ಬಿಜೆಪಿ ನಗರ ಮಂಡಳ ವತಿಯಿಂದ ಮಾರ್ಗದರ್ಶನ ಕಾರ್ಯಾಗಾರ
Guidance workshop by BJP Nagar Mandal
ವಿಜಯಪುರ 03 : ಬಿಜೆಪಿ ಪಕ್ಷದ ಬಗ್ಗೆ ಯಾವ ಕಾಂಗ್ರೆಸ್ ನಾಯಕರು ಅಂದು ಹಾಸ್ಯ ಮಾಡಿದ್ದರೋ ಅದೇ ನಾಯಕರು ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು. ವಿಜಯಪುರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ನಗರ ಮಂಡಳ ವತಿಯಿಂದ ಭೂತ್ ಮಟ್ಟದ ಏಜೆಂಟರಿಗೆ ಆಯೋಜಿಸಲಾಗಿದ್ದ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಬಿಜೆಪಿ ಪರವಾದ ಅಲೆ ಇದೆ, ಪ್ರಧಾನಿ ನರೇಂದ್ರ ಮೋದಿ ಅವರ ಸಮರಾ್ಣ ಮನೋಭಾವ, ಅಭಿವೃದ್ಧಿಪರ ದೃಷ್ಟಿಕೋನದ ನಾಯಕತ್ವದಿಂದ ಬಿಜೆಪಿ ಬಲಿಷ್ಠವಾಗಿದೆ, ಕಾಂಗ್ರೆಸ್ ಇಷ್ಟಪಡುತ್ತಿದ್ದ ಅನೇಕರು ಸಹ ಇಂದು ಬಿಜೆಪಿಗೆ ಒಲವು ಬೆಳೆಸಿಕೊಳ್ಳುತ್ತಿದ್ದಾರೆ, ಅಂದು ಆರಂಭದ ದಿನದಲ್ಲಿ ಬೆರಳಣಿಕೆಯಷ್ಟು ಸೀಟುಗಳನ್ನು ಗೆಲ್ಲದ ಬಿಜೆಪಿಯನ್ನು ನೋಡಿ ನಗುತ್ತಿದ್ದ ಕಾಂಗ್ರೆಸ್ ನಾಯಕರೇ ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿರುವ ಹಡಗು, ಶೀಘ್ರವೇ ಅದು ಮುಣುಗುತ್ತದೆ, ಅವರ ರಾಹುಲ್ ಗಾಂಧೀಗೆ ಬದ್ಧತೆಯೇ ಇಲ್ಲ, ಸಂಸತ್‌ನಲ್ಲಿ ಏನು ಮಾತನಾಡುತ್ತಾರೋ ಅವರಿಗೆ ಪರಿವೆಯೇ ಇಲ್ಲ ಎಂದರು.
ಕಾಂಗ್ರೆಸ್‌ನಂತೆ ಬಂಗಾರದ ಚಮಚ ಇರಿಸಿಕೊಂಡು ಜನ್ಮತಾಳಿದ ಪಕ್ಷ ಬಿಜೆಪಿ ಅಲ್ಲ, ಬಿಜೆಪಿ ಬೆಳವಣಿಗೆಯ ಹಿಂದೆ ನೂರಾರು ಶ್ರೇಷ್ಠ ದಿಗ್ಗಜ ನಾಯಕರ ತ್ಯಾಗ, ಪರಿಶ್ರಮ ಅಡಗಿದೆ, ಪಕ್ಷ ಕಟ್ಟಿದ ಅನೇಕರು ಕಾರ್ೋರೇಟರ್ ಸಹ ಆಗಲಿಲ್ಲ, ನಮಗಾಗಿ ಅವರು ಪಕ್ಷ ಕಟ್ಟಿದರು, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎನ್ನುವ ಸಿದ್ಧಾಂತ ಬಿಜೆಪಿಯದ್ದು ಎಂದರು. ಬಿಜೆಪಿ 8 ವಿಧಾನಸಭಾ ಕ್ಷೇತ್ರದಲ್ಲಿಯೂ ಬಲಿಷ್ಠವಾಗಿದೆ, ಈಗ ಪಕ್ಷ ಸಂಘಟನೆ ಅತ್ಯಂತ ಶಿಸ್ತುಬದ್ಧವಾಗಿ ನಡೆಯುತ್ತಿದೆ ಅದರಲ್ಲಿ ಎರಡು ಮಾತಿಲ್ಲ, ಈ ಸಂಘಟನೆ ಇನ್ನಷ್ಟೂ ಬಲಿಷ್ಠವಾಗಬೇಕು, ಭೂತ್ ಮಟ್ಟದ ಏಜೆಂಟರು ಪಕ್ಷ ಸಂಘಟನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ, ಕಾಂಗ್ರೆಸ್ ಬಗ್ಗೆ ಒಲವು ಇರುವವರು ಎಂದು ಯಾರನ್ನೂ ನಾವು ನಿರ್ಲಕ್ಷ್ಯಿಸುವಂತಿಲ್ಲ, ಕಳೆದ ಬಾರಿ ಅವರು ಕಾಂಗ್ರೆಸ್‌ಗೆ ಮತ ಹಾಕಿರಬಹುದು, ಆದರೆ ಈಗ ಅವರ ಮನ ಪರಿವರ್ತನೆಯಾಗಿರಬಹುದು, ಬಿಜೆಪಿಯ ಅಭಿವೃದ್ಧಿ ಕೆಲಸ ಅವರನ್ನು ಸೆಳೆದಿರಬಹುದಲ್ಲವೇ? ಹೀಗಾಗಿ ಯಾರನ್ನೂ ನಿರ್ಲಕ್ಷ್ಯಿಸಬೇಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಧರ್ಮ
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಜೀವಾಳ, ಕಾರ್ಯಕರ್ತರು ಪಕ್ಷದ ಮುಖಂಡರಿಗಾಗಿ ಅನೇಕ ರೀತಿಯಲ್ಲಿ ಶ್ರಮಿಸುತ್ತಾರೆ, ಹೀಗಾಗಿ ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ಮುಖಂಡರ ಮಾನವೀಯ ಧರ್ಮ, ಕಾರ್ಯಕರ್ತರಿಗೆ ಏನಾದರೂ ತೊಂದರೆಯಾದರೆ ನೇರವಾಗಿ ಹೇಳಿ ಆ ತೊಂದರೆ ನಿವಾರಿಸಲು ನಾನು ಬದ್ಧನಾಗಿರುವೆ ಎಂದರು. ಪಕ್ಷದ ನಾಯಕರನ್ನು ರೂಪಿಸುವವರೇ ಕಾರ್ಯಕರ್ತರು, ಕಾರ್ಯಕರ್ತರ ಶ್ರಮದಿಂದಲೇ ನಾಯಕರಾಗಲು ಸಾಧ್ಯ ಎಂದರು. ಬಿಜೆಪಿ ಎನ್ನುವುದು ನಮ್ಮ ತಾಯಿ ಇದ್ದಂತೆ, ಸಮರಾ್ಣ ಮನೋಭಾವದಿಂದ ಪಕ್ಷ ಕಟ್ಟುವ ಈ ಕಾರ್ಯವನ್ನು ಮಾಡೋಣ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮೇಯರ್ ಎಂ.ಎಸ್. ಕರಡಿ, ಉಪ ಮೇಯರ್ ಸುಮಿತ್ರಾ ಜಾದವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳನಗೌಡ ಪಾಟೀಲ್, ಈರಣ್ಣ ರಾವೂರ, ರಾಜ್ಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ್, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸುರೇಶ್ ಬಿರಾದಾರ, ಪ್ರಮುಖರಾದ ಭೀಮಾಶಂಕರ್ ಹದನೂರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಭಾರತಿ ಭುಯ್ಯಾರ, ಪಾಪುಸಿಂಗ ರಜಪೂತ, ಚಿನ್ನು ಚಿನಗುಂಡಿ, ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 