ಕುಡುಕರ ಮೋಜಿನ ತಾಣವಾದ ಸರಕಾರಿ ಕನ್ನಡ ಶಾಲೆ : ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಕುಡುಕರ ಮೋಜಿನ ತಾಣವಾದ ಸರಕಾರಿ ಕನ್ನಡ ಶಾಲೆ : ಕಣ್ಮುಚ್ಚಿ ಕುಳಿತ ಅಧಿಕಾರಿಗಳು  Government Kannada school a fun place for drunks: Officials turn a blind eye

ಕುಡುಕರ ಮೋಜಿನ ತಾಣವಾದ ಸರಕಾರಿ ಕನ್ನಡ ಶಾಲೆ : ಕಣ್ಮುಚ್ಚಿ ಕುಳಿತ ಅಧಿಕಾರಿಗಳು  

ಸಂಕೇಶ್ವರ 04: ಸರಕಾರಿ ಶಾಲೆಗಳಿಂದ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕರೆತರಲು ಪ್ರಯತ್ನಗಳು ಸಾಗುತ್ತಿವೆ. ಆದರೆ ಇಲ್ಲಿ ಸರಕಾರಿ ಕನ್ನಡ ಶಾಲೆಯೊಂದು ಮದ್ಯ ಪ್ರೀಯರ ಮೋಜಿನ (ಬಾರ್) ಸ್ಥಾನವಾಗಿ ಮಾರ​‍್ಪಟಟಿದೆ. ಆದರೆ ಇದಕ್ಕು ತಮಗೂ ಯಾವದೇ ಸಂಬಂಬ ಇಲ್ಲದಂತೆ ಸಂಬಂಧ ಪಟ್ಟ ಅಧಿಕಾರಿಗಳು ವರ್ತಿಸುತ್ತಿರುವದು ದುರ್ದೈವದ ಸಂಗತಿಯಾಗಿದೆ.   

    ಹೌದು ಇಂತಹ ಒಂದು ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ನಡೆಯುತ್ತಿದೆ. ಕಣಗಲಾ ಗ್ರಾಮದಲ್ಲಿರುವ ಸರಕಾರಿ ಕನ್ನಡ ಮಾದರಿ ಶಾಲೆಯಲ್ಲಿನ ಶಾಲಾ ಕೊಠಡಿಯಲ್ಲಿ ಕುಳಿತು ದಿನ ನಿತ್ಯ ಮದ್ಯ ಪ್ರೀಯರು ಮದ್ಯ ಸೇವನೆ ಮಾಡುವ ಮೂಲಕ ಶಾಲೆಯನ್ನು ಬಾರ್ ಹಾಗೂ ತಮ್ಮ ಅನೈತಿಕ ತಾಣವನ್ನಾಗಿ ಮಾಡಿಕೊಂಡಿರುವದು ದುರಂತ ಎನ್ನಲಾಗಿದೆ.  

      ಗ್ರಾಮದಲ್ಲಿನ ರಾಜಕೀಯ ಕೆಸರು ಎರಚಾಟದ ಹಿನ್ನೆಲೆಯಲ್ಲಿ ಈ ಶಾಲೆಗೆ ಕಳೆದ ಒಂದು ವರ್ಷದಿಂದ ಎಸ್ ಡಿ ಎಮ್ ಸಿ ಕಮೀಟಿ ಕೂಡಾ ನೇಮಕ ಮಾಡಲಾಗಿಲ್ಲ. ಅಲ್ಲದೆ ಈ ಕುರಿತು ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಈ ಬಗ್ಗೆ ವಿಷಯ ತಿಳಿಸಿದರೂ ಎನು ಪ್ರಯೋಜನೆ ಆಗಿಲ್ಲ ಅನ್ನುವ ಮಾತು ಕಣಗಲಾ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.   

      ಈ ಬಗ್ಗೆ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.