ಗುರುವಿನ ಸ್ಥಾನ ಪವಿತ್ರವಾಗಿದ್ದು ತಮ್ಮ ಶಿಷ್ಯ ಎಷ್ಟೇ ಉನ್ನತ ಸ್ಥಾನ ಪಡೆದರೂ ಗುರು-ಶಿಷ್ಯರ ಸಂಬಂಧ ಉತ್ತಮವಾಗಿರುತ್ತದೆ
ಸಂಬರಗಿ 25 : ಗುರುವಿನ ಸ್ಥಾನ ಪವಿತ್ರವಾಗಿದ್ದು ತಮ್ಮ ಶಿಷ್ಯ ಎಷ್ಟೇ ಉನ್ನತ ಸ್ಥಾನ ಪಡೆದರೂ ಗುರು-ಶಿಷ್ಯರ ಸಂಬಂಧ ಉತ್ತಮವಾಗಿರುತ್ತದೆ. ಉನ್ನತ ಸ್ಥಾನ ಪಡೆದ ನಂತರವೂ ತಮ್ಮ ಗುರುವಿನ ಪಾದ ಹಿಡಿದರೂ ತಪ್ಪಲ್ಲ ಗುರುವೇ ದೇವರು ಎಂದು ಸಂಬೋದಿಸಿ ಅವರ ಆಶೀರ್ವಾದ ಪಡೆದುಕೊಳ್ಳುವದು ತಪ್ಪಲ್ಲ ಗುರು-ಶಿಷ್ಯರ ಸಂಭಂದ ಪವಿತ್ರವಿದೆ ಎಂದು ಕೌಲಗುಡ್ಡ-ಹಣಮಾಪೂರ ಮಠದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಗುಂಡೇವಾಡಿ ಗ್ರಾಮದಲ್ಲಿ ಕಾಡಸಿದ್ದೇಶ್ವರ ಪ್ರೌಢಶಾಲೆ 1987-2010 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ದೀಪ ಪ್ರಜ್ವಲಿಸುವದರ ಮೂಲಕ ಚಾಲನೆ ನೀಡಿ ಆಶಿರ್ವಚನ ನೀಡುತ್ತಾ, ಶಿಕ್ಷಣ ಸೇವೆ ನಿಸ್ವಾರ್ಥ ಸೇವೆಯಾಗಿದ್ದು ಇದರಿಂದ ಉತ್ತಮ ಸಮಾಜ ನಿರ್ಮಿಸುವಲ್ಲಿ ಸಾಧ್ಯವಿದೆ ಶಿಕ್ಷಣ ಎಂಬುದು ಮನುಷನ ಮೂರನೇ ಕಣ್ಣಾಗಿದ್ದು ಅದರ ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರಿದೆ 1987 ರಲ್ಲಿ ದಿವಂಗತ ಸಚಿವರಾದ ವ್ಹಿ.ಎಲ್ ಪಾಟೀಲ್ ಅವರನ್ನು ನಮ್ಮ ಗ್ರಾಮದಲ್ಲಿ ಅಭಿವೃದ್ದಿ ಕುಂಠಿತವಾದರೂ ನಮ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿಕೊಡಿ ಎಂದು ಮನವಿ ಮಾಡಿಕೊಂಡಾಗ ಪ್ರಥಮವಾಗಿ ಗುಂಡೇವಾಡಿ ಗ್ರಾಮದಲ್ಲಿ ಶಿಕ್ಷಣ ಪ್ರಸಾರಕ ಮಂಡಳದ ವತಿಯಿಂದ ಪ್ರೌಢಶಾಲೆ ಪ್ರಾರಂಭ ಮಾಡಿ ಅವರ ಆಶಿರ್ವಾದದಿಂದ ಈ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತಮಟ್ಟದ ಸ್ಥಾನಕ್ಕೆ ಈ ಗ್ರಾಮದ ವಿದ್ಯಾರ್ಥಿಗಳು ಹೋಗಿದ್ದಾರೆ ಎಂಬುದು ಎಲ್ಲರಿಗೂ ಸಂತಸದ ವಿಷಯವಾಗಿದೆ ಎಂದರು. ಮ ಘು ಚಿ ಡಾ.ಪವಾಡೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು. ಈ ವೇಳೆ ವೈದ್ಯರಾದ ಆನಂದ ಗುಂಜಿಗಾಂವಿ ಮಾತನಾಡಿ,ಯಾವುದೇ ಗುರಿ ಮುಟ್ಟಬೇಕಾದರೆ ಹಿಂದೆ ಗುರುವಿನ ಆಶಿರ್ವಾದ ಮುಂದೆ ಗುರಿ ಇದ್ದಾಗ ಮಾತ್ರ ಉನ್ಬತ ಸ್ಥಾನಕ್ಕೇರಲು ಸಾಧ್ಯವಿದೆ.ಆ ಗುರುಗಳ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ ಎಂದರ ಈ ವೇಳೆ ಶಾಲೆಯ ಮಾಜಿ ಗುರುಗಳಾದ ಆರ್ ಎಸ್ ವೀರ,ಎಸ್ ಬಿ ಗುಂಜಿಗಾಂವಿ.ಜಿ.ಆರ್.ಅವಟಿ.ಪಿ.ಎಚ್.ಬಣಜವಾಡ,ಎಸ್ ಬಿ ಮಗದುಮ್,ವಿ ಎಮ್ ಬಿರಾದಾರ,ಎ ಆರ್ ಭೋಸಗೆ ವಿ ಎಮ್ ಮಮದಾಪೂರ,ಎಮ್ ಎಸ್ ಮನಗೂಳಿ,ಎ.ಬಿ.ಮಗದುಮ್,ಬಿ ಎಸ್ ಶಿಂಗೆ ಕಸ್ತೂರಿ ಕಾರಜನಗಿ,ಭೋದಕೇತರ ಸಿಬ್ಬಂದಿಗಳಾದ ಎಸ್ ಎಸ್ ಡೂಗನವರ,ಎಸ್ ಎನ್ ಸಂಕಪಾಳ,ಎ.ಬಿ ಪಾಟೀಲ್ ಎಲ್ ಬಿ ಮಾಳಿ,?? ಡಿ ಮೋಹಿತೆ ಇವರನ್ನು ಸತ್ಕರಿಸಲಾ ಈ ವೇಳೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಗೂಳಪ್ಪ ಜತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರವಿ ಕಾಂಬಳೆ.ಶಿವಪುತ್ರ ಗುಂಜಿಗಾಂವಿ,ಆಸ್ಪಕ ಘಟನಟ್ಟಿ,ಶಿವಾನಂದ ಗೊಲಭಾವಿ,ಸದಾಶೀವ ಹೊನಗೊಂಡ,ಅಭಾ ಚೌಹಾನ,ಬಾಳಕೃಷ್ಣ ಚೌಹಾನ್ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಮಾಜಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೋಟೊ ಶೀರ್ಷಿಕೆ:
ಗುಂಡೇವಾಡಿ ಗ್ರಾಮದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನದಲ್ಲಿ ಅಮರೇಶ್ವರ ಮಹಾರಾಜರು ದೀಪ ಬೆಳಗುವುದರ ಮೂಲಕ ಚಾಲನೆ ನೀಡುತ್ತಿರುವದು ಈ ವೇಳೆ ಪವಾಡೇಶ್ವರ ಮಹಾಸ್ವಾಮಿಗಳು ಹಾಗೂ ಶಿಕ್ಷಕ ವೃಂದದವರು (23ಸಂಬರಗಿ 01)