ಕಾಡಾಪೂರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅನುದಾನ
Grant for comprehensive development of Kadapur village
ಚಿಕ್ಕೋಡಿ 13: ಕಾಡಾಪೂರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕಳೆದ ಎರಡು ವರ್ಷಗಳಲ್ಲಿ ಸುಮಾರು ರೂ. 12 ಕೋಟಿ ಅನುದಾನ ಮಂಜೂರಾಗಿದ್ದು, ವಿವಿಧ ರಸ್ತೆ, ಚರಂಡಿ, ದೇವಸ್ಥಾನ ಜೀರ್ಣೋದ್ಧಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ಪ್ರಗತಿ ಪಥದಲ್ಲಿವೆ ಎಂದು ಮಾನ್ಯ ಶ್ರೀ ಪ್ರಕಾಶ ಬಾ. ಹುಕ್ಕೇರಿಹೇಳಿದರು.ಅವರು ಕಾಡಾಪೂರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕಾಡಾಪೂರ ಸಂಘದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ತಮ್ಮ ಹಾಗೂ ಸ್ಥಳೀಯ ಶಾಸಕರಾದ ಗಣೇಶ ಪ್ರಕಾಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಕಾಡಾಪೂರ ಗ್ರಾಮದಲ್ಲಿ ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.ಈಗಾಗಲೇ ಸ್ವಾಮಿ ವಿವೇಕಾನಂದ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ರೂ. 36.10 ಲಕ್ಷ ಹಾಗೂ ಬಸವೇಶ್ವರ ವಿವಿದೊದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಕಟ್ಟಡಕ್ಕೆ ರೂ. 20 ಲಕ್ಷ ಅನುದಾನ ಮಂಜೂರಾಗಿ ಕಾಮಗಾರಿಗಳು ಸಂಪೂರ್ಣಗೊಂಡಿವೆ ಎಂದರು.
ಗ್ರಾಮದಲ್ಲಿ ವಿವಿಧ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ರೂ. 80 ಲಕ್ಷ, ಗ್ರಾಮ ಪಂಚಾಯತಿಯಿಂದ ಹನುಮಾನ ದೇವಸ್ಥಾನದಿಂದ ಅಂಕಲಿ ರಸ್ತೆಯವರೆಗೆ ರಸ್ತೆ ಅಗಲೀಕರಣ ಮತ್ತು ಬೀದಿ ದೀಪಗಳ ಅಳವಡಿಕೆಗೆ ರೂ. 1.50 ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.ಇದಲ್ಲದೆ, ಕಾಡಾಪೂರದಿಂದ ಅಂಕಲಿ ಸಂಶೋಧನಾ ಕೇಂದ್ರದವರೆಗೆ ರಸ್ತೆ ಸುಧಾರಣೆಗೆ ರೂ. 2.50 ಕೋಟಿ, ಕಾಡಾಪೂರಹಿಅಂಕಲಿ ರಸ್ತೆಯಿಂದ ಸನದಿ ತೋಟಗಳ ಮಾರ್ಗವಾಗಿ ಸಿದ್ದಾಪೂರವರೆಗೆ ಹಾಗೂ ಜಕ್ಕವ್ವ ದೇವಸ್ಥಾನ ಮಾರ್ಗವಾಗಿ ರಾಯನ್ನವರ ತೋಟದವರೆಗೆ ರೂ. 1 ಕೋಟಿ, ಬಸವಣ್ಣ ಗುಡಿಯಿಂದ ಕೇರೂರ ಗ್ರಾಮದ ಘೂಳಿಗುಡಿಯವರೆಗೆ ರಸ್ತೆ ಸುಧಾರಣೆಗೆ ರೂ. 1 ಕೋಟಿ ಅನುದಾನದಲ್ಲಿ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಸಿದ್ದಾಪೂರವಾಡಿ ಬಸ್ ನಿಲ್ದಾಣದಿಂದ ಕಾಡಾಪೂರಹಿಅಂಕಲಿ ರಸ್ತೆಗೆ ಸಂಪರ್ಕ ರಸ್ತೆ ಸುಧಾರಣೆಗೆ ರೂ. 1.50 ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಗ್ರಾಮದಲ್ಲಿ ರೂ. 7 ಲಕ್ಷ ವೆಚ್ಚದಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಕಾಶ ರಾಚನ್ನವರ, ಮಹಾಂತೇಶ ಪಾಟೀಲ, ಶಿವಾಜಿ ಶಿಂಧೆ, ಭರತ ಕೋಳೆಕರ, ಅಪ್ಪು ಸನದಿ, ರವಿ ಠೋಬಾಕೆ, ಸುಬಾಷ್ ಸನದಿ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 