ಶಾಲಾ ದಿನಗಳ ಮಧುರ ನೆನಪುಗಳನ್ನು ಮೆಲುಕು ಹಾಕಲು ಗುರುವಂದನೆ ಕಾರ್ಯಕ್ರಮ
Guru Vandane program to relive sweet memories of school days
ಧಾರವಾಡ ದಿ 17: ಜನತಾ ಶಿಕ್ಷಣ ಸಮಿತಿ (ಎಖಖ) ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2008-09ರ ಸಾಲಿನ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಗುರುಗಳಿಗೆ ಗೌರವ ಸಲ್ಲಿಸಲು ಹಾಗೂ ತಮ್ಮ ಶಾಲಾ ದಿನಗಳ ಮಧುರ ನೆನಪುಗಳನ್ನು ಮೆಲುಕು ಹಾಕಲು ಭಾನುವಾರ (ನವೆಂಬರ್ 16, 2025) ರಂದು ಜನತಾ ಶಿಕ್ಷಣ ಸಮಿತಿ (ಎಖಖ) ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾವಪೂರ್ಣ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಶಿಕ್ಷಕರು 2008-09ನೇ ಸಾಲಿನ ವಿದ್ಯಾರ್ಥಿಗಳ ಪ್ರತಿ ಪ್ರಯತ್ನ ಮತ್ತು ಚಟುವಟಿಕೆಗಳ ನೆನಪುಗಳನ್ನು ಮೆಲುಕು ಹಾಕಿ, ಅವರ ಪ್ರೀತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಬಳಿಕ, ತಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯಕ್ಕಾಗಿ ಆಶೀರ್ವಾದ ನೀಡಿ ಹಾರೈಸಿದರು. ಈ ಗುರುವಂದನೆ ಕಾರ್ಯಕ್ರಮವು ವಿದ್ಯಾರ್ಥಿಗಳ ಮತ್ತು ಗುರುಗಳ ನಡುವಿನ ಅನನ್ಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿ, ಎಲ್ಲರಿಗೂ ಮರೆಯಲಾಗದ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಮೈನಾವತಿ ದೀವಟೆ, ಶಿಕ್ಷಕರಾದ ಗಿರಿಜಾ ಕುರುವತ್ತಿ, ಅರುಣ್ ಕುಮಾರ್ ಅಂಗಡಿ, ವೃಷಭದೇವ್ ಕುರ್ಕುರಿ, ಮಂಜುನಾಥ್ ದಾಸನಕೊಪ್ಪ, ವಂದನಾ, ಜಯ ಮುಲಂಗಿ, ವಿಜಯಲಕ್ಷ್ಮಿ, ಶೀತಲ್ ಕುಂದಾರ್, ನದಾಫ್ ಮತ್ತು ಇತರ ಶಿಕ್ಷಕ ವೃಂದದವರಿಗೆ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಗುರುಗಳಿಗೆ ಫಲ-ಪುಷ್ಪ ಮತ್ತು ಸ್ಮರಣಿಕೆ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ವೀರೇಶ, ವಿಶ್ವನಾಧ, ಸೋಮಶೇಖರ, ರವಿ, ಪ್ರವೀಣ, ಮಂಜುನಾಥ, ಭಾಗೀರಥಿ, ಮಂಜುಳಾ, ಅರ್ಚನಾ, ಸಂಗೀತ, ಸೌಮ್ಯ, ಪ್ರಜ್ಞಾ, ನೇತ್ರಾವತಿ, ನಿಖಿತಾ, ರಂಜಿತಾ ಜಾಧವ, ಹನುಮಂತ, ಮುತ್ತು, ರಾಘವೇಂದ್ರ, ವಿಶಾಲ, ಪ್ರಮೋದ್, ಶಾಂತವೀರ, ರಾಜಶೇಖರ, ಹರೀಶ, ಆಸಿಫ, ಆನಂದ, ಗಣೇಶ ಮತ್ತು ರಮೇಶ ಸೇರಿದಂತೆ 2008-09ರ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 