ಗುರು-ಸ್ಮರಣೋತ್ಸವ ಕಾರ್ಯಕ್ರಮ: ಡಿ.25 ರಿಂದ ವಿವಿಧ ಕಾರ್ಯಕ್ರಮ
Guru-Smaranatsav program: Various programs from December 25th
ಕಾಗವಾಡ 26: ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ಮಹಾತಪಸ್ವಿ, ನಡೆದಾಡುವ ದೇವರು ಪ ಪೂ ಸಿದ್ದೇಶ್ವರ ಮಹಾ ಸ್ವಾಮಿಗಳನ್ನು ಸ್ಮರಿಸುವ ಗುರು-ಸ್ಮರಣೋತ್ಸವ ಕಾರ್ಯಕ್ರಮ ಕಾಗವಾಡದ ಗುರುದೇವ್ ಆಶ್ರಮದಲ್ಲಿ ಗುರುವಾರ ಡಿ.25 ರಿಂದ ಜ. 01ರ ವರಿಗೆ ವಿವಿಧ ಕಾರ್ಯಕ್ರಮಗಳಿಂದ ಜರುಗಲಿದೆ ಎಂದು ಕೊಲ್ಲಾಪುರ ಕನೇರಿ ಮಠದ ಬಸವರಾಜ ದೇವರು ಕಾಗವಾಡದಲ್ಲಿ ಹೇಳಿದರು.
ಗುರುವಾರ ದಿ.25 ರಂದು ಕಾಗವಾಡದ ಗುರುದೇವ ಆಶ್ರಮದಲ್ಲಿ ಗುರು ಸ್ಮರಣೋತ್ಸವ ಬಗ್ಗೆ ವಿವರವಾದ ಮಾಹಿತಿ ನೀಡುತ್ತ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಸದಲಗಾ ಗೀತಾಶ್ರಮದ ಡಾ. ಶ್ರದ್ದಾನಂದ್ ಸ್ವಾಮೀಜಿ ಮತ್ತು ಶುಕ್ರವಾರ ರಂದು ಕೊಡೆಕಲ ಬೂದಿಹಾಳ ಮಠದ ಸ್ವಾಮೀಜಿ, ಅತ್ತಿಗೇರಿ ಮಠದ ಅಧ್ಯಾತ್ಮಂದ ಸ್ವಾಮೀಜಿ, ತಪಸಿ ಆಶ್ರಮದ ಪರಮಪೂಜ್ಯ ಮಾತೋಶ್ರೀ ಜ್ಞಾನಾತ್ಮತಾಯಿ ಪ್ರವಚನ ನೀಡಲಿದ್ದಾರೆ. ಮಂಗಳವಾರ ರಂದು ವಿರಕ್ತಮಠ ಬಿಳೂರದ ರಾಜ ಯೋಗಿ ಗುರುಚನಬಸವ ಮಹಾಸ್ವಾಮಿಜಿಗಳು ಪ್ರವಚನ ನೀಡಲಿದ್ದಾರೆ. ಬುಧವಾರ ದಿ. 31 ರಂದು ಜ್ಞಾನಯೋಗ ಆಶ್ರಮ ಲಕ್ಷಾನಟ್ಟಿ ಶಿವಾನಂದ ಮಹಾಸ್ವಾಮೀಜಿ ಇವರು ಪ್ರವಚನ ನೀಡಲಿದ್ದಾರೆ.
ಜನವರಿ 1 ರಂದು ಹಳೆ ಹುಬ್ಬಳ್ಳಿ ನೀಲಕಂಠ ಮಠದ ಶ್ರೀ ಶ್ರೀ 1008 ಶ್ರೀ ಮಾನ ಜಗದ್ಗುರು ಶಿವಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು ಇವರು ಸಾನಿಧ್ಯ ವೈಸಿ ಆಶೀರ್ವಚನ ನೀಡಲಿದ್ದಾರೆ.ಬೇರೆ ಬೇರೆ ಮಠಗಳ ಮಹಾಸ್ವಾಮೀಜಿಗಳು ಒಂದುಗೂಡಿ ಗುರು ಸ್ಮರಣೋಸ್ತವ ನಿಮಿತ್ಯ ಪ್ರವಚನ ನೀಡಲಿದ್ದಾರೆ. ಇದರ ಸದುಪಯೋಗ ಎಲ್ಲ ಸದ್ಭಕ್ತರು ಪಡೆದುಕೊಳ್ಳಬೇಕೆಂದು ಬಸವರಾಜದೇವರು ಸ್ವಾಮೀಜಿ ಕರೆ ನೀಡಿದ್ದಾರೆ.
ಶಿವಾನಂದ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಶ್ರೀ ಗುರುದೇವ ಆಶ್ರಮದ ಸದ್ಭಕ್ತರಾದ ಜೆ.ಕೆ ಪಾಟೀಲ ಇವರು ಮಾಹಿತಿ ನೀಡುವಾಗ, ಗುರುದೇವ ಆಶ್ರಮದಲ್ಲಿ ಗುರುವಾರ ದಿನಾಂಕ 1 ರಂದು ಗುರು ಸ್ಮರಣೋಸ್ತವ ನಿಮಿತ್ಯ ಜಪ ಯಜ್ಞ ಹಾಗೂ ಆಶೀರ್ವಚನ ಕಾರ್ಯಕ್ರಮ ನೆರವಿರಲಿದೆ.ಶುಕ್ರವಾರ ದಿ. 2 ರಂದು ಬೆಳಗ್ಗೆ ಶ್ರೀ ಮಲ್ಲಿಕಾರ್ಜುನ್ ಮಹಾಸ್ವಾಮೀಜಿಗಳ ಪಾದುಕುಗಳ ಮಹಾಪೂಜೆ ಕಣೆರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜರುಗಲಿದೆ. ಅದೇ ದಿನ ಬೆಳಗ್ಗೆಯಿಂದ ಸಂಜೆವರೆಗೆ ಅಂಕಲಿಯ ಡಾ ಮಗದುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಓಷಧ ವಿತರಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಬೇರೆ ಬೇರೆ ಕಾಯಿಲೆಗಳ ಬಗ್ಗೆ ತಪಾಸಣೆ ಹಾಗೂ ಉಪಚಾರ ವ್ಯವಸ್ಥೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಹ್ವಾನಿಸಿದ್ದಾರೆ. ಗುರು ಸ್ಮರಣೋತ್ಸವ ನಿಮಿತ್ಯವಾಗಿ ಕಾಗವಾಡದಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮಕ್ಕಾಗಿ ಸ್ಥಳೀಯ ಬೇರೆ ಬೇರೆ ಸಂಘಟನೆಗಳು, ಧರ್ಮ ಪ್ರೇಮಿಗಳು ಕಾರ್ಯಕ್ರಮ ಯಶಸ್ಸುಗೊಳಿಸಲು ಮುಂದಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 