ಗೊಂಡಬಾಳ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ:ಶ್ರದ್ಧಾ ಭಕ್ತಿಯಿಂದ ನಡೆದ ದೇವಿಯ ಮಹಾ ರಥೋತ್ಸವ
Gondabala Sri Banashankari Devi Jatra Mahotsav: The great chariot festival of the Goddess held with
ಕೊಪ್ಪಳ 02: ತಾಲೂಕಿನ ಗೊಂಡಬಾಳ ಗ್ರಾಮದ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ಶೃದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ದೇವಿಯ ರಥೋತ್ಸವ ಜರುಗಿತು.ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಾನಲ್ಲಿ ಹೋಮ ಹವನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ನಂತರ ಮುತ್ತೈದೆಯರಿಗೆ ಊಡಿ ತುಂಬುವ ಕಾರ್ಯಕ್ರಮ ಜರುಗಿತು.ಮಧ್ಯಾಹ್ನ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಅನ್ನಸಂತರೆ್ಣ ನಡೆಯಿತು.ಮೈನಳ್ಳಿ ಬಿಕನಳ್ಳಿ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ವೇದಮೂರ್ತಿ ಸಿದ್ದಲಿಂಗಯ್ಯ ಹಿರೇಮಠ, ಅರ್ಚಕರು ವೀರಭದ್ರ್ಪ ಇಂದರಗಿ, ಸಾನಿಧ್ಯವಹಿಸಿದ್ದರು.ಈ ಸಂದರ್ಭದಲ್ಲಿ ಶ್ರೀಬನಶಂಕರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಗೀರಿಮಲ್ಲಯ್ಯ ಬಗನಾಳ, ಉಪಾಧ್ಯಕ್ಷ ವಿರೇಶ ಇಂದರಗಿ, ದೇವಪ್ಪ ಬಗನಾಳ, ಗೋಪಾಲಕೃಷ್ಣ ಜನಿವಾರದ, ಶರಣಪ್ಪ ಸಜ್ಜನ, ಶ್ರೀಶೈಲಪ್ಪ ಹಳ್ಳಿಕೇರಿ, ಲಿಂಗಜ್ಜ ಜಾಗೀರದಾರ,
ನಾಗರಾಜ ಕೊಳ್ಳಿ, ಬಿಜೆಪಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಬಸವರಾಜ ಕ್ಯವುಟರ್ ಹಾಗೂ ಶರಣಪ್ಪ ಸಜ್ಜನ್ ಶಿಕ್ಷಕ ಬಸವನಗೌಡ ಪೋಲಿಸ್ ಪಾಟೀಲ್, ಮಂಜುನಾಥ ಜನಿವಾರದ,, , ಪ್ರಧಾನಪ್ಪ ಹಂಡಿ, ಭೀಮಜ್ಜ ಬನ್ನಿಗೋಳ, ಮಂಜುನಾಥ ಬನ್ನಿಗೋಳ, ಈಶಪ್ಪ ಹಲಗೇರಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಗುರು ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು. ಹಾಗೂ ರೈತ ಮನೆತನ ನಾಟಕ ಸುಂದರ ಸಮಾಜ ನಾಟಕ ಜರಗುವುದು ಹಾಗೂ ಪೊಲೀಸ್ ಇಲಾಖೆಯ ಉಮೇಶ್ ನಾಯಕ್ ಚಿದಾನಂದ ಗಣೇಶ್. ಕರ್ತವ್ಯ ನಿರ್ವಹಿಸಿದರು..ನಾಳೆ ಫೆ.2 ಬೆಳಿಗ್ಗೆ ಸಿದ್ದಯ್ಯ ವಸ್ತ್ರದ್ ದಂಪತಿಗಳಿಂದ ಶ್ರೀ ದೇವಿಗೆ ಶಾಕಾಂಬರಿ ಪೂಜೆ (ತರಕಾರಿ) ಸಂಜೆ 6;00 ಗಂಟೆಗೆ ಕಡುಬಿನ ಕಾಳಗ (ಛಟ್ಟು) ರಾತ್ರಿ 7:00 ಗಂಟೆಗೆ ಬಯಲು ರಂಗ ಮಂದಿರದಲ್ಲಿ ಮಕ್ಕಳ ಹೊಂಬೆಳಕು ರಸಮಂಜರಿ ಕಾರ್ಯಕ್ರಮ ನಡೆಯುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 