ಹೆಣ್ಣು ಮಕ್ಕಳು ತಮ್ಮ ದೇಹವನ್ನು ಅರಿಯಬೇಕು : ಪ್ರೊ. ರಾಧಾ ಎಂ. ಎನ್
Girls should know their bodies: Prof. Radha M. N
ಹೆಣ್ಣು ಮಕ್ಕಳು ತಮ್ಮ ದೇಹವನ್ನು ಅರಿಯಬೇಕು : ಪ್ರೊ. ರಾಧಾ ಎಂ. ಎನ್
ಮೂಡಲಗಿಯ 30: ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗ ಮತ್ತು ನಾರಿ ಶಕ್ತಿ ಸಮ್ಮಾನ ಪ್ರಶಸ್ತಿ ವಿಜೇತರಾದ ಶ್ರೀಯುತ ಶೋಭಾ ಗಸ್ತಿ ಅವರ ಅಮ್ಮ ಫೌಂಡೇಶನ್ ಹಾಗೂ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ಕಿಶೋರಿಯರಿಗೆ ಆಯೋಜಿಸಿದ್ದ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳು ಹಾಗೂ ಅಂತರ್ಜಾಲ ಸುರಕ್ಷಿತ ಬಳಕೆ ಕುರಿತು ಬದಲಾವಣೆ ಹರಿಕಾರರಿಗೆ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಧಾ ಎಂ. ಎನ್ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಹೆಣ್ಣು ಮಕ್ಕಳು ತಮ್ಮ ದೇಹವನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಹದಿಹರೆಯದವರಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳು ಹಾಗೂ ಮಾನಸಿಕ ತುಮುಲಗಳು ವಯೋಸಹಜವಾಗಿದ್ದು, ಅನಗತ್ಯ ಒತ್ತಡಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸುತ್ತಾ ಋತುಚಕ್ರದ ವಿವಿಧ ಹಂತಗಳನ್ನು ಸಮಗ್ರವಾಗಿ ವಿವರಿಸಿದರು. ಇಂದಿನ ಕಾಲಮಾನದಲ್ಲಿ ಹೆಣ್ಣು ಮಕ್ಕಳು ದಿಟ್ಟತನದಿಂದ ಬದುಕಲು ಬೇಕಾದ ಸಲಹೆಗಳನ್ನು ನೀಡಿದರು.ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ತೊಂದರೆಗಳ ಕುರಿತು ಪ್ರೊ. ಚೇತನ್ ರಾಜ್ ಅವರು ಮಾತನಾಡುತ್ತಾ, ಹೆಣ್ಣು ಮಕ್ಕಳು ತಂತ್ರಜ್ಞಾನ ಬಳಸುವಾಗ ಹೇಗೆ ಜಾಗರೂಕರಾಗಿಬೇಕು ಎಂದು ದೃಷ್ಠಾಂತಗಳ ಸಮೇತ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಮಹೇಶ ಕಂಬಾರ ಅವರು ವಹಿಸಿದ್ದರು. ಚಿಲ್ಡ್ರನ್ ಗುಡ್ ಯೋಜನೆಯ ಶ್ರೀಮತಿ ಮಂಜುಳಾ ಹರಿಜನ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿಲ್ಡ್ರನ್ ಗುಡ್ ಯೋಜನೆಯ ಸಂಯೋಜಕರಾದ ಶ್ರೀ ಯಲ್ಲಪ್ಪ ಮಾದರ, ಶ್ರೀಮತಿ ಲಕ್ಷ್ಮೀ ಹತ್ತರಕಿ, ಚಿಕ್ಕೋಡಿ, ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ವಿವಿಧ ಗ್ರಾಮಗ
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 