ರಾಜ್ಯಪಾಲರ ನಡೆ, ಅಸಂವಿಧಾನಿಕ ಹಾಗೂ ಸರ್ವಾಧಿಕಾರಿನಡೆ : ರೈತ ಸಂಘ ದಿಂದ ಖಂಡನೆ
Governor's move is unconstitutional and dictatorial: Farmers' Association condemns
ಕಾರವಾರ 22: ರಾಜ್ಯ ಸರಕಾರವನ್ನು ಪ್ರತಿನಿಧಿಸುವ ರಾಜ್ಯಪಾಲರು , ಪ್ರತಿವರ್ಷದ ಮೊದಲ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು ಮಂತ್ರಿಮಂಡಲ ಸಿದ್ಧಪಡಿಸಿದ ಭಾಷಣ ಓದುವುದನ್ನು ಸಂವಿಧಾನದ ಕಲಂ 176 ಪ್ರತಿಪಾದಿಸುತ್ತಸೆ. ಆದರೆ ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಂವಿಧಾನದ ವಿಧಿಯಂತೆ ನಡೆದುಕೊಳ್ಳದೆ, ಜಂಟಿ ಸದನ ಅಧಿವೇಶನದಲ್ಲಿ ಸರಕಾರದ ಭಾಷಣ ಓದದೆ , ಕೇವಲ ಒಂದು ವಾಕ್ಯ ಓದಿ ನಿರ್ಗಮಿಸಿರುವುದು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಯಾಗಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ್ ಹೇಳಿದ್ದಾರೆ. ರಾಜ್ಯಪಾಲರು, ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೆ ಹೊರತು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮಂತ್ರಿಮಂಡಲದ ಮೇಲಿನ ಸೂಪರ್ ಮುಖ್ಯಮಂತ್ರಿಯಲ್ಲ . ರಾಜ್ಯಪಾಲರು ಕೇಂದ್ರ ಸರಕಾರದ ಮೂಲಕ ನೇಮಕಗೊಂಡವರಾಗಿದ್ದು, ಅವರು ಚುನಾಯಿತ ಪ್ರತಿನಿಧಿಗಳು ಅಲ್ಲ .
ವಿರೋಧ ಪಕ್ಷದ ನಾಯಕರು ಅಲ್ಲ ಎಂದು ಕಾರವಾರ ಜಿಲ್ಲಾ ರೈತ ಪ್ರಾಂತ ಸಂಘ ಹೇಳಿದೆ. ರಾಜ್ಯ ಸರಕಾರವು, ರಾಜ್ಯದ ಜನತೆಯ ಮತದಾನದ ಮೂಲಕ ಆಯ್ಕೆಯಾದ ಜನ ಪ್ರತಿನಿಧಿಗಳ ಸರಕಾರ . ಇದಕ್ಕೆ ರಾಜ್ಯಪಾಲರು ಗೌರವ ಕೊಡಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ರಾಜ್ಯ ಸರಕಾರದ ಅಥವಾ ಮಂತ್ರಿಮಂಡಲ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣವನ್ನು, ರಾಜ್ಯ ಸರಕಾರವನ್ನು ಪ್ರತಿನಿಧಿಸಿ ಜಂಟಿ ಸದನದಲ್ಲಿ ರಾಜ್ಯಪಾಲರು ಓದುವುದು ಅವರ ಕರ್ತವ್ಯವಾಗಿದೆ. ಅದನ್ನು ತಮ್ಮ ಮನಬಂದಂತೆ ತಿದ್ದುಪಡಿಗೆ ಒತ್ತಾಯಿಸುವುದು ಮತ್ತು ವ್ಯತಿರಿಕ್ತವಾಗಿ ತಮ್ಮದೆ ಭಾಷಣ ಮಾಡಲು ಅದು ರಾಜ್ಯಪಾಲರ ವೈಯ್ಯಕ್ತಿಕ ಭಾಷಣವಲ್ಲ ಎಂದಿದೆ. ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ತಾವು ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೆಂಬುದನ್ನು ಮರೆತು , ಕೇಂದ್ರ ಸರಕಾರದ ಪ್ರತಿನಿಧಿಗಳೆಂಬಂತೆ ಅಥವಾ ರಾಜಕೀಯ ಪ್ರತಿನಿಧಿಗಳೆಂಬಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಜಿಲ್ಲಾ ಪ್ರಾಂತ ರೈತ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 