ತಿಂಗಳ ಪುಸ್ತಕಾವಲೋಕನಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ ಸಾಹಿತ್ಯ ಸಿಂಚನ ಕೃತಿ ಲೋಕಾರೆ​‍್ಣ ಮನ, ಮನೆಗಳನ್ನು ತಲುಪಿದ ಕಸಾಪ

ತಿಂಗಳ ಪುಸ್ತಕಾವಲೋಕನಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ ಸಾಹಿತ್ಯ ಸಿಂಚನ ಕೃತಿ ಲೋಕಾರೆ​‍್ಣ ಮನ, ಮನೆಗಳನ್ನು ತಲುಪಿದ ಕಸಾಪ Golden Jubilee Celebration for Monthly Book Review: Literary Irrigation Works: Lokarena Mana, Kasap

ರಬಕವಿ-ಬನಹಟ್ಟಿ 24 : ಈ ದೇಶಕಂಡ ಶ್ರೇಷ್ಠ ಎರಡು ಉದ್ದಿಮೆದಾರರಲಿ ್ಲಟಾಟಾ ಮತ್ತು ಬಿರ್ಲಾ ಪ್ರಮುಖರು, ಟಾಟಾ ಮತ್ತು ಬಿರ್ಲಾಇಬ್ಬರೂದೇಶದ ಆರ್ಥಿಕ ಕಣ್ಣುಗಳು. ವ್ಯವಸ್ಥೆಯ ಇಬ್ಬರೂ ಭಾರತದ ಗೌರವವನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿಗಳು ಎಂದುಇಲ್ಲಿನ ಮಡಿವಾಳಪ್ಪ ವೀರ​‍್ಪ ಪಟ್ಟಣ ಪದವಿ ಪೂರ್ವಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ರಾಜೇಶ ನೋಟದ ತಿಳಿಸಿದರು. ಅವರುರಬಕವಿಯ ಬ್ರಹ್ಮಾನಂದ ನಗರದ ನಿವಾಸಿ ಶ್ರೀಮತಿ ಅನ್ನಪೂರ್ಣಾ ವಿಜಯ ಹೂಗಾರ ಅವರ ನಿವಾಸದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಐವತ್ತನೆಯ ತಿಂಗಳ ಪುಸ್ತಕಾವ ಲೋಕನ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಎಂ. ಎಸ್‌. ಬದಾಮಿಅವರು ರಚಿಸಿದ ‘ರತನ್‌ಟಾಟಾ' ಕೃತಿಯಕುರಿತು ಮಾತನಾಡಿದರು. 

ಜಿಲ್ಲಾಕಸಾಪ ಘಟಕದ ಅಧ್ಯಕ್ಷಶಿವಾನಂದ ಶೆಲ್ಲಿಕೇರಿ ಮಾತನಾಡಿ, ಕನ್ನಡ ಸಾಹಿತ್ಯ ಸಮಾಜಮುಖಿಯಾಗಿ ಪರಿಷತ್ತು ಕಾರ್ಯ ಮಾಡುತ್ತಿದೆ. ಐವತ್ತಕ್ಕೂ ಹೆಚ್ಚು ದತ್ತಿ ಉಪನ್ಯಾಸಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯಘಟಕಕ್ಕೆ ಜಿಲ್ಲೆಯಿಂದರೂ. ಹನ್ನೆರಡು ಲಕ್ಷದತ್ತಿ ನಿಧಿ ಹಣವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ಕಸಾಪ ಆಯೋಜನೆ ಮಾಡಲಿದೆಎಂದರು. 

ಬೆಂಗಳೂರಿನ ನೇಯ್ಕೆ ನುಡಿ ಮಾಸಿಕ ಪತ್ರಿಕೆಯ ಸಂಪಾದಕ ಬೆಳ್ಳಿಚುಕ್ಕಿ ವೀರೇಂದ್ರ ಅವರು ತಿಂಗಳ ಪುಸ್ತಕಾವಲೋಕನ ಕಾರ್ಯಕ್ರಮದ ಐವತ್ತು ಉಪನ್ಯಾಸಕ ಮಾಲಿಕೆಯ ಸಾಹಿತ್ಯ ಸಿಂಚನ ಕೃತಿಯನ್ನು ಲೋಕಾರೆ​‍್ಣ ಮಾಡಿ ಮಾತನಾಡಿದಅವರು ಬೆಂಗಳೂರಿನಲ್ಲಿ ಈ ರೀತಿಯಕನ್ನಡ ಕೆಲಸ ಕಾರ್ಯಗಳು ಆಗುತ್ತಿಲ್ಲ. ನಿಜವಾದ ಸಾಹಿತಿಗಳಿಗೆ ಸಿಗಬೇಕಾದ ಮನ್ನಣೆಅಲ್ಲಿ ಸಿಗುತ್ತಿಲ್ಲ. ರಬಕವಿ-ಬನಹಟ್ಟಿತಾಲೂಕಿನ ಕಸಾಪ ಅಧ್ಯಕ್ಷರು, ಸಾಹಿತಿಗಳು, ಸಂಘಟಕರು ಕಲಾವಿದರೂ ಆಗಿರುವ ಮ. ಕೃ. ಮೇಗಾಡಿ ಅವರ ತಂಡ ಕ್ರಿಯಾಶೀಲರಾಗಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಹಿರಿಯರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯದ ಕೆಲಸಗಳು ನಿರಂತರ ನಡೆಸುತ್ತಿರುವುದು ಮಾದರಿಯಾಗಿದೆ. ಮನೆ-ಮನಗಳನ್ನು ಇಲ್ಲಿಯ ಕಸಾಪ ತಲುಪಿದೆಎಂದರು. 

ರತನ್‌ಟಾಟಾ ಕೃತಿಕಾರ ಎಂ.ಎಸ್‌. ಬದಾಮಿ ಸಂವಾದದಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಮ. ಕೃ. ಮೇಗಾಡಿ ಮಾತನಾಡಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಕನ್ನಡದ ಮನಸ್ಸುಗಳನ್ನು ಮುಟ್ಟಿ, ಎಲ್ಲರ ಸಹಕಾರದೊಂದಿಗೆ ಮನೆ ಮನೆಗಳಲ್ಲಿಯೂ ಕನ್ನಡದಕಂಪನ್ನು ಆರಳಿಸಿದೆ. ಇನ್ನೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವತ್ತ ಗಮನಹರಿಸಲಾಗುವುದು ಎಂದರು. ತಿಂಗಳ ಕಾರ್ಯಕ್ರಮದಲ್ಲಿ ಪುಸ್ತಕಾವಲೋಕನ ಕಾರ್ಯಕ್ರಮದಲಿ ್ಲಉಪನ್ಯಾಸ ನೀಡಿದಎಲ್ಲ ಉಪನ್ಯಾಸಕರನ್ನು ಮತು ್ತಕಾರ್ಯಕ್ರಮ ಆಯೋಜಿಸಿದ ಐವತ್ತು ಮನೆಯ ಕನ್ನಡ ಮನಸ್ಸುಗಳನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ವಿಜಯ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಶಿವಾನಂದ ದಾಶಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕೃಷಿಕ ತಮ್ಮಣ್ಣಗಿರಡ್ಡಿ, ಬಸವಪ್ರಭು ಹಟ್ಟಿ, ಯಶವಂತ ವಾಜಂತ್ರಿ, ವಿಶ್ವಜಕಾಡದೇವರ, ಬಸವರಾಜ ಮೇಟಿ, ಶಿಕ್ಷಣ ತಜ್ಞ  ಬಸವರಾಜ ಕೊಣ್ಣೂರ, ತೇರದಾಳ ಕಸಾಪ ಅಧ್ಯಕ್ಷಗಂಗಾಧರ ಮೋಪಗಾರ, ದಾನಪ್ಪ ಆಸಂಗಿ, ರಾಮಣ್ಣಾಕೊಣ್ಣೂರ, ಎಂ. ಬಿ. ಇಂಡಿ, ಗುರುನಾಥ ಸುತಾರ,  ಶ್ರೀಶೈಲ ಬುರ್ಲಿ, ಡಾ. ಡಿ.ಎ. ಬಾಗಲಕೋಟ, ಬಸವರಾಜದಲಾಲ, ದಾಕ್ಷಾಯಣಿ ಮಂಡಿ, ಮಹಾದೇವ ಕವಿಶೆಟ್ಟಿ, ಚಂದ್ರ​‍್ರಭಾ ಬಾಗಲಕೋಟ, ಎಸ್‌. ಬಿ. ಮಟೋಳಿ, ಎ. ಜಿ. ಮಹಾಲಿಂಗಪೂರ, ಮಹಾಶಾಂತ ಶೆಟ್ಟಿ, ಶರಶ್ಚಂದ್ರಜಂಬಗಿ, ಡಾ. ಎಸ್‌. ಎಸ್‌. ಖಾನಾಪುರ, ಭೀಮತಿ ಪಾಟೀಲ, ಚಂದ್ರಶೇಖರ ಹೊಸೂರ, ಸೋಮಶೇಖರ ದುಂಡಪ್ಪ ಕೊಟ್ರಶೆಟ್ಟಿ, ಡಾ.ಜಿ. ಎಚ್‌. ಚಿತ್ತರಗಿ, ಗೌರಿ ಮಿಳ್ಳಿ, ಶಾಂತಾ ಸೋರಗಾಂವಿ, ಪ್ರಭು ಉಮದಿ ಸೇರಿದಂತೆ ಇನ್ನೂ ಅನೇಕರು ಪಾಲ್ಗೊಂಡಿದ್ದರು. ಶಿಕ್ಷಕ ಮಹಾಲಿಂಗ ಚಿಮ್ಮಡ ಪ್ರಾರ್ಥಿಸಿದರು. ಶ್ರೀಶೈಲ ಬುರ್ಲಿ, ಡಾ. ಚಂದ್ರಕಾಂತ ಹೊಸೂರ, ಮಾಧವಾನಂದ ಗುಟ್ಲಿ ನಿರೂಪಿಸಿದರು.