ಬೇಡಿಕೆಗಳ ಬಗ್ಗೆ ಸರಕಾರ ಗಮನಹರಿಸಲಿ: ಶರಣಬಸವನಗೌಡ ಪಾಟೀಲ

ಬೇಡಿಕೆಗಳ ಬಗ್ಗೆ ಸರಕಾರ ಗಮನಹರಿಸಲಿ: ಶರಣಬಸವನಗೌಡ ಪಾಟೀಲ Government should pay attention to demands: Sharanabasavanagouda Patil


ಕೊಪ್ಪಳ 08 : ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಬಗ್ಗೆ ಸರಕಾರಿ ಗಮನವನ್ನು ಹರಿಸುವುದರ ಮೂಲಕ ಬೇಡಿಕೆಗಳ ಈಡೇರಿಕೆಯನ್ನು ಸರಕಾರವು ಮುಂದಾಗಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ ಸರಕಾರವನ್ನು ಒತ್ತಾಯಿಸಿದರು. ಅವರು ಅಖಿಲ ಭಾರತ ಪ್ರಾಥಮಿಕ ಶಾಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶನದ ಮೇರೆಗೆ ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ಮಾಡುವ ಅಂಗವಾಗಿ ಓದು ಕರ್ನಾಟಕ ತರಬೇತಿ ಪ್ರಾರಂಭದ ಪೂರ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಾ ಮತ್ತು ನೇಮಕಾತಿ ನಿಯಮಗಳು ಪುರಾತನ ಕಾಲದಾಗಿದ್ದು ಕೂಡಲೇ ಅವುಗಳನ್ನು ಬದಲಾವಣೆ ಮಾಡುವ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ಕಾರ್ಯವಾಗಬೇಕು.

ಸೇವಾ ನಿರತ ಶಿಕ್ಷಕರಿಗೆ ಕಡ್ಡಾಯವಾಗಿ ಟಿ.ಇ.ಟಿ ಯನ್ನು ಪಾಸಾಗಬೇಕು ಎಂಬ ನಿಯಮಗಳನ್ನು ಕೈ ಬೀಡಬೇಕು.ಸೇವಾ ನಿರತ ಶಿಕ್ಷಕರಲ್ಲಿ ಪದವಿ ಪಡೆದ ಶಿಕ್ಷಕರನ್ನು ಪದವಿಧರ ಶಿಕ್ಷಕರೆಂದು ಪರಿಗಣಿಸಬೇಕು,ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಶಿಕ್ಷರನ್ನು ಖಾಯಂ ಮಾಡಬೇಕು ಎಂಬ ಬೇಡಿಕೆಗಳು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರಕಾರವು ಗಮನ ಹರಿಸುವುದರ ಮೂಲಕ ಅವುಗಳನ್ನು ಬೇಗನೆ ಈಡೇರಿಸುವ ಮೂಲಕ ಶಿಕ್ಷಕರಿಗೆ ನ್ಯಾಯವನ್ನು ಒದಗಿಸಿ ಕೊಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. 

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬೀರ​‍್ಪ ಅಂಡಗಿ ಮಾತನಾಡಿ,ರಾಜ್ಯ ಹಾಗೂ ರಾಷ್ಟ್ರ ಸಂಘದ ಕರೆಯ ಮೇರೆಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು  ಎಲ್ಲಾ ಶಿಕ್ಷಕರು ಓದು ಕರ್ನಾಟಕ ತರಬೇತಿಯಲ್ಲಿ ಭಾಗಯಾಗಿದ್ದಾರೆ.2006  ಎಪ್ರೀಲ್ 1 ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಮರಣ ಶಾಸನವಾಗಿರುವ ಎನ್‌.ಪಿ.ಎಸ್‌.ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಅನೇಕ ಹೋರಾಟಗಳು ಜರುಗಿದರೂ ಕೂಡಾ ಸರಕಾರ ಮಾತ್ರ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡಿಲ್ಲ.ಹಲವು ಸರಕಾರಗಳು ಕೇವಲ ಸಮಿತಿಗಳನ್ನು ರಚನೆ ಮಾಡಿತಿದ್ದು,ಆದರೆ ಇಲ್ಲಿಯವರೆಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ಮಾಡಿರುವುದಿಲ್ಲ.ಕೂಡಲೇ ಸರಕಾರವು ಇದರ ಬಗ್ಗೆ ಗಮನ ಹರಿಸಿ ಹಳೆಯ ಪಿಂಚಣಿ ಯೋಜೆಯನ್ನು ಜಾರಿಗೆ ಮಾಡುವ ಮೂಲಕ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಅಲ್ಲದೇ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರವು ಕಾರ್ಯಪ್ರವೃತ್ತಿಯಾಗಬೇಕು ಎಂದು ಹೇಳಿದರು. 

 ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಬಸವರಾಜ ಜೀರ,ಶ್ರೀಪತಿ ಹಳ್ಳಿಕೇರಿ,ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪೂರ್ಣಿಮಾ ಪಟ್ಟಣಶೆಟ್ಟಿ,ನಾಗರಾಜ.ಎಚ್ ಸೇರಿದಂತೆ ಮುಂತಾದವರು ಹಾಜರಿದ್ದರು.