ರಾಜ್ಯಪಾಲರಿಂದ ಎಂ.ಪಿ ಐಶ್ವರ್ಯಗೆ ಪಿ ಹೆಚ್ ಡಿ ಡಾಕ್ಟರೇಟ್ ಪದವಿ ಪ್ರಧಾನ
Governor confers PhD degree on MP Aishwarya
ರಾಜ್ಯಪಾಲರಿಂದ ಎಂ.ಪಿ ಐಶ್ವರ್ಯಗೆ ಪಿ ಹೆಚ್ ಡಿ ಡಾಕ್ಟರೇಟ್ ಪದವಿ ಪ್ರಧಾನ
ಕೊಪ್ಪಳ 15: ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಚ್. ಪ್ರಾಣೇಶ್ ಯವರ ಸುಪುತ್ರಿ ಹಾಗೂ ಕೊಲ್ಹಾಪುರದ ಡೆಪ್ಯೂಟಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರವೀಣ್ ಗಾಯಕವಾಡ ರವರ ಪತ್ನಿ ಎಂ, ಪಿ, ಐಶ್ವರ್ಯ ರವರಿಗೆ ಗಣಕಯಂತ್ರ ವಿಭಾಗದ ಮಶಿನರಿ ಲರ್ನಿಂಗ್ ಪ್ರಬಂಧ ಪ್ರಕಟಣೆ ವಿಷಯದಲ್ಲಿ ಪೀ ಎಚ್‌ಡಿ ಡಾಕ್ಟರೇಟ್ ಪದವಿ ಲಭಿಸಿತು, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚಿಗೆ ಜರುಗಿದ 13ನೇ ಘಟಿಕೋತ್ಸವ ದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ರವರು ಐಶ್ವರ್ಯ ರವರಿಗೆ ಪಿ ಎಚ್ ಡಿ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದ್ದರು. ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ ಗಣಕಯಂತ್ರ ಮೆಷಿನರಿ ಲರ್ನಿಂಗ್ ವಿಭಾಗದ ಮುಖ್ಯಸ್ಥ ಡಾ, ಪದ್ಮನಾಭ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಐಶ್ವರ್ಯ ರವರು ಪ್ರಬಂಧ ಮಂಡನೆ ಮಾಡಿ ಡಾಕ್ಟರೇಟ್ ಪಿ ಎಚ್ ಡಿ ಪದವಿ ಪಡೆದುಕೊಂಡಿದ್ದಾರೆ. ಎಂ.ಪಿ .ಐಶ್ವರ್ಯ ರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಹಂತದ ಶಿಕ್ಷಣವನ್ನು ನಗರದ ಟ್ರಿನಿಟಿ ಶಾಲೆಯಲ್ಲಿ ಪೂರೈಸಿ ನಂತರ ಸ್ವಾಮಿ ವಿವೇಕಾನಂದ ಪಿಯು ಕಾಲೇಜ್ ನಲ್ಲಿ ವಿಜ್ಞಾನ ಪಿಯುಸಿ ಅಭ್ಯಾಸ ಮಾಡಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಬಿಎಸ್ಸಿ ಮತ್ತು ಎಂ ಎಸ್ ಸಿ ಪದವಿ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ ,ಎಂ.ಪಿ. ಐಶ್ವರ್ಯ ರವರಿಗೆ ಪಿ ಎಚ್ ಡಿ ಡಾಕ್ಟರೇಟ್ ಪದವಿ ಲಭಿಸಿರುವುದಕ್ಕೆ ಕೊಪ್ಪಳದ ವಿವಿಧ ಸಂಘಟನೆಗಳು ಶಿಕ್ಷಣ ಕ್ಷೇತ್ರದ ಅಧಿಕಾರಿ ವರ್ಗ, ಶಿಕ್ಷಕರು, ಸ್ನೇಹಿತರ ಬಳಗ ಅಭಿಮಾನಿ ಬಳಗ ಅಪಾರ ಮೆಚ್ಚುಗೆ ಮತ್ತು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 