ಸಾವಯವ ಕೃಷಿಯಲ್ಲಿ ಉತ್ತಮ ಇಳುವರಿ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ : ಸಾವಯವ ಕೃಷಿಕ ಗೌರಿಶಂಕರ್
Good yields and building a healthy society are possible in organic farming: Organic farmer Gowri Sh
ಚಿಕ್ಕೋಡಿ 21: ಭಾರತದ ಕೃಷಿ ವ್ಯವಸ್ಥೆಯಲ್ಲಿ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಆರಂಭವಾದ ರಾಸಾಯನಿಕ ಬಳಕೆ ಇಂದು ಗಂಭೀರ ಪರಿಸರ ಮತ್ತು ಆರೋಗ್ಯ ಸಮಸ್ಯೆಗಳಾಗಿ ಪರಿಣಮಿಸುತ್ತಿದೆ. ಗೊಬ್ಬರಗಳು, ಕೀಟನಾಶಕಗಳು ಹಾಗೂ ಹುಲ್ಲುನಾಶಕಗಳ ಅತಿಯಾದ ಬಳಕೆಯಿಂದ ಕೃಷಿಯ ಸ್ವಾಭಾವಿಕ ಸಮತೋಲನ ಹದಗೆಟ್ಟು, ರೈತ, ಗ್ರಾಹಕ ಹಾಗೂ ಪರಿಸರ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿರುವುದು ಆತಂಕಕಾರಿ ಸಂಗತಿ ಅದರಿಂದ ಹೊರಬರಲು ಸಾವಯವ ಕೃಷಿಯಿಂದ ಮಾತ್ರ ಸಾಧ್ಯ , ದೇಶದ ಅಭಿವೃದ್ಧಿ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಯಶಸ್ವಿ ಸಾವಯವ ಕೃಷಿಕ ಗೌರಿಶಂಕರ್ ಕರೋಶಿ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಬಸವ ಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಕೃಷಿಯ ರಾಸಾಯನಿಕರಣದ ಪರಿಣಾಮಗಳು ಮತ್ತು ಪರಿಹಾರಗಳು ವಿಷಯದ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿದ್ಯಾರ್ಥಿಗಳ ಸೆಮಿನಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಅವರು ಹಸಿರು ಕ್ರಾಂತಿಯ ನಂತರ ರಾಸಾಯನಿಕರಣದ ಕೃಷಿ ಉತ್ಪನ್ನ ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳುವ ಸಲುವಾಗಿ ಪ್ರಾರಂಭವಾದ ಈ ಪ್ರಕ್ರಿಯೆ ಕ್ರಮೇಣ ಜೀವ ವೈವಿಧ್ಯ ನಾಶ, ಪರಿಸರ ಮಾಲಿನ್ಯ,ಬೆಳೆ ಉತ್ಪಾದನೆ ಮೇಲೆ ದೀರ್ಘ ಪರಿಣಾಮ ದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅದರಿಂದ ಅದರಿಂದ ಹೊರಬರಲು ಜೈವಿಕ ಕೃಷಿ, ಸಮರ್ಕ ಕೀಟಗಳನ್ನು ನಿರ್ವಹಣೆ,ಮಣ್ಣು ಪರೀಕ್ಷೆ ಮತ್ತು ಸಮತೋಲನಿತ ಗೊಬ್ಬರ ಬಳಕೆ,ಬೆಳೆ ಪರಿವರ್ತನೆ,ರೈತರ ಜಾಗೃತಿ ಮತ್ತು ತರಬೇತಿ ರೈತರಿಗೆ ಪರಿಸರ ಸ್ನೇಹಿ ಕೃಷಿ ವಿಧಾನಗಳ ಬಗ್ಗೆ ಶಿಕ್ಷಣ ಮತ್ತು ತರಬೇತಿ, ಸರ್ಕಾರದ ಬೆಂಬಲಜೈವಿಕ ಕೃಷಿಗೆ ಸಹಾಯಧನ,ಜೈವಿಕ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕೆ.ಎಲ್.ಇ ಸಂಸ್ಥೆಯ ಮಾಜಿ ಆಜೀವ ಸದಸ್ಯ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ. ಎಂ.ಟಿ. ಕುರಣಿ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿಯ ರಾಸಾಯನೀಕೀಕರಣವು ತಾತ್ಕಾಲಿಕವಾಗಿ ಉತ್ಪಾದನೆ ಹೆಚ್ಚಿಸಿದರೂ, ದೀರ್ಘಾವಧಿಯಲ್ಲಿ ಮಣ್ಣು, ಪರಿಸರ ಮತ್ತು ಮಾನವ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತದೆ. ಆದ್ದರಿಂದ ಸ್ಥಿರ, ಪರಿಸರ ಸ್ನೇಹಿ ಮತ್ತು ಜೈವಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿ ಸದಸ್ಯ ಮಹೇಶ್ ಭಾತೆ ಮಾತನಾಡಿ , ಕೃಷಿ ಪ್ರಧಾನ ದೇಶ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಮಗ್ರವಾಗಿ ಆಧುನಿಕತೆಯ ತಂತ್ರಜ್ಞಾನದ ಮೂಲಕ ಸಾವಯವ ಕೃಷಿ ಉತ್ತೇಜನ ನೀಡುವ ಪಠ್ಯಕ್ರಮದ ಮೂಲಕ ಯುವಕರು ಹೆಚ್ಚಿನ ಮಟ್ಟದಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಯಶಸ್ವಿವಾಗಿ ಸಮೃದ್ಧ ದೇಶ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಪ್ರಾಚಾರ್ಯ ಡಾ. ಬಿ.ಜಿ. ಕುಲಕರ್ಣಿ ಸ್ವಾಗತಿಸಿ ಮಾತನಾಡಿದ ಅವರು ದೇಶದ ಅಭಿವೃದ್ಧಿ, ಆರೋಗ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮತ್ತು ಅರಿವು ಮೂಡಿಸಲು ಈ ಕೃಷಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಯುವಜನತೆಗೆ ಕೃಷಿಯ ವಾಸ್ತವ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಆಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಸಾವಯವ ಕೃಷಿಕರ ಜೊತೆ ಸಂವಾದ ಚರ್ಚೆ ನಡೆಸಲಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಪ್ರಬಂಧವನ್ನು ಮಂಡಿಸಿದರು. ಹಿರಿಯ ಜನರಲ್ ಮ್ಯಾನೇಜರ್ ಎನ. ಎಸ್ . ಹಿರೇಮಠ , ಉಪ ಪ್ರಾಚಾರ್ಯ ಪ್ರೊ. ಸುಧೀರ್ ಕೋಟಿವಾಲೆ, ಐ. ಕ್ಯು. ಎ. ಸಿ ಸಂಯೋಜಕ ಡಾ. ವಿನಾಯಕಛ ಮಂಜಲಾಪುರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಎಂ.ಆರ್.ಛಾಯ. ಕಾರ್ಯಕ್ರಮ ಸಂಯೋಜಕ ಡಾ. ಎಸ್.ಎಂ. ಪಾಟೀಲ್, ಪ್ರೊ. ಎಸ್. ಎಸ್.ಪಾಟೀಲ, ಪ್ರೊ. ಶಾಂತಿನಾಥ ಲಠ್ಠೆ, ಪ್ರೊ. ರಾಜೇಶ್ ನಾಯ್ಕ, ಡಾ. ಸಿದ್ಧಲಿಂಗ ಮಟ್ಟೆಪ್ಪನವರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕು. ತೇಜಸ್ವಿನಿ ಜೊಡಟ್ಟಿ ದೀಪಾ ಪೂಜಾರಿ ನಿರೂಪಿಸಿದರು. ಪದವಿ ಕಾಲೇಜು . ಕು. ಸುಧಾರಾಣಿ ಗುಡೋಡಗಿ ಅತಿಥಿ ಪರಿಚಯಿಸಿದರು. ಕು. ರಾಣಿ ಪೂಜಾರಿ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಕು. ಸಂಗೀತಾ ಚೌಗಲಾ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 