ಶ್ರೇಷ್ಠ ಗುರು ಪ್ರಶಸ್ತಿ ಪ್ರದಾನ ಸಮಾರಂಭ

ಶ್ರೇಷ್ಠ ಗುರು ಪ್ರಶಸ್ತಿ ಪ್ರದಾನ ಸಮಾರಂಭ Great Teacher Award Ceremony

ಶ್ರೇಷ್ಠ ಗುರು ಪ್ರಶಸ್ತಿ ಪ್ರದಾನ ಸಮಾರಂಭ 


ಯರಗಟ್ಟಿ, 04 : ಸಮೀಪದ ಮುನವಳ್ಳಿ ಪಟ್ಟಣದ ಸೋಮಶೇಖರ ಮಠದ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ಯ ಶ್ರೇಷ್ಠ ಗುರು ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಂಭ್ರಮದಿಂದ ಜರುಗಿತು. 

ಸಮಾರಂಭದ ಸಾನಿಧ್ಯವನ್ನು ಶ್ರೀ ಮುರುಘೇಂದ್ರ ಸ್ವಾಮೀಜಿ ವಹಿಸಿ ಮಾತನಾಡುತ್ತ ಪ್ರತಿಯೊಬ್ಬರಿಗೂ ಗುರು ಅವಶ್ಯವಿದ್ದು, ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಗಿದರೆ ಜೀವನ ಯಶಸ್ವಿಯಾಗುತ್ತದೆ. ಎಂದರು. ಎಂ.ಆರ್‌.ಗೋಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.  

ಶ್ರೇಷ್ಠ ಗುರು ಪ್ರಶಸ್ತಿಗೆ ಭಾಜನರಾದ ಮಹಾನಂದಾ ಎಸ್‌.ಕಲಾದಗಿ, ಮೀನಾಕ್ಷಿ ಮುರನಾಳ, ಸುಜಾತ ಜಂಬಗಿ, ಗಾಯತ್ರಿ ಹಿರೇಮಠ, ನಾಗೇಶ ಹೊನ್ನಳ್ಳಿ, ಗುರುನಾಥ ಪತ್ತಾರ, ಅಣ್ಣಪ್ಪ ನರಗುಂದ ಶಿಕ್ಷಕರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.  

     ಕಾರ್ಯಕ್ರಮದಲ್ಲಿ ಶಂಕರ ಗಯ್ಯಾಳಿ, ಈರಣ್ಣ ಸಂಕಣ್ಣವರ, ಗಂಗಾಧರ ಗೊರಾಬಾಳ, ಪ್ರಾ. ಎಂ.ಎಚ್‌.ಪಾಟೀಲ, ಪ್ರಾ. ಕೆ.ಬಿ.ನಲವಡೆ ಬಿ.ಎಂ.ಅಪ್ಪೋಜಿ, ಬಿ.ಬಿ.ಹುಲಿಗೊಪ್ಪ, ಮಂಜುಳಾ ಭಾಂಡೇಕರ, ಶೇಖರ ಮುಪ್ಪಿನವರಮಠ, ಐ.ಕೆ.ಮಠಪತಿ, ಉಮೇಶ ಗುದಗಾಪೂರ, ಶ್ರೀಶೈಲ ಗೋಪಶೆಟ್ಟಿ, ಸೋಮನಗೌಡ ಹಿರಲಿಂಗಣ್ಣವರ, ಜಗದೀಶ ಹಿರೇಮಠ, ರವಿ ಸಣಕಲ್ಲ, ಎಂ.ಗೀರೀಶ, ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ದಾನು ಗದಗಿನ, ಅಶೋಕ ಸಂಕಣ್ಣವರ, ಪರಶುರಾಮ ಕದಂ ಅವರನ್ನು ಸನ್ಮಾನಿಸಲಾಯಿತು.  

ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಪಿ.ಯು. ಕಾಲೇಜು, ಶ್ರೀ ಚನ್ನಬಸವ ಮಹಾಸ್ವಾಮೀಜಿ ಪ್ರಥಮ ದರ್ಜೆ ಕಾಲೇಜು, ಶ್ರೀಮತಿ ಅಂದಾನೆಮ್ಮ ಯಕ್ಕುಂಡಿಮಠ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.