ಸರ್ಕಾರದಿಂದ ಆರ್ಥಿಕ ಸಾಮಾಜಿಕ ಮತ್ತು ಜಾತಿಗಣತಿ ಪ್ರಾರಂಭ
Government begins economic, social and caste census
ಸರ್ಕಾರದಿಂದ ಆರ್ಥಿಕ ಸಾಮಾಜಿಕ ಮತ್ತು ಜಾತಿಗಣತಿ ಪ್ರಾರಂಭ
ಬೈಲಹೊಂಗಲ 24: ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರಿಯ ಸಮಾಜದಿಂದ ರಂದು ಸಮೀಪದ ಬೂದಿಗೊಪ್ಪ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದಿಂದ ಆರ್ಥಿಕ ಸಾಮಾಜಿಕ ಮತ್ತು ಜಾತಿಗಣತಿ ಪ್ರಾರಂಭ ಮಾಡಿದ್ದು ಇದರ ಬಗ್ಗೆ ಸಮಾಜಕ್ಕೆ ತಿಳಿವಳಿಕೆ ಮೂಡಿಸುವ ಬಗ್ಗೆ ಸಭೆ ನಡೆಯಿತು. ಧರ್ಮ ಕಾಲಂದಲ್ಲಿ ಹಿಂದೂ ಜಾತಿ, ಕ್ಷತ್ರಿಯ ಉಪಜಾತಿ, ಹಿಂದೂ ಕ್ಷತ್ರಿಯ ಎಂದು ಸಮಾಜ ಬಾಂಧವರು ಗಣತಿಗೆ ಬಂದಾಗ ಮೇಲೆ ತಿಳಿಸಿದ ಪ್ರಕಾರ ಹೇಳಬೇಕು. ಕರ್ನಾಟಕದಲ್ಲಿ ಒಟ್ಟು ಸಮಾಜದ ಜನಸಂಖ್ಯೆ ಎಷ್ಟು ಅಂತ ನಿಖರವಾದ ಮಾಹಿತಿ ಸಿಗುವುದು ಎಂದು ಡಾ. ಎಚ್.ಎಫ್ . ಯೋಗಪ್ಪನವರ ತಿಳಿಸಿದರು .ಸಭೆಯ ಅಧ್ಯಕ್ಷತೆಯನ್ನು ರಾಮುನಗೌಡ ಪಾಟೀಲ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ. ಡಿ. ಹುಲಮನಿ ನಿವೃತ್ತ ಎಸ್ಪಿ ,ಬಿ .ಎಸ್ .ನಾಯಕ್ ರಾಜ್ಯ ಉಪಾಧ್ಯಕ್ಷರು, ಅಶೋಕ್ ಸಿಗ್ನಹಳ್ಳಿ ಮುಂಡರಗಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹನುಮಂತಪ್ಪ ದೊಡಮನಿ, ಹೊನ್ನೂರ್ ನಿವೃತ್ತ ಸಿಪಿಐ, ಶ್ರೀಮತಿ ರಾಧಾ ಶಾಮ್ ಕಾದ್ರೊಳ್ಳಿ ಮಾಜಿ ಜಿ.ಪಂ ಸದಸ್ಯೆ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಮ್. ಕೆ.ಹಲಗತ್ತಿ, ನಿವೃತ್ತ ಹಿರಿಯ ಅಧಿಕಾರಿ ಭೀಮಪ್ಪ ಪೂಜಾರ, ಸಮಾಜ ಹಿರಿಯ ಮುಖಂಡ ಆನಂದ್ ರಾವ್ ನಾಯ್ಕ್ ,ಸಮಾಜದ ಹಿರಿಯ ಮುಖಂಡ ಚಂದ್ರು ಜಂಬ್ರಿ ,ಅಧ್ಯಕ್ಷರು ಎಪಿಎಂಸಿ ಸವದತ್ತಿ ಈ ಸಂದರ್ಭದಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ್ ಪೂಜಾರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ವಿವಿಧ ಸಂಘ ಸಂಸ್ಥೆ ಗಳ ಜನ ಪ್ರತಿನಿಧಿಗಳು ಮತ್ತು ಸಮಾಜದ ಮುಖಂಡರು ಭಾಗವಹಿಸಿದರು . ದಯಾನಂದ ಪೂಜಾರ ರಾಜ್ಯ ಕಾರ್ಯದರ್ಶಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿವಾನಂದ ಹುಲಿಕಟ್ಟಿ ಸ್ವಾಗತಿಸಿದರು. ಬಸವರಾಜ ಬಡಿಗೇರ ವಂದಿಸಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 