ಜುಗುಳ ಗ್ರಾಮದಲ್ಲಿ 31 ರಂದು ಗುರುನಮನ ಮಹೋತ್ಸವ

ಜುಗುಳ ಗ್ರಾಮದಲ್ಲಿ 31 ರಂದು ಗುರುನಮನ ಮಹೋತ್ಸವ Gurunaman Mahotsav on the 31st in Jugula village

               ಕಾಗವಾಡ 28 : ತಾಲೂಕಿನ ಜುಗೂಳ ಗ್ರಾಮದಲ್ಲಿ ವೇದಾಂತ ಕೇಸರಿ ಪಪೂ ಮಲ್ಲಿಕಾರ್ಜುನ ಮಹಾಶಿವಯೋಗಿಗಳ ಮತ್ತು ಜ್ಞಾನಯೋಗಿ ಪಪೂ ಸಿದ್ಧೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವವು ಬುಧವಾರ ದಿ. 31 ರಂದು ನಡೆಯಲಿದೆ ಎಂದು ತಿಕೋಟಾ ವಿರಕ್ತಮಠದ ಪಪೂ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದ್ದಾರೆ. ಅವರು, ರವಿವಾರ ದಿ. 28 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಇಂದಿನಿಂದ ಅನೇಕ ಶ್ರೀಗಳಿಂದ ಪ್ರವಚನ ಕಾರ್ಯಕ್ರಮಗಳು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಸಭಾಭವನದಲ್ಲಿ  ಪ್ರಾರಂಭಗೊಂಡಿವೆ. ಬುಧವಾರ ದಿ.31ರಂದು ಗುರುನಮನ ಕಾರ್ಯಕ್ರಮವು ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲಾ ಆವರಣದಲ್ಲಿ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಕನ್ನೆರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.

             ಈ ಕಾರ್ಯಕ್ರಮವು ಪಪೂ ಚನ್ನಮಲ್ಲಿ ಕಾರ್ಜುನ ಸ್ವಾಮಿಗಳು ವೀರಕ್ತಮಠ ತಿಕೋಟಾ, ಡಾ. ಅಭಿನವ ಬ್ರಹ್ಮಾನಂದ ಸ್ವಾಮಿಗಳು  ಗುರುದೇವ ಬ್ರಹ್ಮಾನಂದ ಆಶ್ರಮ ಪರಮಾನಂದವಾಡಿ, ಪಪೂ.ಬಸವಲಿಂಗ ಮಹಾಸ್ವಾಮಿಗಳು ಅಧ್ಯಕ್ಷ ಗುರುಗಳು ಜ್ಞಾನಯೋಗಾಶ್ರಮ ವಿಜಯಪುರ, ಪಪೂಯತೀಶ್ವರಾನಂದ ಸ್ವಾಮಿಗಳು ಗುರುದೇವ ಆಶ್ರಮ ಕಾಗವಾಡ ಇವರುಗಳ ಘನ ಉಪಸ್ಥಿತಿಯಲ್ಲಿ ನಡೆಯಲಿದೆ. ನಂತರ ಮಧ್ಯಾಹ್ನ ದಾನಿಗಳಿಂದ ಮಹಾಪ್ರಸಾದ ಸೇವೆ ನಡೆಯಲಿದ್ದು, ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ , ಭಾಗವಹಿಸಿ, ಈ ಭಕ್ತಿಮಯ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಜುಗೂಳ ಮಂಗಾವತಿ ಹಾಗೂ ಶಹಾಪೂರ ಗ್ರಾಮಸ್ಥರ ಪರವಾಗಿ ಅವರು ವಿನಂತಿಸಿದ್ದಾರೆ.