ಗುರುನಾಥ ಮುರಡಿ ಜಾನಪದ ಕಲಾ ರತ್ನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ

ಗುರುನಾಥ ಮುರಡಿ ಜಾನಪದ ಕಲಾ ರತ್ನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ Gurunath Muradi selected for the National Award for Folklore Art Ratna

 

ದೇವರಹಿಪ್ಪರಗಿ 08: ತಾಲೂಕಿನ ಪಡಗಾನೂರ ಗ್ರಾಮದ ಜಾನಪದ ಕಲಾವಿದ ಹಾಗೂ ಹಾಡಕಿ ಮಾಸ್ತರ ಎಂದೆ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಗುರುನಾಥ ಮಾಸ್ತರ ಮುರಡಿ ಅವರಿಗೆ ರಾಷ್ಟ್ರಮಟ್ಟದ ಜಾನಪದ ಕಲಾ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ಬೆಂಗಳೂರಿನ ಸರ್ವೆ ಕಲ್ಚರಲ್ ಅಕಾಡೆಮಿ ಅರ​‍್ಿಸುವ 74ನೇ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವದ ಸಮ್ಮೇಳನ ಅಧ್ಯಕ್ಷ ಸಾಹಿತಿ, ಹಿರಿಯ ಪತ್ರಕರ್ತ ಡಾ. ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ನಯನ ರಂಗ ಮಂದಿರದಲ್ಲಿ  ದಿ.11ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9:30ವರೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅಕಾಡೆಮಿಯ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಗುರುನಾಥ ಮುರಡಿ ಅವರು ಹಲವಾರು ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ದಾಟಿಯಲ್ಲಿ ಹಾಡಕಿ (ಡೊಳ್ಳಿನ ಪದ) ಹಾಡುಗಳನ್ನು ಹಾಡುವ ಮೂಲಕ ಉತ್ತರ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಜಾನಪದ ಕಲೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮ ಅಭಿಮಾನಿಗಳನ್ನು ಸೃಷ್ಟಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಜೊತೆ ಪ್ರಕಾಶ್ ಮಾಸ್ತರ, ಸುಲೇರ ಜವಳಗಿ, ಪಿಂಟು ಮಾಸ್ತರ ಅಳ್ಳಗಿ, ರಾಹುಲ್ ಮಾಸ್ತರ ಉಟಗಿ, ದೀಪಾಲಿ ಚಿಂಚೊಳ್ಳಿ ಇವರೆಲ್ಲರಿಗೂ ಬಸವ ಶಿರೋಮಣಿ ರಾಷ್ಟ್ರ​‍್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.