ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಯವರಿಗೆ ಗೌರದಧನ ಬಿಡುಗಡೆ
Gourad Dhan released to officers and staff who worked on social and educational surveys
ಧಾರವಾಡ 13: 2025-26 ನೇ ಸಾಲಿನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಸೆಪ್ಟೆಂಬರ್ 22, 2025 ರಿಂದ ಅಕ್ಟೋಬರ್ 31, 2025 ರವರೆಗೆ ಜರುಗಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಗಣತಿದಾರರಿಗೆ, ಮೇಲ್ವಿಚಾಕರಿಗೆ ತರಬೇತಿ ನೀಡಿದ ರಾಜ್ಯಮಟ್ಟದ (ಮಾಸ್ಟರ್) ತರಬೇತಿದಾರರಿಗೆ ಗೌರವಧನವನ್ನು ಪಾವತಿ ಮಾಡುವ ಕಾರ್ಯ ಡಿಸೆಂಬರ್ 12 ರಿಂದ ಆರಂಭವಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಗೌರವಧನ ಪಾವತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮೀಕ್ಷೆದಾರರ ಮೇಲೆ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಒಟ್ಟು 395 ಜನ ಮೇಲ್ವಿಚಾರಕರಿಗೆ ತಲಾ ರೂ.10,000 ಗಳಂತೆ ಒಟ್ಟು 39,50,000 ರೂ.ಗಳು ಬಿಡುಗಡೆಯಾಗಿದ್ದು, ಎಲ್ಲಾ ಮೇಲ್ವಿಚಾರಕರ ರೆಸಿಪಿಯಂಟ್ ಐ.ಡಿ. ಗಳನ್ನು ಪಡೆಯಲಾಗಿದ್ದು, ಸದರಿಯವರಿಗೆ ಗೌರವಧನವನ್ನು ಪಾವತಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಒಟ್ಟು 4,884 ಸಮೀಕ್ಷಾದಾರರಿಗೆ ಸಮೀಕ್ಷೆ ಕೈಗೊಂಡಿರುವ ಮನೆಗಳಿಗನುಗುಣವಾಗಿ ಗೌರವಧನ ಪಾವತಿಸಲು ರೂ.4,40,46,700 ಬಿಡುಗಡೆಯಾಗಿದ್ದು, ಎಲ್ಲಾ ಗಣತಿದಾರರ ರೆಸಿಪಿಯಂಟ್ ಐ.ಡಿ.ಗಳನ್ನು ಪಡೆಯಲಾಗುತ್ತಿದೆ. ರೆಸಿಪಿಯಂಟ್ ಐ.ಡಿ. ಒದಗಿಸಿರುವ 1,525 ಗಣತಿದಾರರಿಗೆ ಒಟ್ಟು ರೂ.1,57,62,500 ಗಳನ್ನು ಪಾವತಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಉಳಿದ ಎಲ್ಲ ಗಣತಿದಾರರಿಗೂ ಗೌರವಧನ ಜಮಾ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಗಣತಿದಾರರಿಗೆ, ಮೇಲ್ವಿಚಾಕರಿಗೆ ತರಬೇತಿ ನೀಡಿದ 92 ಜನ (ಮಾಸ್ಟರ್) ತರಬೇತಿದಾರರಿಗೆ 4,72,500 ರೂ.ಗಳ ಗೌರವಧನವನ್ನು ಜಮೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 4,886 ಬ್ಲಾಕ್‌ಗಳನ್ನು ಸೃಜಿಸಲಾಗಿದ್ದು, ಪ್ರತಿ ಬ್ಲಾಕ್‌ಗೆ ತಲಾ ರೂ.5,000 ಗಳಂತೆ ಒಟ್ಟು ರೂ.2,44,25,000 ಬಿಡಗಡೆಯಾಗಿದ್ದು, ಸಂಬಂಧಪಟ್ಟ ಬ್ಲಾಕ್‌ಗಳಲ್ಲಿ ಕಾರ್ಯನಿರ್ವಹಿಸಿದ ಗಣತಿದಾರರಿಗೆ ಸದರಿ ಗೌರವಧನವನ್ನು ಪಾವತಿಸಬೇಕಾಗಿದ್ದು, ಆ ಬ್ಲಾಕ್‌ಗಳಲ್ಲಿ ಸಮೀಕ್ಷಾ ಕಾರ್ಯನಿರ್ವಹಿಸಿರುವ ಗಣತಿದಾರರ ಬ್ಲಾಕ್‌ವಾರು ಮಾಹಿತಿಗಳನ್ನು ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 