‘ರುದ್ರ ಪಠಣದ’ ಗುರುವಂದನಾ ಕಾರ್ಯಕ್ರಮ
Guru Vandana program: Dharwad
ಧಾರವಾಡ 17: ಮಹಿಳೆಯರು ದಿನನಿತ್ಯ ರುದ್ರಪಠಣ ಮಾಡುವುದರಿಂದ 32 ಕಿ.ಮೀ ದೂರದಷ್ಟು ಸಕಾರಾತ್ಮಕ ಶಕ್ತಿ ಪಸರಿಸುತ್ತದೆ ಮತ್ತು ಇದರ ಮಹತ್ವ ಅಗಾಧವಾಗಿದೆ ಎಂದು ಮಂಗಳಾ ಮಠದ ಹೇಳಿದರು.
ಅವರು ರೆವಿನ್ಯೂ ಕಾಲನಿಯ ಸಿದ್ಧಾರೂಢ ಮಠದ ಸಭಾಭವನದಲ್ಲಿ ತರಂಗಿಣಿ ಮಹಿಳಾ ಮಂಡಳದ ಸದಸ್ಯೆಯರು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಆಧುನಿಕ ದಿನಮಾನಗಳಲ್ಲಿ ಮಹಿಳೆಯರು ತುಂಬಾ ಜಾಗರೂಕತೆ ವಹಿಸಬೇಕು. ನಿರಂತರ ಅಧ್ಯಯನ ಮಾಡುವುದರಿಂದ ದೈವಿಕ ಶಕ್ತಿ ಹೆಚ್ಚುತ್ತದೆ ಎಂದು ಮಠದ ಅಭಿಪ್ರಾಯಪಟ್ಟರು.
ಕವಿತಾ ಹಿರೇಮಠ ಅತಿಥಿಯಾಗಿ ಮಾತನಾಡಿದರು. ರೇಣು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ಮನ್ನಿಕೇರಿ ಮತ್ತು ತಂಡದವರು ಪ್ರಾರ್ಥನೆ ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ವಿಜಯಲಕ್ಷ್ಮಿ ಹಿರೇಮಠ ಮಾತನಾಡಿದರು. ಜ್ಯೋತಿ ಬಳಿಗಾರ ವಂದಿಸಿದರು. ತರಂಗಿಣಿ ಮಹಿಳಾ ಮಂಡಳದ ಸದಸ್ಯೆಯರೆಲ್ಲರೂ ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 