ಶುದ್ಧ ಕುಡಿಯುವ ನೀರಿನಿಂದ ಉತ್ತಮ ಆರೋಗ್ಯ: ಶಾಸಕ ರಾಜುಗೌಡ

ಶುದ್ಧ ಕುಡಿಯುವ ನೀರಿನಿಂದ ಉತ್ತಮ ಆರೋಗ್ಯ: ಶಾಸಕ ರಾಜುಗೌಡ  Good health with clean drinking water: MLA Rajugowda

ದೇವರಹಿಪ್ಪರಗಿ 24 : ರೋಗ ರುಜಿನಗಳ ಮೂಲ ನೀರಾಗಿದ್ದು, ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರು ಸೇವಿಸುವುದರಿಂದ ಸಮಾಜದಲ್ಲಿ ಉತ್ತಮ ಆರೋಗ್ಯ ಸಂಪತ್ತನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು. ಪಟ್ಟಣದಲ್ಲಿ ಮಂಗಳವಾರದಂದು ಅಲ್ಪಸಂಖ್ಯಾತರ ಇಲಾಖೆಯ ತಲಾ 20ಲಕ್ಷ ರೂ ವೆಚ್ಚದ 5 ಶುದ್ಧ ಕುಡಿಯುವ ನೀರಿನ ಘಟಕ ಭೂಸೇನಾ ಇಲಾಖೆ ಅಡಿಯಲ್ಲಿಯಲ್ಲಿ ನಿರ್ಮಿಸಲಾದ  ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿಗಳ ಭರಾಟೆಯಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾಮುಗಾರಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ.

ದೇವರಹಿಪ್ಪರಗಿ  ನೂತನ ತಾಲ್ಲೂಕಾಗಿದ್ದು ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಸಿ.ಸಿ. ರಸ್ತೆ, ಚರಂಡಿ, ಗ್ರಾಮೀಣ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಪ್ರಯತ್ನಪಟ್ಟಿದ್ದೇನೆ. ಪಟ್ಟಣ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತಿದ್ದು, ಅವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಅನುದಾನ ನೀಡಲಾಗುತ್ತಿದೆ ಬರುವಂತ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಹಾಗೂ ಬೇಸಿಗೆ ದಿನಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದ ಹಾಗೆ ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ರೀಯಾಜ ಯಲಿಗಾರ ಅವರು ಮಾತನಾಡಿ, ವಿರೋಧ ಪಕ್ಷದವರಿಗೆ ಅನುದಾನದ ಸಮಸ್ಯೆ ಇದ್ದರೂ ಶಾಸಕರು ಅವಶ್ಯಕತೆಗೆ ಅನುಗುಣವಾಗಿ ಜಾತಿ ಮತ ಎನ್ನದೆ ಸರ್ವ ಜನಾಂಗದವರಿಗೆ ಅನುದಾನ ನೀಡುವ ಮೂಲಕ ಜನಸ್ನೇಹಿಯಾಗಿ ಶಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರ ಪ್ರತಿನಿಧಿಯಾದ ಬಸಪ್ಪ ದೇವಣಗಾಂವ, ಪ.ಪಂ ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಜಯಶ್ರೀ ಸೇಬೆನವರ್, ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಮೈಹಿಬೂಬ ಹುಂಡೆಕಾರ, ಉಪಾಧ್ಯಕ್ಷರಾದ ಮಹಮ್ಮದರ ಫೀಕ್ ಪಾನ್ ಪರೋಶ, ಭೂಸೇನಾ ಇಲಾಖೆಯ ಎಇಇ ರಾಜಶೇಖರ, ಜೆಇ ಪ್ರಫುಲ ಕುಮಾರ ಮುಖಂಡರುಗಳಾದ ಎ.ಡಿ.ಮುಲ್ಲಾ, ಜಬ್ಬರ ಅಹಮದ್ ಮೋಮಿನ್, ಜಬ್ಬರ್ ಚೌದ್ರಿ, ವೀರೇಶ್ ಕುದುರಿ ಸೇರಿದಂತೆ ಹಲವಾರು ಜನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.