ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಯ ಬೃಹತ್ ಮೆರವಣಿಗೆ
Grand procession of the statue of Chhatrapati Shivaji Maharaj
ಹಾವೇರಿ 01 : ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ನಿಮಿತ್ತವಾಗಿ ಕರ್ನಾಟಕ ಕ್ಷತ್ರೀಯ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಯ ಬೃಹತ್ ಮೆರವಣಿಗೆ ಜರುಗಿತು. ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ವೆಂಕಪ್ಪ ಒಡೆಯರ್, ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ಹರಸೂರ ಬಣ್ಣದಮಠದ ಅಭಿನವ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗಣ್ಯರು ಬೃಹತ್ ಮೆರವಣಿಗೆ ಚಾಲನೆ ನೀಡಿದರು.ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಮೆರವಣಿಗೆ ನಗರದ ಶ್ರೀ ಪುರಸಿದ್ದೇಶ್ವರ - ಹುಕ್ಕೇರಿಮಠದ ದೇವಸ್ಥಾನದಿಂದ ಮೇಲಿನಪೇಟೆ, ಎಂ.ಜಿ ರಸ್ತೆ, ಎಂ.ಜಿ ವೃತ್ತ, ಜೆ.ಪಿ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗದಿಂದ ಶಿವಾಜಿನಗರದಲ್ಲಿರುವ ಮರಾಠಾ ಸಮುದಾಯ ಭವನ ತಲುಪಿತು. ಮೆರವಣಿಗೆಯಲ್ಲಿ ನಾಸಿಕ್ ಡೋಲು ತಂಡದ ನೃತ್ಯ ಡೋಲು ನಾದ ಮೆರಗು ತಂದಿತು.
ಪುರುಷರು ಬಿಳಿ ಶರ್ಟ, ಬಿಳಿ ಪ್ಯಾಂಟ್, ಜುಬ್ಬಾ, ಪೇಟಾ ಧರಿಸಿದ್ದು, ಮಹಿಳೆಯರು ಸೀರೆ, ಪೇಟಾ ಧರಿಸಿ ಗಮನ ಸೆಳೆದರು.ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಭಾರತೀಯ ಸಂಸ್ಕೃತಿಯ ಪ್ರತಿಭಿಂಬಿತವಾದ ಉಡುಗೆ ತೊಟ್ಟು ಮೆರವಣಿಗೆಗೆ ಕಳೆ ತಂದರು.ಕುದುರೆ ಮೇಲೆ ಬಾಲಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ವೇಷಭೂಷಣ ತೊಟ್ಟು ಎಲ್ಲರ ಮನ ಗೆದ್ದನು. ಪುಟ್ಟ ಬಾಲಕಿ ವ್ಯಮೀಕಾ ತಿಳವಳ್ಳಿ ಇವಳು ಭಾರತೀಯ ಸಂಸ್ಕೃತಿ ಸೀರೆ ಉಟ್ಟು ಮೆರವಣಿಗೆಯಲ್ಲಿ ಭಾಗಿಯಾಗಿ ಎಲ್ಲರ ಮನಸ್ಸು ಸೆಳೆದರು. ಮೆರವಣಿಗೆಯಲ್ಲಿ ಭಾವಸಾರ ಕ್ಷತ್ರೀಯ, ಮರಾಠಾ ಕ್ಷತ್ರೀಯ, ಸೋಮವಂಶ ಕ್ಷತ್ರೀಯ, ರಾಮವಂಶ ಕ್ಷತ್ರೀಯ, ನಾಮದೇವ, ಕಲಾಲ, ಜೋಗಿ, ಕಿಳ್ಳಿಕ್ಯಾತರ, ಲಂಬಾಣಿ, ಗೊಂದಳಿ ಕ್ಷತ್ರೀಯ ಹೀಗೆ ಅನೇಕ ಕೆಕೆಓ ಸಮುದಾಯದವರು,ಹಿಂದೂಪರ ಸಂಘಟನೆ ಮುಖಂಡರು, ಶಿವಾಜಿ ಅಭಿಮಾನಿಗಳು ಭಾಗಿಯಾಗಿದ್ದರು.
ಮಾಜಿ ಶಾಸಕ ನೆಹರು ಓಲೇಕಾರ,ಯುವ ಮುಖಂಡ ಮಂಜುನಾಥ ನೀಲಗುಂದ,ರಾಘವೇಂದ್ರ ಬಾಸೂರ,ಕೆಕೆಓ ಜಿಲ್ಲಾಧ್ಯಕ್ಷರಾದ ಶಂಕರ ಮೆಹರವಾಡೆ, ಗೌರವಾಧ್ಯಕ್ಷ ನಾಗರಾಜ ಜೋರಾಪುರಿ,ಯುವ ಒಕ್ಕೂಟದ ಗೌರವಾಧ್ಯಕ್ಷ ದರ್ಶನ ಲಮಾಣಿ, ಮಹಾವೀರ ಘನಾತೆ, ಪ್ರಮೋದ ನವಲೆ,ಮಲ್ಲಿಕಾರ್ಜುನ ಸಾತೇನಹಳ್ಳಿ, ಮರಾಠ ಸಮಾಜದ ಮುಖಂಡರಾದ ಪ್ರಕಾಶ ಮುಂಜೋಜಿ,ಉಮೇಶ ವಾಘ,ನಾರಾಯಣ ಕಾಳೆ,ರಾಜಕುಮಾರ ಜಾಧವ,ರಘು ಚವ್ಹಾಣ,ಮಾಲತೇಶ ಕದಂ,ದತ್ತಾತ್ರೇಯ ಘಾಟಗೆ, ಉದಯ ತಾಂಗಳೆ,ಶ್ರೀಮತಿ ಶಶಿರೇಖಾ ಮುಂಜೋಜಿ, ಸುಧಾ ತಿಳವಳ್ಳಿ, ಭಾಗ್ಯಶ್ರೀ ಮೋರೆ, ಚಂದ್ರಶೇಖರ ಜಾಧವ,ಅಶೋಕ ರಜಪೂತ, ನಾಮದೇವ ಸಿಂಪಿ, ರಮೇಶ ಮಾಳೋದೆ,ದೇವರಾಜ ಗುಂಡೆ, ಲಕ್ಷ್ಮಣಸಿಂಗ್ ರಜಪೂತ,ಸುಭಾಸ ತಿಳವಳ್ಳಿ,ಧರ್ಮರಾಜ ಕಜೂರಕರ, ನಾಗೇಂದ್ರ್ಪ ಡಿ.ಕೆ., ವಿಶಾಲ ಸುಲಾಕೆ, ಶ್ರೀಕಾಂತ ಮಾಳದಕರ ಸೇರಿದಂತೆ ಕೆಕೆಓ ಒಕ್ಕೂಟದ ಜಿಲ್ಲಾ-ತಾಲ್ಲೂಕ ಪದಾಧಿಕಾರಿಗಳು,ಮುಖಂಡರು,ಮಹಿಳೆಯರು, ಶಿವಾಜಿ ಅಭಿಮಾನಿಗಳು ಪಾಲ್ಗೊಂಡಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 