ರಾಜ್ಯಮಟ್ಟದ ವಸ್ತು ಪ್ರದರ್ಶನ ಸರಸ್ ಮೇಳ-2025 ಕ್ಕೆ ಅದ್ಧೂರಿ ತೆರೆ
Grand opening for Saras Mela-2025, a state-level material exhibition
ಬೆಳಗಾವಿ 23: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಮೂಲಕ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯೋಗದಲ್ಲಿ 12.12.2025 ರಿಂದ 21.12.2025 ರವರೆಗೆ ಬೆಳಗಾವಿಯ ಸರ್ದಾರ್ ಹೈ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಉತ್ಪಾದಿಸಿದ ವಸ್ತುಗಳನ್ನು ರಾಜ್ಯಮಟ್ಟದ ವಸ್ತು ಪ್ರದರ್ಶನ ಸರಸ್ ಮೇಳ-2025 ಅದ್ಧೂರಿಯಾಗಿ ತೆರೆ ಕಂಡಿದೆ.
ಡಿ.12ರಂದು ಸನ್ಮಾನ್ಯ ಮಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಉದ್ಗಾಟನೆಗೊಳಿಸಿದ ಈ ಸರಸ್ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಲಕ್ಷ್ಮೀ ಆರ್ ಹೆಬ್ಬಾಳಕರ್, ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರು, ಡಾ. ಶರಣಪ್ರಕಾಶ ಆರ್ ಪಾಟೀಲ್, ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಚಿವರು, ಡಾ. ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಶ್ರೀ. ಮನೋಜ್ ಕುಮಾರ್ ಮೀನಾ, ಸರ್ಕಾರದ ಕಾರ್ಯರ್ದರ್ಶಿಗಳು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಶ್ರೀಮತಿ. ಸ್ನೇಹಲ್ ಆರ್, ಮಾನ್ಯ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು. ಶ್ರೀ. ಆಸೀಫ್ (ರಾಜು)ಸೇಠ್, ಶಾಸಕರು ಬೆಳಗಾವಿ ಉತ್ತರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬೆಳಗಾವಿಯ ಸರಸ್ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಸತೀಶ್ ಲ ಜಾರಕಿಹೊಳಿ, ಮಾನ್ಯ ಲೋಕೋಪಯೋಗಿ ಇಲಾಖಾ ಸಚಿವರು ಭೇಟಿ ನೀಡಿ ಮಹಿಳೆಯರೊಂದಿಗೆ ಚರ್ಚಿಸಿ ಪ್ರೋತ್ಸಾಹಿಸುವುದಷ್ಟೇ ಅಲ್ಲ ಅಕ್ಕಫುಡ್ ಕೋರ್ಟ್ನ ವಿವಿಧ ಭಕ್ಷ್ಯಗಳನ್ನು ಸೇವಿಸಿ ಶ್ಲಾಘಿಸಿದರು.
ಸರ್ಕಾರದ ಅಪರ ಮುಖ್ಯ ಕಾಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾಮಹಾದೇವನ್ ರವರು ಮೇಳಕ್ಕೆ ಎರಡು ಬಾರಿ ಭೇಟಿ ನೀಡಿದ ಸ್ವ-ಸಹಾಯ ಗುಂಪಿನ ಮಹಿಳೆಯರೊಂದಿಗೆ ಅವರ ಉತ್ಪನ್ನಗಳ ತಯಾರಿಕೆ ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಚರ್ಚಿಸಿ, ಹೆಚ್ಚು ಹೆಚ್ಚು ಸಂಘಟನೆ ಮತ್ತು ಉದ್ಯಮ ಚಟುವಟಿಕೆ ಕೈಗೊಳ್ಳುವಂತೆ ಪ್ರೋತ್ಯಾಹಿಸಿದರು. ಮೇಳಕ್ಕೆ ಶ್ರೀಮತಿ. ಜಾನಕಿ, ಪ್ರಾದೇಶಿಕ ಆಯುಕ್ತರು ಬೆಳಗಾವಿ, ಶ್ರೀಮತಿ. ದಿವ್ಯಾ ಪ್ರಭು, ಜಿಲ್ಲಾಧಿಕಾರಿಗಳು, ಧಾರವಾಡ ಜಿಲ್ಲೆ, ಶ್ರೀ. ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆ, ಅಧ್ಯಕ್ಷರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಭೇಟಿ ನೀಡಿ ಹರ್ಷ ವ್ಯಕ್ತಪಡಿಸಿದರು.
ಒಟ್ಟು 115 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ತಯಾರಿಸಿದ ವಿವಿಧ ವಸ್ತುಗಳ/ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ಚನ್ನಪಟ್ಟಣದ ಗೊಂಬೆಗಳು, ಕಿನ್ನಾಳ ಆಟಿಕೆಗಳು, ಇಳಕಲ್ ಮಗ್ಗದ ಸೀರಿಗಳು, ಮೊಳಕಾಲ್ಮೂರು ರೇಷ್ಮೆಸೀರೆಗಳು, ಧಾರವಾಡದ ಕಸೂತಿ ಕೆಲಗಳು, ಬಳ್ಳಾರಿಯ ಲಂಬಾಣಿ ಕಸೂತಿಕಲೆ, ಮೈಸೂರಿನ ಇನ್ಲೇ ಕಲೆಗಳು, ಬಿಜಾಪುರದ ಕೈಮಗ್ಗದ ಬ್ಯಾಗ್ಗಳು, ಬೆಳಗಾವಿಯ ಖೌದಿ, ಗೋಕಾಕಿನ ಕರದಂಟು, ಬಳ್ಳಾರಿಯ ಫಿಗ್ ರೋಲ್ ಮತ್ತು ಕರಕುಶಲ ವಸ್ತುಗಳು ಮುಂತಾದವುಗಳು ಸೇರಿದಂತೆ ಒಟ್ಟು 100 ಮಳಿಗೆಗಳಲ್ಲಿ ತರಹೇವಾರಿ ಉತ್ಪನ್ನಗಳು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿತ್ತು.
ಅಕ್ಕ ಲೈವ್ ಫುಡ್ ಕೋರ್ಟ್
ರಾಜ್ಯದ ವಿವಿಧ ಜಿಲ್ಲೆಗಳ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಉಣಬಡಿಸುತ್ತಿದ್ದ ಅಕ್ಕಲೈವ್ ಫುಡ್ ಕೋರ್ಟ್ನ 15 ಮಳಿಗೆಗಳಲ್ಲಿ ಗದಗಿನ ಗಿರ್ಮಿಟ್, ಮಿರ್ಚಿಬಜ್ಜಿ, ಮಂಗಳೂರಿನ ಬನ್ಸ್, ಗೋಲಿ ಬಜೆ, ಬೆಳಗಾವಿ ಸಾಬುದಾನ್ ವಡೆ, ಪಾವ್ ಬಾಜಿ, ಚಿಕ್ಕಬಳ್ಳಾಪುರ ದೋಸೆ, ಉಡುಪಿ ನೀರ್ದೋಸೆ ಚಿಕನ್ ಸುಕ್ಕಾ, ಬಳ್ಳಾರಿ ಚಿಕನ್ ವೆರೈಟಿ ತಿನಿಸುಗಳು, ಉತ್ತರ ಕನ್ನಡದ ಫಿಶ್ ಫ್ರೈ ಹೀಗೆ ವಿವಿಧ ಜಿಲ್ಲೆಗಳ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಆಹಾರ ಪದಾರ್ಥಗಳು ಬೆಳಗಾವಿ ಜನರ ಬಾಯಲ್ಲಿ ನೀರೂರಿಸುವಂತಿತ್ತು.
ದಾಖಲೆಯ ವಹಿವಾಟು
ಕಳೆದ ಐದು ವರ್ಷಗಳಿಂದ ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ನಡೆಯುತ್ತಾ ಬಂದಿರುವ ಸರಸ್ ಮೇಳದಲ್ಲಿ ಈ ಬಾರಿ ದಾಖಲೆಯ ವಹಿವಾಟು ನಡೆದಿದೆ. 10 ದಿನಗಳಲ್ಲಿ ರೂ. 1,32,66,299/- ವ್ಯಾಪಾರ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಈ ಸರಸ್ ಮೇಳದಲ್ಲಿ ಬಾಗವಹಿಸಿದ ವಿವಿಧ ಜಿಲ್ಲೆಯ ಮಹಿಳಾ ಸ್ವ-ಸಹಾಯ ಗುಂಪುಗಳ ಮಹಿಳೆಯರು ಉತ್ತಮ ಮಾರಾಟಕ್ಕೆ ಹರ್ಷ ವ್ಯಕ್ತಪಡಿಸಿದರು. ಈ ಮೇಳದಲ್ಲಿ ಹೆಚ್ಚು ಮಾರಾಟ ದಾಖಲಿಸಿದ ಸ್ವ-ಸಹಾಯ ಗುಂಪಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. (ಪಟ್ಟಿಲಗತ್ತಿಸಿದೆ)
ಗಮನ ಸೆಳೆದ ಸಾಮರ್ಥ್ಯಾಭಿವೃದ್ಧಿ ತರಬೇತಿ ಸರಸ್ ಮೇಳದಲ್ಲಿ ಪ್ರತಿದಿನ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಸ್ವಉಯೋಗ ಕೈಗೊಳ್ಳಲು ಹಾಗೂ ಸರ್ಕಾರದ ಇತರೆ ಇಲಾಖೆಗಳ ಸೌಲಭ್ಯಗಳ ಕುರಿತು ನಡೆದ ತರಬೇತಿ ಅಧಿವೇಶನಗಳಲ್ಲಿ ಪ್ರತಿದಿನ ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಜೀವನೋಪಾಯ ಉದ್ಯೋಗ ಕೈಗೊಳ್ಳಲು ವಿವಿಧ ಮಾಹಿತಿ ಪಡೆದರು.
ಸಾಂಸ್ಕೃತಿಕ ರಸದೌತಣ
ಮೇಳದ ಆವರಣದಲ್ಲಿ ಪ್ರತಿದಿನ ಸಂಜೆ ಆಯೋಜಿಸಲಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಶೇಷವಾಗಿ ಅಜಯ್ ವಾರಿಯರ್, ಫೈಝಲ್ ಬ್ಯಾಂಡ್ನ ಹಾಡು, ರುಮಿತ್ ಹಾಗೂ ಸಂದೇಶ್ ಶೆಟ್ಟಿ ಅವರ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು ಬೆಳಗಾವಿ ಜನತೆಗೆ ಸಾಂಸ್ಕೃತಿಕ ರಸದೌತಣ ನೀಡಿತ್ತು.
ಒಟ್ಟಾರೆ ಪ್ರತೀ ವರ್ಷದಂತೆ ಐದನೆಯ ಮೇಳವನ್ನು ಯಶಸ್ವಿಯಾಗಿ ಒಟ್ಟು ರೂ.1.32 ಕೋಟಿ ಆಯೋಜಿಸಲು ಬೆಂಬಲಿಸಿದ ಸಾರ್ವಜನಿಕರಿಗೆ, ವಿವಿಧ ಇಲಾಖೆಯ ಅಧಿಕಾರಿಗಳಿಗೆ, ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ, ಕಾರ್ಯಕ್ರಮದ ಪ್ರಚಾರಕ್ಕೆ ಸಹಕರಿಸಿದ ವಿವಿಧ ಮಾದ್ಯಮಗಳಿಗೆ ಹಾಗೂ ಅಚ್ಚುಕಟ್ಟಾಗಿ ನಡೆಸಲು ಬೆಂಬಲಿಸಿದ ಪೊಲೀಸ್ ಇಲಾಖೆಗೆ ಶ್ರೀ. ರಾಹುಲ್ ಶಿಂಧೆ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಪಂಚಾಯತ್ ಬೆಳಗಾವಿ ರವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 