆ ಎಂದರು. 

  ಸದ್ಗುರು ಸಿದ್ಧಾರೂಢರ ಮೇಲೆ ಶರಣಾದವರೆಲ್ಲರೂ ಸದ್ಗತಿಯನ್ನು ಪಡೆದಿರುವ ಕುರಿತು ಹಲವಾರು ಮಹಾತ್ಮರು ತಿಳಿಸಿರುವ ಹಾಗೆ ತತಸ್ವರೂಪರಾದ ಗುರು ನಾಗರಾಜಾನಂದ ಸ್ವಾಮಿಜಿಗಳವರಿಗೆ  ಮೊದಲು ಶರಣಾಗೋಣ. ಜೀವನ ಪೂರ್ಣವಾಗಿ ನಂಬಿಕೆ, ವಿಶ್ವಾಸದ ಮೇಲೆಯೇ ನಿಂತಿದೆ. ಪ್ರತಿಯೊಬ್ಬರಲ್ಲಿ ನಂಬಿಕೆಯೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಓಷಧಿ, ವೈಧ್ಯಾಧಿಕಾರಿಗಿಂತಲೂ ಹತ್ತು ಪಟ್ಟು ಈ ನಂಬಿಕೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ನಂಬಿಕೆ ಇದ್ದರೆ ಜೀವನ ಪಾವನ, ಕಳೆದುಕೊಂಡರೆ ಜೀವನ ನಶ್ವರ ಎಂದರು. 

  ಗುರು ಸೇವಾಪ್ರೀಯನು ಆತನ ಸೇವೆಯನ್ನು ಅನನ್ಯ ಭಕ್ತಿಯಿಂದ ಸೇವೆ ಸಲ್ಲಿಸಿದರೆ ಗುರು ಒಲೆಯುತ್ತಾನೆ. ಗುರು ಒಲಿದರೆ ಜೀವನ ಪರಿಪೂರ್ಣವಾಗುತ್ತದೆ. ಆಗ ಅಂತ ಜನ್ಮಗಳಲ್ಲಿ ಮಾಡಿದ ಪಾಪ ಕರ್ಮಗಳು ನಶಿಸಿಸುತ್ತವೆ. ಆಗ ಮಾತ್ರ ಮನುಷಯ ಸದ್ಗತಿಯನ್ನು ಪಡೆಯಲು ಸಾಧ್ಯ ಎಂದು ಅರುಣಕುಮಾರ ತಿಳಿಸಿದರು. 

   ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರು ಗುರು ನಾಗರಾಜಾನಂದ ಸ್ವಾಮೀಜಿಗಳವರಿಗೆ ಕೀರೀಟ ತೊಡಿಸಿ ಪಾದ ಪೂಜೆ  ಹಾಗೂ ವಿವಿಧ ಹೂವುಗಳ ಮಳೆಗರೆದು ಮತ್ತು ಫಲ ಪುಷ್ಪ ಹಾಗೂ  ಮಹಾಮಂಗಳಾರತಿಯೊಂದಿಗೆ ಗುರು ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ 4 ಗಂಟೆಗೆ ಶ್ರೀಸಿದ್ಧಾರೂಢ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ವಿವಿಧ ಹೂವುಗಳಿಂದ ಅಲಂಕಾರ ಧಾರ್ಮಿಕ ವಿವಿಧ ಪೂಜಾ ವಿಧಾನಗಳನ್ನು ಭಕ್ತರು ಭಾವಪೂರ್ಣ ಭಕ್ತಿಯಿಂದ ನಡೆಸಿದರು.  

      ಶ್ರೀಮಠದ ಅಧ್ಯಕ್ಷ ಫಕ್ಕೀರ​‍್ಪ ಗೌಡ್ರ, ಜನಾರ್ಧನ ಕಡೂರ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಡಾಽ ಸುನಿತಾ, ಚನವೀರಗೌಡ ಪಾಟೀಲ, ಅರುಣಸ್ವಾಮಿ ಹಿರೇಮಠ, ಗೋಪಾಲ ಕೊಡ್ಲೇರ, ಶಿವಣ್ಣ ಬಣಕಾರ, ಗುಡ್ಡಪ್ಪ ಹೆಡಿಯಾಲ, ಪ್ರಕಾಶ ಚನ್ನಗೌಡ್ರ, ಗುರುಶಾಂತಪ್ಪ ಬಾಗಿಲದವರ, ಜಯಪ್ಪ ನೆಲವನ್ನಿ, ಮೈಲಾರೆಪ್ಪ ಸೋಮಲಾಪುರ, ಬಸವರಾಜ ಕಮಲಾಪುರ, ಬೀರೇಶ ಹರಿಹರ, ಆಕಾಶ ಗೌಡ್ರ, ಶಾಂತಮ್ಮ ಬಾಗಿಲದವರ, ಗಂಗಮಾಳವ್ವ ಹೆಡಿಯಾಲ, ಮಂಜುಳಾ ಪಾಟೀಲ, ಸುಮಾ ಚನ್ನಗೌಡ್ರ,  ಸೇರಿದಂತೆ ಐದು ನೂರಕ್ಕು ಅಧಿಕ ಭಕ್ತರು ಮತ್ತು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.