ಸತ್ಕರ್ಮ ನಮ್ಮನ್ನು ಕಾಪಾಡುವುದು: ಬಸವಲಿಂಗೇಶ್ವರ ಶ್ರೀಗಳು

ಸತ್ಕರ್ಮ ನಮ್ಮನ್ನು ಕಾಪಾಡುವುದು: ಬಸವಲಿಂಗೇಶ್ವರ ಶ್ರೀಗಳು  Good deeds protect us: Basavalingeshwara Sri


ಯಲಬುರ್ಗಾ  07 : ಭಕ್ತರು ಗುರುವನ್ನು ಮೀರಿಸಬೇಕು ಕಲುಷಿತ ಸಮಾಜವನ್ನು ಸ್ವಚ್ಛ ಮಾಡಲು ನಾವೇಲ್ಲರೂ ಪ್ರಯತ್ನಿಸಬೇಕು. ಈಶ್ವರಿ ಬಳಗದವರು ಬಿಳಿ ಬಟ್ಟೆಯನ್ನು ಧರಿಸುವುದು ಶುಭ್ರತೆಯ ಸಂಕೇತವಾಗಿದೆ . ಭಗವಂತನ ಚಿಂತನೆಗೆ ಮನಸ್ಸನ್ನು ತೊಡಗಿಸಿಲು ಪ್ರಯತ್ನಿಸಿದಾಗ ಹುಟ್ಟಿದ ಜೀವನ ಸಾರ್ಥಕವಾಗುತ್ತದೆ ನಾವು ಮಾಡುವ ಸತ್ಕರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀ ಷ ಬ್ರ ಬಸವಲಿಂಗೇಶ್ವರ ಶಿವಾಚಾರ್ಯರ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ದಂದು ಹೊಸ ವರುಷದ ಪಾಕೇಟ್ ಕ್ಯಾಲೆಂಡರ ಬಿಡುಗಡೆಗೊಳಿಸಿ ಮಾತನಾಡಿದ ಅವರು ಮನಸ್ಸನ್ನು ಖಾಲಿ ಬಿಡದಂತೆ ಸದಾ ಕ್ರಿಯಾಶೀಲನಾಗಬೇಕು

ಮಕ್ಕಳು ಇದ್ದಾಗಲೆ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಪಾಲಕರು ಚಿಂತಿಸಬೇಕಾಗಿದೆ ಎಂದೆನ್ನುತ್ತಾ ಭಗವಂತನ ನಾಮಸ್ಮರಣೆಯಿಂದ ಪವಿತ್ರರಾಗಲು ಕರೆನೀಡಿದರು.ಜಯಂತಿ ಅಕ್ಕನವರು ವಿಶೇಷ ಉಪನ್ಯಾಸ ನಿಡುತ್ತಾ ಆತ್ಮವನ್ನು ಪರಿಶುದ್ಧಗೊಳಿಸಲು ಅಧ್ಯಯನ ಅವಶ್ಯ, ಆರೋಗ್ಯ ? ಸಂಪತ್ತು ಬರಬೇಕಾದರೆ ಮೊದಲು ಶಾಂತಿ ನಮ್ಮಲ್ಲಿ ಬರಬೇಕು? ಪವಿತ್ರತೆ ಸತತ ಪರಿಶ್ರಮದಿಂದ ಬರಲಿದೆ ಮಾಧ್ಯಮದಿಂದ ಪರಮಾತ್ಮನ ಸಂದೇಶ ಪ್ರತಿಯೊಬ್ಬರ ಮನೆ ಮನಕೂ ಮುಟ್ಟುವ ಕೆಲಸ ಮಾಡಲಿರುವ ಅವರ ಬಾಳು ಬಂಗಾರವಾಗಿರಲಿ ಎಂದು ಶುಭಹಾರೈಸಿದರು.  

ಉಪನಿರ್ದೇಶಕರಾದ ಶಂಕ್ರ​‍್ಪ ಗಾಂಜಿ? ??ಸಂಗಣ್ಣ ಟೆಂಗಿನಕಾಯಿ ! ವೀರಣ್ಣ ಹುಬ್ಬಳ್ಳಿ ? ಅಮರ​‍್ಪ ಕಲಬುರ್ಗಿ ಡಾ! ನಂದಿತಾ ದಾನರಡ್ಡಿ ? ವಿದ್ಯಾಶ್ರೀ ಡಾ! ಶಿಲ್ಪಾ ಮಾತನಾಡಿ ಶಾಂತಿ ನೆಮ್ಮದಿ ನೀಡುವಲ್ಲಿ ಈಶ್ವರಿ ವಿದ್ಯಾಲಯದಿಂದ ಪ್ರಾಪ್ತಿಯಾಗುತ್ತದೆ ಎಂದು ಆಶಿಸಿದರು .   ಕಷ್ಟ ಸುಖಗಳ ಮಿಶ್ರಣ ದ ಭಾಗವಾಗಿ ಹೊಸ ವರುಷ ನಾಂದಿಯಾಗಲಿ ಎಂದರು ಮನುಜನ ಎತ್ತರವು ಧ್ಯಾನ ದಾನದಿಂದ ಸಾಧ್ಯ. ಧ್ಯಾನದಿಂದ ಶಾಂತಿ ಬರಬೇಕಾದರೆ ಸ್ವಯಂ ಅನುಭೂತಿಗೊಂಡಾಗ ಪವಿತ್ರತೆಯನ್ನು ಅಳವಡಿಸಿಕೊಳ್ಳಲು ಸಾಧ್ಯ.ಅರಿಷಡ್ವರ್ಗಗಳ ನಿಯಂತ್ರಣದಿಂದ ಏನೇಲ್ಲಾ ಸಾಧಿಸಬಹುದು ಯೋಗದಿಂದ ಮನಸ್ಸು ಬುದ್ಧಿ ಯನ್ನು ಹತೋಟಿಗೆ ತರಬಹುದು ನಮ್ಮ ಏಳ್ಗಿಗೆ ನಾವೇ ಕಾರಣರು ಎಂಬುವದನ್ನು ಅರಿತಾಗ ಮೌಲ್ಯಾನರಿತ ಜೀವನವನ್ನು ರೂಪಿಸಲು ಸತ್ಸಂಗದಿಂದ ಸಾಧ್ಯ . 

 ನಮ್ಮನ್ನು ನಾವು ಅರಿತುಕೊಂಡು ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು .ಈ ವೇಳೆ ಡಾ!ಶಿವನಗೌಡ ದಾನರಡ್ಡಿ ? ಸಿದ್ದಯ್ಯ ಕೊಣ್ಣೂರ? ವೀರಯ್ಯ ಹಿರೇಮಠ ? ವೀರನಗೌಡ ಪಾಟೀಲ ? ಶ್ರೀಶೈಲಗೌಡ ತೊಂಡಿಹಾಳ ? ಶ್ರೀಶೈಲಪ್ಪ ತೋಟದ ! ಫಕೀರ​‍್ಪ ಗಾಣಗೇರ ? ವಿಜಯ ಜಕ್ಕಲಿ ? ಶರಣಪ್ಪ ಗಾಂಜಿ ?ಜಗದೀಶ ಅಂಗಡಿ ? ಮುತ್ತಯ್ಯ ಮಲಕಸಮುದ್ರ ? ನಿಂಗಪ್ಪ ಯರಾಶಿ ? ಫಕೀರ​‍್ಪ ಹೊನ್ನೂರು?ಅಕ್ಕಂದಿರಾದ ಭಾವನಾ ? ಜೋಷ್ನಾ ಹಾಗೂ ಈಶ್ವರಿ ಪರಿವಾರದ ನೂರಾರು ಅಕ್ಕಂದಿರು ಉಪಸ್ಥಿತರಿದ್ದರು. ಪತ್ರಕರ್ತರನ್ನು ಹಾಗೂ ಪಟ್ಟಣದ ಹಲವಾರು ಗಣ್ಯರನ್ನು ಈಶ್ವರಿ ಪರಿವಾರದವರು ಸನ್ಮಾನಿಸಿ ಗೌರವಿಸಿದರು.ಗದುಗಿನ ಬ್ರ.ಕು. ಸಾವಿತ್ರಿ ಅಕ್ಕನವರು ನಿರೂಪಿಸಿದರು ಸ್ಥಳೀಯ ಸಂಚಾಲಕಿ ಬ್ರ.ಕು.ಗೀತಕ್ಕ ಸ್ವಾಗತಿಸಿದರು. ನಂತರ ಬ್ರಹ್ಮ ಭೋಜನವನ್ನು ಸಾಮೂಹಿಕವಾಗಿ ಮಾಡಲಾಯಿತು.