ಆಲಮೆಲ್ ಹೊಸ ತಾಲೂಕಿನ ಜನತೆಯ ಮೇಲಿನ ಸರ್ಕಾರದ ನಿರ್ಲಕ್ಷ್ಯ

ಆಲಮೆಲ್ ಹೊಸ ತಾಲೂಕಿನ ಜನತೆಯ ಮೇಲಿನ ಸರ್ಕಾರದ ನಿರ್ಲಕ್ಷ್ಯ  Government's negligence towards the people of Alamel New Taluk

 ಆಲಮೇಲ್ 12: ಹೊಸ ತಾಲೂಕು ಘೋಷಿಸಿದರೂ, ಆಲಮೆಲ್ ಜನತೆಗೆ ಸರ್ಕಾರ ಹಾಗೂ ಇಲಾಖೆಗಳಿಂದ ದೊರೆಯುತ್ತಿರುವುದು ಮಾತ್ರ ಭರವಸೆಗಳು, ಸೌಲಭ್ಯಗಳು ಅಲ್ಲ. ವಿಶೇಷವಾಗಿ ರಸ್ತೆ ಸಾರಿಗೆ ವಿಚಾರದಲ್ಲಿ ಜನರು ಪ್ರತಿದಿನ ಅನುಭವಿಸುತ್ತಿರುವ ಕಷ್ಟವು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮತ್ತು ಆಡಳಿತದ ತೀವ್ರ ವೈಫಲ್ಯವನ್ನು ಬಯಲಿಗೆಳೆಯುತ್ತದೆ. ಸಂಜೆ 7 ಗಂಟೆಯ ನಂತರ ಆಲಮೆಲ್ ರಸ್ತೆ ಮಾರ್ಗದಲ್ಲಿ ಬಸ್ ಸೌಲಭ್ಯವೇ  ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಹಿಳೆಯರ ಸುರಕ್ಷತೆಗೆ ಉದ್ಯೋಗಿಗಳ ಸಂಚಾರಕ್ಕೆ   ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ದೊರೆಯದ ಸ್ಥಿತಿ, ಎಂಬ ಗಂಭೀರ ಪರಿಸ್ಥಿತಿಯನ್ನು ಉಂಟುಮಾಡಿದೆ. ಇದು ಹೊಸ ತಾಲೂಕಿಗೆ ಬೇಕಾದ ಮೂಲಭೂತ ಸೌಕರ್ಯಗಳತ್ತ ಸರ್ಕಾರ ತೋರಿಸಿರುವ ಪರಮ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನ .ಆಲಮೆಲಿನಿಂದ ಹತ್ತಿರದಲ್ಲಿರುವ ಅಫಜಲ್ಪುರ್, ಸಿಂದಗಿ, ಇಂಡಿ ಬಸ್ ಡಿಪೋಗಳು ತಕ್ಷಣ ಸಭೆ ಸೇರಿ, ರಾತ್ರಿ 8:00, 9:00 ಮತ್ತು 10:00 ಗಂಟೆಗಳ ಬಸ್ ಸೌಲಭ್ಯವನ್ನು ಆರಂಭಿಸುವಂತೆ ಏಖಖಖಿಅಗೆ ನಾವು ಸ್ಪಷ್ಟ ಹಾಗೂ ಕಠಿಣ ಬೇಡಿಕೆ ಸಲ್ಲಿಸುತ್ತೇವೆ.

ಈ ಪ್ರದೇಶದ ಜನರ ಸಮಸ್ಯೆಗಳು ಸಣ್ಣವುಗಳಲ್ಲ; ಆದರೆ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯ ಮಾತ್ರ ದೊಡ್ಡದು. ಆಲಮೆಲ್ ತಾಲೂಕಿನ ಜನರ ಹಕ್ಕಿನ ಸೌಲಭ್ಯಗಳನ್ನು ಒದಗಿಸದೇ ಸರ್ಕಾರ ಆಡಳಿತ ನಡೆಸುತ್ತಿರುವದು ಇಲ್ಲಿಯ ಜನತೆಗೆ ಮಾಡುತ್ತಿರುವ ಮಹಾ ಮೋಸ. ಇನ್ನು ಏಖಖಖಿಅ ಮತ್ತು ರಾಜ್ಯ ಸರ್ಕಾರ ಜಾಗೃತರಾಗದೇ ಇದ್ದರೆ, ಆಲಮೆಲ್ ಪಟ್ಟಣ ಹಾಗೂ ಸುತ್ತಲಿನ ಎಲ್ಲಾ ಹಳ್ಳಿಗಳು ಒಗ್ಗೂಡಿ, ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಗಟ್ಟಿತನದ ಉತ್ತರ ಕೊಡಲು ರಸ್ತೆ ಬಂದ್ ಸೇರಿದಂತೆ ಹೋರಾಟದ ತೀವ್ರವಾದ ರೂಪಗಳನ್ನು ಒಡ್ಡಲು ಸಿದ್ಧವಾಗಿವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತೇವೆ. ಸರ್ಕಾರ ನೀಡಬೇಕಾಗಿದ್ದ ಸೌಲಭ್ಯಕ್ಕಾಗಿ ಜನತೆ ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ಬಂದಿರುವುದು ಆಡಳಿತದ ವೈಫಲ್ಯದ.ಹಿ ಬಸವರಾಜ ಹೂಗಾರನಿಕಟ ಪೂರ್ವ ಜಿಲ್ಲಾಧ್ಯಕ್ಷರು ಬಿಜೆಪಿ ಯುವ ಮೋರ್ಚಾ, ವಿಜಯಪುರ ಜಿಲ್ಲೆ - 9740207097