ಪರಸ್ಪರ ಪ್ರೀತಿ ವಿಶ್ವಾಸದಿಂದ ಬ್ಯಾಂಕಿನ ಅರ್ಥವ್ಯವಸ್ಥೆ ಬೆಳೆಸಿ: ಕನ್ನೇರಿ ಕೊಲ್ಲಾಪೂರಶ್ರೀ

ಪರಸ್ಪರ ಪ್ರೀತಿ ವಿಶ್ವಾಸದಿಂದ ಬ್ಯಾಂಕಿನ ಅರ್ಥವ್ಯವಸ್ಥೆ ಬೆಳೆಸಿ: ಕನ್ನೇರಿ ಕೊಲ್ಲಾಪೂರಶ್ರೀ Grow banking economy with mutual love and trust: Kanneri Kollapur Sri

ಪರಸ್ಪರ ಪ್ರೀತಿ ವಿಶ್ವಾಸದಿಂದ ಬ್ಯಾಂಕಿನ ಅರ್ಥವ್ಯವಸ್ಥೆ ಬೆಳೆಸಿ: ಕನ್ನೇರಿ ಕೊಲ್ಲಾಪೂರಶ್ರೀ 

ಶಿಗ್ಗಾವಿ 16: ಪರಸ್ಪರ ಪ್ರೀತಿ ವಿಶ್ವಾಸಗಳೊಂದಿಗೆ ಬ್ಯಾಂಕಿನ ಅರ್ಥವ್ಯವಸ್ಥೆಯನ್ನು ಬೆಳೆಸಿಕೊಂಡಾಗ ಮಾತ್ರ ಸಹಕಾರಿ, ಕೋ ಆಫ್ ಬ್ಯಾಂಕ್ ಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದು ಕನ್ನೇರಿ ಕೊಲ್ಲಾಪೂರ ಸಿದ್ಧಗಿರಿ ಮಠದ, ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.  ಪಟ್ಟಣದ ಹನುಮಂತಗೌಡ್ರು ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದ ಶಿಗ್ಗಾಂವ ಅರ್ಬನ್ ಕೋ ಆಫ್ ಬ್ಯಾಂಕಿನ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗಿಂತಲೂ ಸಹಕಾರಿ, ಕೋ ಆಫ್ ಬ್ಯಾಂಕುಗಳು ಹೆಚ್ಚು ಸಹಕಾರಿಯಾಗಿವೆ. ತಮ್ಮ ಬ್ಯಾಂಕುಗಳ ಲಾಭಕಿಂತಲೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸೂವುದೆ ಸಹಕಾರಿ ಸಂಘಗಳ ಗುರಿಯಾಗಿರುವುದರಿಂದ ಶಿಗ್ಗಾವಿಯ ಅರ್ಬನ್ ಕೋ ಆಫ್ ಬ್ಯಾಂಕ್ 25 ವರ್ಷಗಳನ್ನು ಪೂರೈಸಲು ಸಾಧ್ಯವಾಗಿದೆ ಎಂದರು. 

1904 ರಲ್ಲಿ ಬ್ರಿಟಿಷರಿಂದ ಚಿಲ್ಲರೆ ವ್ಯಾಪಾರ, ವಹಿವಾಟಿನ ಮೂಲಕ ಮೊದಲಿಗೆ ಕರ್ನಾಟಕದಿಂದಲೇ ಸ್ಥಾಪನೆಯಾದ ಸಹಕಾರಿ ಬ್ಯಾಂಕುಗಳು ಇಂದು ದೇಶದೆಲ್ಲೆಡೆ ವಿಸ್ತರಿಸಿ ಗ್ರಾಹಕರೊಂದಿಗೆ ತಮ್ಮ ಸಹಕಾರಿ ಹೆಸರಿಗೆ ತಕ್ಕಂತೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಸಹಕಾರಿ ಬ್ಯಾಂಕ್ ಗಳ ಆಡಳಿತ ಮಂಡಳಿಯ ನಿರ್ದೇಶಕರು ತಮ್ಮ ಕಠಿಣ ಪರಿಶ್ರಮ, ಗ್ರಾಹಕರಜೊತೆಗಿನ ಸಂಬಂಧಗಳಿಂದ ವ್ಯವಹರಿಸಿದಾಗ ಸಹಕಾರಿ ಸಂಘಗಳ ಶ್ರೇಯೋಭಿವೃದ್ದಿ ಸಾಧ್ಯ. ಈ ನಿಟ್ಟಿನಲ್ಲಿ ಶಿಗ್ಗಾಂವ ಅರ್ಬನ್ ಕೋ ಆಫ್ ಬ್ಯಾಂಕ್ ಆಡಳಿತ ಮಂಡಳಿ, ಸಿಬ್ಬಂದಿಗಳ ಶ್ರಮ ಮುಂದುವರಿದು ಇನ್ನೂ ಹೆಚ್ಚು ಸಹಕಾರಿಯಾಗಿ ಬೆಳೆಯಲಿ ಎಂದು ಹೇಳಿದರು. ಬಂಕಾಪುರ,ಅರಳೆಲೆ ಹಿರೇಮಠ, ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಗಂಜಿಗಟ್ಟಿ.ಚರಮೂರ್ತೇಶ್ವರ ಮಠದ ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ವಿರಕ್ತಮಠದ, ಸಂಗನಬಸವ ಮಹಾಸ್ವಾಮಿಗಳು, ಹಿರೇಮಣಕಟ್ಟಿ.ಮುರುಕೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ಸಮ್ಮುಖ ವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಜಗದೀಶ ಚ. ತೊಂಡಿಹಾಳ, ಡಾ. ಪ್ರಭುಗೌಡ ಆರ್‌. ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಷಣ್ಮುಖಪ್ಪ ಮುಚ್ಚಂಡಿ, ಆರ್‌.ಎಸ್‌.ಅರಳಲೆಹಿರೇಮಠ, ಸಿದ್ಧಾರ್ಥ್‌ ಪಾಟೀಲ , ಅಶೋಕ. ಎಸ್‌. ಬಂಕಾಪುರ, ಜನಾರ್ಧನ ಬ್ರಹ್ಮಾವರ, ತ್ರಿಲೋಚನಯ್ಯ ಸುರಗೀಮಠ, ಕುಮಾರ ಹೆಸರೂರ , ಉಮೇಶ ಗೌಳಿ, ಚಿದಾನಂದ ಕಮ್ಮಾರ, ಮಾಲತೇಶ ಗೌಳಿ, ಧರ್ಮಪ್ಪ ಧಾರವಾಡ, ಡಾ.ಬಿ. ಹೆಚ್‌. ವೀರಣ್ಣ, ಧೀರೇಂದ್ರ ಕುಂದಾಪೂರ, ಕಾಶವ್ವ ಹಾವೇರಿ, ಚನ್ನಮ್ಮ ಬಡ್ಡಿ ಸೇರಿದಂತೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸಕ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.