ವಿದ್ಯಾರ್ಥಿಗಳು ಸಾಧನೆ ಶಿಖರ ಏರಬೇಕಾದರೆ ಹಿರಿಯ ಸಾಧಕರ ಮಾರ್ಗದರ್ಶನ ಅವಶ್ಯ

ವಿದ್ಯಾರ್ಥಿಗಳು ಸಾಧನೆ ಶಿಖರ ಏರಬೇಕಾದರೆ ಹಿರಿಯ ಸಾಧಕರ ಮಾರ್ಗದರ್ಶನ ಅವಶ್ಯ Guidance from senior achievers is essential for students to reach the pinnacle of achievement.

ವಿದ್ಯಾರ್ಥಿಗಳು ಸಾಧನೆ ಶಿಖರ ಏರಬೇಕಾದರೆ ಹಿರಿಯ ಸಾಧಕರ ಮಾರ್ಗದರ್ಶನ ಅವಶ್ಯ 

ಹಾವೇರಿ  21: ನಗರದ ಶ್ರೀ ಶಿವಲಿಂಗೇಶ್ವರ  ಪದವಿ-ಪೂರ್ವ,ಪದವಿ ಮಹಾವಿದ್ಯಾಲಯ ಹಾಗೂ ಶ್ರೀ ರಾಚೋಟೇಶ್ವರ ವಾಣಿಜ್ಯ ಪದವಿ-ಪೂರ್ವ ಮಹಾವಿದ್ಯಾಲಯದ  2025-26 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಕ್ರೀಡಾ ಯುಥ್ ರೆಡ್ ಕ್ರಾಸ್ ಹಾಗೂ ಎನ್‌.ಎಸ್‌.ಎಸ್‌.ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಜರುಗಿತು. 

     ಸಾನಿಧ್ಯವಹಿಸಿ ಹುಕ್ಕೇರಿಮಠ ಶ್ರೀ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಮಾತನಾಡಿ  ತಂತ್ರಜ್ಞಾನವು ನಮ್ಮನ್ನು ಅಭಿವೃದ್ಧಿಯತ್ತ ಹಾಗೂ ಅದೋಗತಿಯತ್ತ ಸಾಗಲು  ಕಾರಣವಾಗಬಹುದು ಅದರ ಸರಿಯಾದ ಬಳಕೆ ಅವಶ್ಯವಾಗಿದೆ ವಿದ್ಯಾರ್ಥಿದಶೆಯಲ್ಲಿ ನಮ್ಮ ಹಸಿವು,ಗುರಿಯತ್ತ ಸಾಗುವ ಕಡೆ ಇರಬೇಕು ಎಂದರು ಜೀವನದಲ್ಲಿ ನಾವು ಸಾಧನೆ ಶಿಖರ ಏರಬೇಕಾದಲ್ಲಿ ಹಿರಿಯರ,ಸಾಧಕರ ಮಾರ್ಗದರ್ಶನದ ಅವಶ್ಯವಿದೆ. ಸಾಧಕನಿಗೆ ಓದು ನಿರಂತರವಾಗಿರಬೇಕು ಎಂದರು. 

ಜಿಲ್ಲಾ ಪೋಲಿಸ ಅಧೀಕ್ಷಕರಾದ   ಯಶೋಧಾ ವಂಟಗೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಾವೇರಿ ಸಂಸ್ಕಾರ ಎಂಬುದು ಇನ್ನೂ ಉಳಿದಿದೆ ಎಂದರೆ ಮಠ ಮಾನ್ಯಗಳ ಶೈಕ್ಷಣಿಕ ಸಂಸ್ಥೆಯಿಂದ, ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಪಾಲಕರ ಶ್ರಮ ಅತ್ಯಂತ ಹೆಚ್ಚಾಗಿದೆ. 

ಆದ ಕಾರಣ ವಿದ್ಯಾರ್ಥಿನಿಯರು ಅದನ್ನು ಮನದಲ್ಲಿ ಇಟ್ಟುಕೊಂಡು ಅಧ್ಯಯನದಲ್ಲಿ ತೊಡಗಬೇಕು ಎಂದರು.  ವಿದ್ಯಾರ್ಥಿನಿಯರು ತಮ್ಮ ಆತ್ಮ ಸಾಕ್ಷಿಯಂತೆ ನಡೆದು ಅವಕಾಶಗಳನ್ನು ಸದೋಪ ಯೋಗ ಪಡಿಸಿಕೊಳ್ಳಬೇಕು, ಮನದಲ್ಲಿ ಒಂದು ದೃಡ ನಿರ್ಧಾರ ಮಾಡಿಕೊಂಡು ಅಧ್ಯಯನದಲ್ಲಿ ತೊಡಗಬೇಕು ಎಂದರು. ನೀವು ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಬಹುದಾದಗಿದೆ ಎಂದರು  

          ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕರಾದ ಪ್ರೋ ಜಿ.ವಿ.ಕೋರಿ ಅವರು ಮಾತನಾಡಿ ವ್ಯಕ್ತಿ ದೊಡ್ಡದಲ್ಲ ವ್ಯಕ್ತಿತ್ವ ದೊಡ್ಡದು ಆ ನಿಟ್ಟಿನಲ್ಲಿ ಎನ್,ಎಸ್,ಎಸ್ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ವ್ಯಕ್ತತ್ವವನ್ನು ರೂಪಿಸುವಲ್ಲಿ ಈ ಎರಡು ಸಂಸ್ಥೆಗಳು ಸಹಾಯಕವಾಗಿವೆ   ಎಂದರು. 

    ಅಧ್ಯಕ್ಷತೆವಹಿಸಿ   ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯಾಧ್ಯಕ್ಷರಾದ ಎಸ್‌.ಎಸ್‌. ಮುಷ್ಠಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.ವಿದ್ಯಾಪೀಠದ ನಿರಂಜನ ತಾಂಡೂರ ವೀರಣ್ಣ ಅಂಗಡಿ ಜಗದೀಶ ತುಪ್ಪದ,ಎಂ.ಸಿ. ಮಳಿಮಠ, ಪ್ರಾಚಾರ್ಯರಾದ  ರವಿ ಸಿ.ವಿ, ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಸವಿತಾ ಎಸ್ ಹಿರೇಮಠ,ಪ್ರೋವ್ಹಿ.ಕೆ.ಹಲಗಣ್ಣನವರ,ಪ್ರೋ ಶಿಫಾನಾ ಸೈಯದ್,ಪ್ರೋ ಎಂ.ಎಂ.ಮಡಿವಾಳರ, ಪದವಿ-ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಸ್‌.ವಿ.ಹಿರೇಮಠ, ಉಪನ್ಯಾಸಕರಾದ ಜಿ.ಎನ್‌.ಚಟ್ರಮ್ಮನವರ,  ಶಿವಲಿಂಗೇಶ್ವರ ವಿದ್ಯಾಪೀಠದ  ಸದಸ್ಯರು ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಎಲ್ಲ ಕಾಲೇಜಿನ ವಿದ್ಯಾರ್ಥಿನಿಯರು,ವರ್ಗ ಪ್ರತಿನಿಧಿಗಳು, ಕ್ರೀಡಾ ಪ್ರತಿನಿಧಿಗಳು ಉಪಸ್ಥಿತರಿದ್ದರು.