ಯಾಳವಾರ ಎಸ್‌ಎಸ್ವಿವಿಎಸ್ ಪ್ರೌಢಶಾಲೆಯಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ
Guru Vandana, Friendship Gathering Program at SSVVS High School, Yalwar
ದೇವರಹಿಪ್ಪರಗಿ 07: ತಾಲೂಕಿನ ಯಾಳವಾರ ಗ್ರಾಮದ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ 2006ನೇ ಸಾಲಿನ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಿತು. ಶಿಷ್ಯರು ತಮ್ಮ ಜೀವನವನ್ನು ರೂಪಿಸಿದ ಗೌರವ, ಕೃತಜ್ಞತೆ ಮತ್ತು ಪ್ರೀತಿಯನ್ನು ಹೃದಯಪೂರ್ವಕವಾಗಿ ಸಲ್ಲಿಸಿದರು.
ಹಿರಿಯ ವಿದ್ಯಾರ್ಥಿಗಳು ಒಗ್ಗೂಡಿ, ತಾವು ಕಲಿತ ಶಾಲೆಗೆ ಮರಳಿ, ತಮ್ಮ ಬಾಲ್ಯದ ಶಿಕ್ಷಕರನ್ನು ಸನ್ಮಾನಿಸಿ, ನೆನಪುಗಳನ್ನು ಹಂಚಿಕೊಂಡರು. ಶಿಕ್ಷಕರಿಗೆ ಶಾಲು ಹೊದಿಸಿ, ಸ್ಮರಣಿಕೆಗಳ ಮೂಲಕ ಗೌರವಿಸಿದರು. ಕಾರ್ಯಕ್ರಮದ ಕುರಿತು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಶಿಷ್ಯ ವರ್ಗಕ್ಕೆ ಹಿತನುಡಿಗಳನ್ನು ಹೇಳಿದರು. ಶಿಕ್ಷಕರಿಂದ ಹಿರಿಯ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ಸ್ವೀಕರಿಸಿದರು. ಎಸ್‌ಎಸ್ವಿವಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ನಾಡಗೌಡ ಮಾತನಾಡಿ, ಇಂದಿನ ಮಕ್ಕಳಿಗೆ ಶಿಕ್ಷಣ ಮಾತ್ರ ನೀಡಿದರೆ ಸಾಲದು; ಸಂಸ್ಕಾರ ಬಹಳ ಮುಖ್ಯ. ಒಳ್ಳೆಯ ಸಂಸ್ಕಾರ ದೊರೆತರೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.
ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.ಎಸ್‌ಎಸ್ವಿವಿಎಸ್ ಸಂಸ್ಥೆಯ ಅಧ್ಯಕ್ಷ ರಾಜುಗೌಡ ಸಂ. ನಾಡಗೌಡ, ನಿವೃತ್ತ ಮುಖ್ಯಗುರುಗಳಾದ ಎಂ.ಡಿ. ಬಳಗಾರ, ಎಂ.ವೈ. ಜಾಯವಾಡಗಿ, ನಿವೃತ್ತ ಶಿಕ್ಷಕ ಎಂ.ಬಿ. ಬಿರಾದಾರ, ಶಿಕ್ಷಕರಾದ ಕೆ.ಐ. ಹೊಸಮನಿ, ಎಸ್.ಎನ್. ಥಬ್ಬಣ್ಣವರ, ಎಸ್.ಎಸ್. ಕಾರಜೋಳ, ಎಂ.ಎಸ್. ಬಾಗೇವಾಡಿ, ಸಿ.ಸಿ. ಬಿರಾದಾರ, ನಿವೃತ್ತ ಗ್ರಂಥಪಾಲಕ ಪಿ.ಎಂ. ಮಠಪತಿ,
ನಿವೃತ್ತ ಗುಮಾಸ್ತ ಎನ್.ಎಸ್. ಬಡಗಿ, ಗ್ರಾಮದ ಪ್ರಮುಖರಾದ ಆರ್.ಎಸ್. ಪಾಟೀಲ, ಬಿ.ಆರ್. ಪಾಟೀಲ, ಸೋಮನಗೌಡ ಮೂಲಿಮನಿ ಇದ್ದರು.ಹಿರಿಯ ವಿದ್ಯಾರ್ಥಿನಿ ರೇಷ್ಮಾ ಮೋಮಿನ್ ಸ್ವಾಗತಿಸಿದರು. ಕುಮಾರಿ ಶ್ರಾವ್ಯಾ ಪಾಟೀಲ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಎಸ್‌ಎಸ್ವಿವಿಎಸ್ ಪಪೂ ಕಾಲೇಜಿನ ಅತಿಥಿ ಉಪನ್ಯಾಸಕ ಹುಸೇನಸಾಬ್ ಕರಡಿ ನಿರೂಪಿಸಿ, ವಂದಿಸಿದರು. ಕೊನೆಯಲ್ಲಿ ಅಗಲಿದ ಹಿರಿಯ ವಿದ್ಯಾರ್ಥಿ ಶಿವಶಂಕರ ಥಬ್ಬಣ್ಣವರ ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 