ಶಿಕ್ಷಣಕ್ಕೆ ಹೆಚ್ಚಿನ ಪ್ರಧಾನ್ಯತೆ ಕೊಡಿ : ಗೋವಿಂದ ಕಾರಜೋಳ
Give more priority to education: Govinda Karajola
ಮಹಾಲಿಂಗಪುರ 16: ಆಧುನಿಕತೆ ಬೆಳೆದಂತೆ ಬದುಕು ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಬದಕಲು ಇಂದಿನ ಜನಾಂಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಎಲ್ಲರೂ ಶಿಕ್ಷಣ ಪಡೆದುಕೊಂಡು ಪ್ರಜ್ಞಾವಂತ ಪ್ರಜೆಗಳಾಗಿ ಬದುಕಬೇಕು ಎಂದು ಚಿತ್ರದುರ್ಗದ ಸಂಸತ ಸದಸ್ಯರಾದ ಗೋವಿಂದ ಕಾರಜೋಳ ಹೇಳಿದರು.
ರನ್ನ ಬೆಳಗಲಿಯ ಬಂದಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆದ ಶ್ರೀ ಗುರು ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಮತ್ತು ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ನಾವು ಇಂದು ಶಿಕ್ಷಣ ಕಲಿಯದಿದ್ದರೆ ಕಣ್ಣಿದ್ದು ಕುರುಡರಾಗುತ್ತೇವೆ. ಇಂದಿನ ಯುವ ಜನಾಂಗ ಭವಿಷ್ಯದ ಚಿಂತೆಯನ್ನು ಮಾಡುವ ಅವಶ್ಯಕತೆ ಇದೆ ಏನೇ ಕಷ್ಟ ಇದ್ದರೂ ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರ ಭವಿಷ್ಯವನ್ನು ಉಜ್ಜಲಗೊಳಿಸಿ.
ನಂತರ ಮಾತನಾಡಿದ ಮುಖಂಡರಾದ ಧರೆಪ್ಪ ಸಾಂಗ್ಲಿಕರ ಇಂದಿನ ಮಕ್ಕಳು ಎಷ್ಟು ಬುದ್ದಿವಂತರು ಎಷ್ಟೋ ವಿಷಯಗಳಲ್ಲಿ 100 ಕ್ಕೆ 100 ಪಡೆದುಕೊಂಡಿದ್ದಾರೆ ಅಂದರೆ ನಂಬಲ ಒಂದು ಕ್ಷಣ ಆಗಲೇ ಇಲ್ಲ ಇಷ್ಟು ಜಾಣ ಮಕ್ಕಳನ್ನು ಪಡೆದುಕೊಂಡ ತಂದೆ ತಾಯಿಗಳೇ ಪುಣ್ಯವಂತರು ಎಂದರು.
ನಂತರ ಮಾತನಾಡಿದ ಬೀಳಗಿಯ ಆಶು ಕವಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಿದ್ದಪ್ಪ ಬಿದರಿ ಅಣ್ಣ ಬೆಳೆಯುವ ರೈತನ ಮಕ್ಕಳಿಗೆ ಕನ್ಯಾ ಕೊಡ್ರಿ ಬರಿ ನೌಕರಿದಾರರಿಗೆ ಕೊಡುವ ಕನಸ್ಸು ಕಂಡು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದರು.
ನಂತರ ಮಾತನಾಡಿದ ಸಂಘದ ಚೆರಮನ್ನರಾದ ಪಂಡಿತ ಪೂಜಾರಿ ಯಾರು ತಮ್ಮ ಮಕ್ಕಳನ್ನು ಓದಿಸಲು ಫೀ ಕಟ್ಟಲು ಹಣ ಇಲ್ಲ ಎಂದು ಕೊರಗಬೇಡಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ಅನೇಕ ದಾನಿಗಳು ನಿಮ್ಮ ಮಕ್ಕಳ ಶಾಲೆ ಫೀ ಕಟ್ಟಲು ಮುಂದೆ ಬಂದಿದ್ದಾರೆ ಯಾವುದೇ ಮಗು ಶಿಕ್ಷಣದಿಂದ ವಂಚಿತ ಆಗಬಾರದು ಎಂದರು.
ಸನ್ಮಾನ : ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದುಕೊಂಡ, ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿ ಶಾಲೆಗೆ ಮತ್ತು ಊರಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ, ಶಿಕ್ಷಕ ವೃಂದದವರನ್ನು, ಗಣ್ಯಮಾನ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ರನ್ನ ಬೆಳಗಲಿಯ ಗುರು ಹಿರಿಯರು ತಂದೆ ತಾಯಂದಿರು. ಮಕ್ಕಳು, ಭಾಗವಹಿಸಿದರು ಕಾರ್ಯಕ್ರಮವನ್ನು ಕೆಂದುಳಿ ಗುರುಗಳು ನಿರೂಪಿಸಿದರು. ಶಶಿಧರ ಉಲ್ಲೆಗಡ್ಡಿ ಗುರುಗಳು ಸ್ವಾಗತ ಕೋರಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 